ಸ್ಕೆಚ್‌ ಹಾಕಿ ನಮ್ಮನ್ನು ಕೊಲ್ಲೋಕೆ ಸಾಧ್ಯವೇ ಇಲ್ಲ- ಚೈತ್ರಾ ಕುಂದಾಪುರ..!

ಹಿಂದೂತ್ವವನ್ನು ಕಣ ಕಣದಲ್ಲಿ ತುಂಬಿಕೊಂಡು, ಕರಾವಳಿಯ ಫೈರ್ ಬ್ರ್ಯಾಂಡ್‌ ಎಂದೇ ಕರುನಾಡಿನೆಲ್ಲೆಡೆ ಹೆಸರುವಾಸಿಯಾದವರು ಚೈತ್ರಾ ಕುಂದಾಪುರ. ಮಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದು ಆ ನಂತರ ನಿರೂಪಕಿಯಾಗಿಯೂ ಕೆಲಸವನ್ನು ಮಾಡಿದ ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮತಿಯ ಸದಸ್ಯೆ ಕೂಡ ಆಗಿದ್ದವರು. ಇನ್ನೂ ಪ್ರೇಮ ಪಾಶ ಎಂದ ಕೃತಿಯ ಲೇಖಕಿ ಕೂಡ ಹೌದು ಚೈತ್ರಾ ಕುಂದಾಪುರ.

ಇಂಥಾ ಚೈತ್ರಾ ಕುಂದಾಪುರ ಸದ್ಯ ತಮ್ಮ ಹನ್ನೆರಡು ವರ್ಷಗಳ ಪ್ರೀತಿಗೆ ಇತ್ತೀಚೆಗೆ ಮದುವೆಯ ಮುದ್ರೆ ಒತ್ತಿದ್ದಾರೆ. ತಮ್ಮ ಪತಿ ದೈವ ಶ್ರೀಕಾಂತ್ ಕಶ್ಯಪ್ ಜೊತೆ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದಾರೆ. ಈ ನೆಮ್ಮದಿಗೆ ಅವರ ಹೆತ್ತ ತಂದೆಯೇ ಕೊಳ್ಳಿ ಇಡುವ ಪ್ರಯತ್ನ ಮಾಡಿದಾರದರೂ ಆ ವಿಚಾರಗಳಿಗೆಲ್ಲ ಚೈತ್ರಾ ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ.

BBK 11 Fame Chaitra Kundapura Raises Alarm We re Being Targeted But No One Can Sketch Our End

ಬದಲಿಗೆ ತಮ್ಮ ಸಾಂಸಾರಿಕ ಜೀವನದ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ತಮ್ಮ ವ್ಯೆಯಕ್ತಿಕ ಬದುಕಿನ ಕುರಿತು ಮಾತನಾಡಿದ್ದಾರೆ. ಜೀವ ಬೆದರಿಕೆಯ ಕುರಿತು ಮಾತನಾಡಿದ್ದಾರೆ. ನನ್ನ ವಿರೋಧಿಗಳು ಸ್ಕೆಚ್ ಹಾಕಿ ನನ್ನ ಹೊಡೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಹೌದು. ನ್ಯೂಸೋ ನ್ಯೂಸು ಯೂಟ್ಯೂಬ್ ಚಾನೆಲ್ ಗೆ ತಮ್ಮ ಪತಿ ಶ್ರೀಕಾಂತ್ ಜೊತೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಮಾತನಾಡಿರುವ ಚೈತ್ರಾ ಕುಂದಾಪುರ ಈಗೀಗ ಅಂದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿ ಬಂದ ನಂತರ ಬೆದರಿಕೆ ಕರೆಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ. ಮೊದಲೆಲ್ಲ ಅಂದರೆ ಈಗ 07-08 ವರ್ಷದ ಹಿಂದೆ ತುಂಬಾನೇ ಬೆದರಿಕೆ ಕರೆಗಳು ನಮಗೆ ಬರುತ್ತಿದ್ದವು ಎಂದಿರುವ ಚೈತ್ರಾ ಕುಂದಾಪುರ ನನಗೆ ಮಾತ್ರವಲ್ಲ ಶ್ರೀಕಾಂತ್‌ಗೆ ಕೂಡ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಹೇಳಿದ್ದಾರೆ.

ಬೆದರಿಕೆಗೆ ಕರೆಗಳು ಬಂದಾಗೆಲ್ಲ ನಾವು ಅದನ್ನು ತುಂಬಾ ಫನ್ ಆಗಿ ತೆಗೆದುಕೊಳ್ಳುತ್ತಿದ್ದೇವು ಎಂದು ಹೇಳಿರುವ ಚೈತ್ರಾ ಅವರು ನಮಗೆ ಅವಾಜ್ ಹಾಕಿದಾಗ ಆಯ್ತು ಬಾ ನಾವು ಬರ್ತೀವಿ ಎಂದು ಅವರಿಗೆ ಹೇಳಿದ್ದು ಇದೆ ಎಂದು ಹೇಳಿದ್ದಾರೆ.ಇದಕ್ಕೆ ಶ್ರೀಕಾಂತ್ ಅವರು ಕೂಡ ಧ್ವನಿಗೂಡಿಸಿದ್ದು ಮೂರು ನಾಲ್ಕು ವರ್ಷದ ಹಿಂದೆ ನಮ್ಮ ಮೇಲೆ ಹಲ್ಲೆಗಳಾಗಿವೆ ಎಂದು ಹೇಳಿದ್ದಾರೆ.

ಮುಂದುವರೆದು ನಾವು ಇಬ್ಬರೇ ಎಲ್ಲಿಯೂ ಹೋಗಲ್ಲ, ನಾಲ್ಕೈದು ಹುಡುಗರು ಜೊತೆಯಲ್ಲಿಯೇ ಇರ್ತಾರೆ ಎಂದು ಹೇಳಿರುವ ಚೈತ್ರಾ ಕುಂದಾಪುರ ಮತ್ತು ಅವರ ಪತಿ ಶ್ರೀಕಾಂತ್ ಬದುಕುವುದು ಇರಬಹುದು ಅಥವಾ ಸಾಯುವುದು ಇರಬಹುದು ಅದು ಭಗವಂತನ ಇಚ್ಛೆ. ಮನುಷ್ಯ ಪ್ಲ್ಯಾನ್‌ ಮಾಡೋಕಾಗಲ್ಲ ಅಥವಾ ವಿರೋಧಿಗಳು ಪ್ಲ್ಯಾನ್‌ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ.

ಸ್ಕೆಚ್‌ ಹಾಕಿ ನಮ್ಮನ್ನು ಕೊಲ್ಲೋಕೆ ಸಾಧ್ಯವೇ ಇಲ್ಲ. ಆಯುಷ್ಯ ತೀರಿದರೆ ನಾವು ಸಾಯ್ತೀವಿ ಎಂದು ಹೇಳಿರುವ ಇಬ್ಬರು ಅವನಿಂದನೇ ಸಾಯಬೇಕು ಎಂದು ಬರೆದಿದ್ದರೆ ಅವನಿಂದನೇ ಸಾಯ್ತೀವಿ ಅದರಲ್ಲಿ ವಿಶೇಷ ಏನು ಇಲ್ಲ ಎಂದು ಹೇಳಿದ್ದಾರೆ. ಪೂರ್ವ ನಿರ್ಧರಿತವಾದ ಸಾವಿಗೆ ಹೆದರಿ ನಾವು ಇವತ್ತಿನ ನೆಮ್ಮದಿಯನ್ನು ಕಳೆದುಕೊಳ್ಳುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಇವತ್ತು ನಾವು ಚೆನ್ನಾಗಿ ಬದುಕುತ್ತೀವಿ ಎಂದು ಹೇಳಿದ್ದಾರೆ.

ಇನ್ನು ಇದೇ ಸಂದರ್ಶನದಲ್ಲಿ ತಮ್ಮ ಮೇಲೆ ಬಂದ ಆರೋಪ, ತಮ್ಮ ಜೈಲು ವಾಸದ ಕುರಿತು ಕೂಡ ಮಾತನಾಡಿರುವ ಚೈತ್ರಾ ಕುಂದಾಪುರ ಪ್ರತಿಯೊಂದು ಬಾರಿಯೂ ಕೂಡ ನನ್ನ ಮೇಲೆ ಅಪಾದನೆ ಬಂದಾಗ, ಇನ್ನೇನು ಚೈತ್ರಾ ಕುಂದಾಪುರ ಕಥೆ ಮುಗೀತು ಎಂದು ಎಲ್ಲ ಅಂದುಕೊಂಡಾಗ ನಾನು ಫೀನಿಕ್ಸ್‌ನಂತೆ ಎದ್ದು ಬಂದಿದ್ದೇನೆ ಎಂದು ಕೂಡ ಚೈತ್ರಾ ಕುಂದಾಪುರ ಹೇಳಿದ್ದಾರೆ. ಹೆಚ್ಚಿನ ವಿವರಗಳು ನ್ಯೂಸೋ ನ್ಯೂಸು ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ ಇವೆ. ಆಸಕ್ತರು ಗಮನಿಸಬಹುದು.

More from Filmibeat

English summary
Hindutva supporter and BBK 11 fame Chaitra Kundapura claims efforts are being made to frame her, but insists no one can ‘sketch’ their downfall.
Read more about: filmibeat news bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X