For Quick Alerts
  ALLOW NOTIFICATIONS  
  For Daily Alerts

  ಈ ವಾರ ತೆರೆಗೆ ಬರುತ್ತಿರುವ ಚಿತ್ರಗಳಿವು: ನಿಮ್ಮ ಆಯ್ಕೆ ಯಾವುದು.?

  |

  ಶುಕ್ರವಾರ ಬಂತು ಅಂದ್ರೆ ಸಿನಿಮಾ ಪ್ರೇಮಿಗಳಿಗೆ ಹಬ್ಬ. ಯಾಕಂದ್ರೆ, ಪ್ರತಿ ಶುಕ್ರವಾರ ಒಂದಲ್ಲಾ ಒಂದು ಚಲನಚಿತ್ರ ತೆರೆಗೆ ಬಂದೇ ಬರುತ್ತೆ. ಪ್ರತಿ ನಿತ್ಯದ ಆಫೀಸ್ ಟೆನ್ಷನ್, ಫ್ಯಾಮಿಲಿ ಜಂಜಾಟದ ಮಧ್ಯೆ ಮನರಂಜನೆ ಬೇಕು ಅಂತ ಬಯಸುವವರಿಗೆ ಶುಕ್ರವಾರ 'ಶುಭ' ತಂದ ಹಾಗೆ.

  ಕಳೆದ ವಾರ 'ಯುವರಾಜ' ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಬಿಡುಗಡೆ ಆಗಿತ್ತು. ಥಿಯೇಟರ್ ಗಳಲ್ಲಿ 'ಸೀತಾರಾಮ ಕಲ್ಯಾಣ' ಅಬ್ಬರ ಇನ್ನೂ ಜೋರಾಗಿದೆ. ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್ ಟೇನರ್ ಚಿತ್ರ ಇದಾಗಿರುವ ಕಾರಣ, ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ ಕಡೆಗೆ ಮುಖ ಮಾಡುತ್ತಿದ್ದಾರೆ.

  'ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಸ್ಪರ್ಧೆ ನೀಡಲು ಈ ವಾರ ಮೂರು ಚಿತ್ರಗಳು ರಿಲೀಸ್ ಆಗುತ್ತಿವೆ. 'ಬಜಾರ್', 'ಮಟಾಶ್' ಮತ್ತು 'ಅನುಕ್ತ' ಈ ವಾರ ನಿಮ್ಮ ಮುಂದೆ ಬರುತ್ತಿವೆ. ಈ ಮೂರು ಚಿತ್ರಗಳ ಪೈಕಿ ನಿಮ್ಮ ಆಯ್ಕೆ ಯಾವುದು.?

  ತೆರೆಗೆ ಬರುತ್ತಿದೆ 'ಬಜಾರ್'

  ತೆರೆಗೆ ಬರುತ್ತಿದೆ 'ಬಜಾರ್'

  ಸಿಂಪಲ್ ಸುನಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ 'ಬಜಾರ್' ಚಿತ್ರಕ್ಕೆ ಧನ್ವೀರ್ ನಾಯಕ, ಅದಿತಿ ಪ್ರಭುದೇವ ನಾಯಕಿ. ಸಾಧು ಕೋಕಿಲ, ಶರತ್ ಲೋಹಿತಾಶ್ವ, ಚೇತನ್ ಚಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. 'ಬಜಾರ್'ನಲ್ಲಿ ಲವ್ ಸ್ಟೋರಿ ಮತ್ತು ಪಂಚಿಂಗ್ ಡೈಲಾಗ್ಸ್ ಅಂತೂ ಇದ್ದೇ ಇರುತ್ತೆ. ಟ್ರೈಲರ್ ಮೂಲಕ ಕುತೂಹಲ ಕೆರಳಿಸಿರುವ 'ಬಜಾರ್' ಚಿತ್ರವನ್ನು ನೋಡಲು ನೀವು ರೆಡಿನಾ.?

  ಮುಂದಕ್ಕೆ ಹೋದ ಬಜಾರ್: ಕಾರಣ ಗೌಪ್ಯವಾಗಿಟ್ಟ ಸುನಿ

  ರಿಲೀಸ್ ಆಗುತ್ತಿದೆ 'ಮಟಾಶ್'

  ರಿಲೀಸ್ ಆಗುತ್ತಿದೆ 'ಮಟಾಶ್'

  ಸಮರ್ಥ ನರಸಿಂಹರಾಜು, ಐಶ್ವರ್ಯ ಸಿಂಧೋಗಿ, ವಿ.ಮನೋಹರ್ ಸೇರಿದಂತೆ ಹಲವರು ನಟಿಸಿರುವ 'ಮಟಾಶ್' ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. 'ಮಟಾಶ್' ಸಿನಿಮಾಗೆ ನಿರ್ದೇಶನದ ಜವಾಬ್ದಾರಿ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ ಎಸ್.ಡಿ.ಅರವಿಂದ್. ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ 'ಮಟಾಶ್' ಚಿತ್ರವನ್ನು ನೀವು ನೋಡ್ತೀರಾ.?

  ಫೆಬ್ರವರಿ 1ಕ್ಕೆ 'ಬಜಾರ್'ಗೆ ಬರ್ತಿದೆ 'ಅನುಕ್ತ'

  ನಿಮ್ಮ ಮುಂದೆ ಬರಲಿದೆ 'ಅನುಕ್ತ'

  ನಿಮ್ಮ ಮುಂದೆ ಬರಲಿದೆ 'ಅನುಕ್ತ'

  ಹರೀಶ್ ಬಂಗೇರ ನಿರ್ಮಿಸಿರುವ ಅಶ್ವತ್ಥ್ ಸ್ಯಾಮುಯೆಲ್ ನಿರ್ದೇಶನ ಮಾಡಿರುವ 'ಅನುಕ್ತ' ಇದೇ ವಾರ ರಿಲೀಸ್ ಆಗಲಿದೆ. ನೊಬಿನ್ ಪೌಲ್ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಕಾರ್ತಿಕ್ ಅತ್ತಾವರ್, ಸಂಗೀತ ಭಟ್, ಅನು ಪ್ರಭಾಕರ್ ಮುಖರ್ಜಿ, ಉಷಾ ಭಂಡಾರಿ ನಟಿಸಿದ್ದಾರೆ.

  ನಿಮ್ಮ ಆಯ್ಕೆ ಯಾವುದು.?

  ನಿಮ್ಮ ಆಯ್ಕೆ ಯಾವುದು.?

  'ಬಜಾರ್', 'ಮಟಾಶ್' ಮತ್ತು 'ಅನುಕ್ತ'... ಈ ಮೂರು ಚಿತ್ರಗಳಲ್ಲಿ ಯಾವುದನ್ನು ನೀವು ನೋಡ್ತೀರಾ.? ನಿಮ್ಮ ಆಯ್ಕೆ ಯಾವುದು ಅಂತ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bazaar, Matash and Anuktha movies are releasing on Feb 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X