ಮುಂದಕ್ಕೆ ಹೋದ ಬಜಾರ್: ಕಾರಣ ಗೌಪ್ಯವಾಗಿಟ್ಟ ಸುನಿ
ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಮೂಲಕ ಸದ್ದು ಮಾಡ್ತಿರುವ ಬಜಾರ್ ಸಿನಿಮಾ ಇದೇ ತಿಂಗಳು ತೆರೆಕಾಣಬೇಕಿತ್ತು. ಆದ್ರೀಗ, ಬಿಡುಗಡೆ ದಿನಾಂಕವನ್ನ ಮುಂದಕ್ಕೆ ಹಾಕಿಕೊಂಡಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೇ ಜನವರಿ 11ನೇ ತಾರೀಖು ಬಜಾರ್ ಚಿತ್ರ ಬಿಡುಗಡೆಯಾಗಬೇಕಿತ್ತು. ಬಟ್, ಆ ದಿನಕ್ಕೆ ಸಿನಿಮಾ ಬರ್ತಿಲ್ಲ ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ. ದಿಡೀರ್ ಅಂತ ಪೋಸ್ಟ್ ಪೋನ್ ಮಾಡಲು ಕಾರಣವನ್ನ ಬಿಟ್ಟುಕೊಟ್ಟಿಲ್ಲ.
ಧನ್ ವೀರ್ ಈ ಚಿತ್ರದ ನಾಯಕನಾಗಿದ್ದು, ಇದು ಇವರ ಮೊದಲ ಸಿನಿಮಾ. ಧನ್ವೀರ್ಗೆ ನಾಯಕಿಯಾಗಿ ಅದಿತಿ ಪ್ರಭುದೇವಾ ನಟಿಸಿದ್ದಾರೆ.
ಸಿನಿಮಾದಲ್ಲಿ ಪಾರಿವಾಳ ರೇಸ್ ನಿಂದ ಬೆಂಗಳೂರಿನಲ್ಲಿ ಭೂಗತ ಜಗತ್ತು ಹೇಗೆ ಬೆಳೀತು, ಇಲ್ಲಿ ಗಿರೇಬಾಜಿಯಲ್ಲಿ ಹೀರೋ ಹೇಗೆ ಬೆಳೀತಾನೆ, ನಡುವಿನ ಲವ್ ಸ್ಟೋರಿ ಹೇಗಿರುತ್ತೆ ಅನ್ನೋ ಕಥೆ ಹೇಳಲಿದೆ ಬಜಾರ್.

ಇನ್ನುಳಿದಂತೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ಜನವರಿ 11ರಿಂದ ಹಿಂದಕ್ಕೆ ಸರಿದರಿರುವ ಬಜಾರ್, ಮುಂದಿನ ದಿನಾಂಕವನ್ನ ಸದ್ಯದಲ್ಲೇ ತಿಳಿಸಲಿದೆ.


Click it and Unblock the Notifications











