Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೆಬ್ರವರಿ 1ಕ್ಕೆ 'ಬಜಾರ್'ಗೆ ಬರ್ತಿದೆ 'ಅನುಕ್ತ'
ಎಲ್ಲ ಅಂದುಕೊಂಡಂತೆ ಆಗಿದ್ದರೇ ಜನವರಿ 11ರಂದು ಸಂಪಲ್ ಸುನಿ ನಿರ್ದೇಶನದ 'ಬಜಾರ್' ಸಿನಿಮಾ ತೆರೆಗೆ ಬರಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು.
ಈಗ ಬಜಾರ್ ಚಿತ್ರದ ರಿಲೀಸ್ ದಿನಾಂಕ ಪಕ್ಕಾ ಆಗಿದ್ದು, ಸ್ವತಃ ನಿರ್ದೇಶಕರೇ ಘೋಷಿಸಿದ್ದಾರೆ. ಸಫೆಬ್ರವರಿ 1ರಂದು ಬಜಾರ್ ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ. 'ಬಜಾರ್' ಚಿತ್ರದ ಜೊತೆಗೆ ಕನ್ನಡದ ಮತ್ತೊಂದು ನಿರೀಕ್ಷೆಯ ಚಿತ್ರದ ತೆರೆಕಾಣುತ್ತಿದೆ.
'ಬಜಾರ್' ನಲ್ಲಿ ಸದ್ದು ಮಾಡ್ತಿದೆ ಲವ್ ಫೆಲ್ಯೂರ್ ಹಾಡು
ಹೌದು, ಅನುಪ್ರಭಾಕರ್, ಸಂಪತ್ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಅನುಕ್ತ' ಚಿತ್ರವೂ ಫೆಬ್ರವರಿ 1ರಂದೇ ಪ್ರೇಕ್ಷಕರೆದುರು ಬರ್ತಿದೆ.
ಈ ಎರಡು ಚಿತ್ರಗಳು ವಿಭಿನ್ನ ಕಥೆ, ವಿಭಿನ್ನ ಟ್ರೈಲರ್ ಮೂಲಕ ಭರವಸೆ ಮೂಡಿಸಿದೆ. ಒಂದು ಪಕ್ಕಾ ಮಾಸ್ ಆಗಿದ್ದು, ಇನ್ನೊಂದು ಚಿತ್ರ ಕ್ಲಾಸ್ ಆಗಿದೆ. ಹಾಗಾಗಿ, ಒಂದೇ ದಿನ ಎರಡು ರೀತಿಯ ಮನರಂಜನೆ ಕನ್ನಡ ಪ್ರೇಕ್ಷಕರಿಗೆ ಸಿಗಲಿದೆ.
ಅಂದ್ಹಾಗೆ, ಈಗಾಗಲೇ ಟ್ರೈಲರ್ ಮೂಲಕ ಅಬ್ಬರಿಸಿರುವ ಬಜಾರ್ ಸಿನಿಮಾದಲ್ಲಿ ಧನ್ ವೀರ್ ನಾಯಕನಾಗಿದ್ದು, ಇದು ಇವರ ಮೊದಲ ಸಿನಿಮಾ. ಧನ್ವೀರ್ಗೆ ನಾಯಕಿಯಾಗಿ ಅದಿತಿ ಪ್ರಭುದೇವಾ ನಟಿಸಿದ್ದಾರೆ. ಇನ್ನುಳಿದಂತೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
ಇನ್ನು ಅನುಕ್ತ ಚಿತ್ರದ ಬಗ್ಗೆ ಹೇಳುವುದಾದರೇ, ಅಶ್ವಥ್ ಸ್ಯಾಮುಯಲ್ ಚಿತ್ರಕಥೆ ರಚಿಸಿ, ನಿರ್ದೇಶನ ಮಾಡಿದ್ದಾರೆ. ಸಂತೋಷ್ ಕುಮಾರ್ ಕೊಂಚಾಡಿ ನಾಯಕ ನಟನಾಗಿದ್ದು, ಸಂಪತ್ ರಾಜ್ ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಂಗೀತಾ ಭಟ್, ಅನು ಪ್ರಭಾಕರ್, ಶ್ರೀಧರ್, ಉಷಾ ಭಂಡಾರಿ, ಚಿದಾನಂದ ಪೂಜಾರಿ, ಅನಿಲ್ ನೀನಾಸಂ, ರಮೇಶ್ ರೈ ಮುಂತಾದವರು ಚಿತ್ರದ ಇತರೆ ಪಾತ್ರಗಳಾಗಿ ಬಣ್ಣ ಹಚ್ಚಿದ್ದಾರೆ.