CCL 2025 ; ಸಿಸಿಎಲ್‌ ಅಖಾಡಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ರನ್ನರ್ ಅಪ್ ತ್ರಿವಿಕ್ರಮ್, ಸ್ವಾಗತ ಕೋರಿದ ಸುದೀಪ್

ಸಿಸಿಎಲ್‌ ಶುರುವಾಗುವ ಸಮಯದಲ್ಲಿ ಪ್ರತಿ ಬಾರಿ ಕುತೂಹಲ ಮನೆ ಮಾಡುತ್ತೆ. ಸಂಭ್ರಮದ ವಾತಾವರಣ ಕೂಡ ನಿರ್ಮಾಣವಾಗುತ್ತೆ. ಈ ಬಾರಿ ಕಪ್ ಯಾರದ್ದು ಎನ್ನುವ ಪ್ರಶ್ನೆ ಕೂಡ ಕೇಳಿ ಬರಲು ಶುರುವಾಗುತ್ತೆ. ಯಾಕೆಂದರೆ, ಸಿಸಿಎಲ್ ಯಾವ ಐಪಿಎಲ್‌ಗಿಂತ ಕಡಿಮೆ ಇಲ್ಲ. ಇಲ್ಲಿಯೂ ಅದೇ ಕಿಚ್ಚಿರುತ್ತೆ. ಗೆಲ್ಲುವ ಹುಚ್ಚಿರುತ್ತೆ. ರನ್ ಗಳಿಸಲು, ವಿಕೆಟ್ ಕಬಳಿಸಲು ಇಲ್ಲಿಯೂ ಕೂಡ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿರುತ್ತೆ. ಕಳೆದ ಹತ್ತು ವರ್ಷಗಳಿಂದ ಸಿಸಿಎಲ್ ಯಶಸ್ವಿಯಾಗಿ ಮುನ್ನಡೆದುಕೊಂಡು ಬಂದಿರುವುದೇ ಸಿಸಿಎಲ್‌ನ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

ಇಂಥಾ ಸಿಸಿಎಲ್‌ನಲ್ಲಿ ಈ ಬಾರಿ ಕೂಡ ಕರ್ನಾಟಕ ಬುಲ್ದೋಜರ್ಸ್ ತಂಡ ಕಣಕ್ಕಿಳಿಯಲಿದೆ. ಕಪ್ ಗೆಲ್ಲುವ ಉದ್ದೇಶದಿಂದ ಈಗಾಗಲೇ ಅನೇಕ ದಿನಗಳಿಂದ ಸುದೀಪ್ ಸಾರಥ್ಯದ ತಂಡ ಬೆವರನ್ನು ಸುರಿಸುತ್ತಿದೆ. ಹೀಗಿರುವಾಗ ಈಗ ಅಖಾಡಕ್ಕೆ ಬಿಗ್ ಬಾಸ್ ರನ್ನರ್ ಅಪ್ ತ್ರಿವಿಕ್ರಮ್ ಎಂಟ್ರಿಯನ್ನು ನೀಡಿದ್ದಾರೆ.

BBK 11 runner-up Trivikram joined Karnataka Bulldozers practice ahead of their first CCL match

ಹೌದು, ಅಸಲಿಗೆ ತಂಡದಲ್ಲಿ ಹೆಸರಿದ್ದರು ಕೂಡ ಈ ಬಾರಿ ಬಿಗ್ ಬಾಸ್ ನ ರನ್ನರ್ ಅಪ್ ತ್ರಿವಿಕ್ರಮ್ ಆಡುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿತ್ತು. ಯಾಕೆಂದರೆ.. ಬಿಗ್ ಬಾಸ್ ಮನೆಯಲ್ಲಿದ್ದ ಕಾರಣ ತ್ರಿವಿಕ್ರಮ್ ಅವರಿಗೆ ಅಭ್ಯಾಸವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಇನ್ನು ಮಳೆ ನಿಂತು ಹೋದ ಮೇಲೂ ಹನಿಯೊಂದು ಮೂಡಿದೆ ಎಂಬಂತೆ ಬಿಗ್ ಬಾಸ್ ಕಾರ್ಯಕ್ರಮ ಮುಗಿದರೂ ಕೂಡ ಸ್ಫರ್ಧಿಗಳಿಗೆ ಆ ಗುಂಗಿನಿಂದ ಹೊರ ಬರಲು ಅನೇಕ ದಿನಗಳೇ ಬೇಕು. ಸಂದರ್ಶನಗಳನ್ನು ನೀಡಿ ನೀಡಿಯೇ ಸ್ಫರ್ಧಿಗಳು ಸುಸ್ತಾಗಿರುತ್ತಾರೆ.

ಹೀಗಾಗಿಯೇ ತ್ರಿವಿಕ್ರಮ್ ಈ ಬಾರಿ ಸಿಸಿಎಲ್‌ ಆಡುವುದು ಅನುಮಾನ ಎಂದೇ ಎಲ್ಲರು ಭಾವಿಸಿದ್ದರು. ನಿಜಾ ಸುದೀಪ್ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತ್ರಿವಿಕ್ರಮ್ ಈ ಬಾರಿ ಕೂಡ ಇರ್ತಾರೆ, ಪ್ರ್ಯಾಕ್ಟೀಸ್ ಮ್ಯಾಚ್‌ಗೆ ಬರ್ತಾರೆ ಎಂದು ಹೇಳಿದ್ದರು. ಆದರೂ ಕೂಡ ಅನುಮಾನದ ಬೀಜ ಹಾಗೇ ಇತ್ತು. ಈಗ ಈ ಅನುಮಾನವನ್ನು ಕರ್ನಾಟಕ ಬುಲ್ದೋಜರ್ಸ್ ತಂಡ ದೂರ ಮಾಡಿದೆ. ತಮ್ಮ ತಂಡಕ್ಕೆ ತ್ರಿವಿಕ್ರಮ್ ಅವರಿಗೆ ಅಧಿಕೃತವಾಗಿ ಸ್ವಾಗತವನ್ನು ಕೋರಿದೆ.

ಇನ್ನು ಪ್ರಾಕ್ಟೀಸ್‌ಗೆ ಬಂದ ಬಿಗ್ ಬಾಸ್ ರನ್ನರ್ ಅಪ್‌ ತ್ರಿವಿಕ್ರಮ್ ಅವರಿಗೆ ಕಿಚ್ಚ ಸುದೀಪ್ ಆತ್ಮೀಯವಾಗಿ ವೆಲ್‌ಕಂ ಮಾಡಿದ್ದಾರೆ. ತ್ರಿವಿಕ್ರಮ್‌ಗೆ ತಾವೇ ಸ್ವತ: ಕ್ಯಾಪ್ ಹಾಕಿದ್ದಾರೆ. ಅಂದ್ಹಾಗೇ ಈ ಫೆಬ್ರವರಿ 8ರಿಂದ ಶುರುವಾಗಲಿರುವ ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ದೋಜರ್ಸ್ ತಂಡ ತೆಲುಗು ವಾರಿಯರ್ಸ್‌ಗೆ ಸವಾಲು ಹಾಕಲಿದೆ. ಅವತ್ತು ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರೈನ್ಹೋಸ್ ಮತ್ತು ಬೆಂಗಾಲ್ ಟೈಗರ್ಸ್ ನಡುವೆ ಮೊದಲ ಪಂದ್ಯ ನಡೆಯಲಿದ್ದು ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ಎರಡನೇ ಪಂದ್ಯದಲ್ಲಿ ಸೆಣಸಾಡಲಿವೆ.

ಕರ್ನಾಟಕ ಬುಲ್ಡೋಜರ್ಸ್ ತಂಡ

ಕಿಚ್ಚ ಸುದೀಪ್, ಗಣೇಶ್, ಡಾರ್ಲಿಂಗ್ ಕೃಷ್ಣ, ಕಾರ್ತಿಕ್ ಜಯರಾಮ್, ಸುನಿಲ್ ರಾವ್, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ತ್ರಿವಿಕ್ರಮ್, ಅಲಕಾನಂದ

ಕರ್ನಾಟಕ ಬುಲ್ಡೋಜರ್ಸ್ ಪಂದ್ಯಗಳು

ಫೆಬ್ರವರಿ 8: ಕರ್ನಾಟಕ ಬುಲ್ಡೋಜರ್ಸ್ Vs ತೆಲುಗು ವಾರಿಯರ್ಸ್, ಬೆಂಗಳೂರು
ಫೆಬ್ರವರಿ 14: ಕರ್ನಾಟಕ ಬುಲ್ಡೋಜರ್ಸ್ Vs ಚೆನ್ನೈ ರಿನೋಸ್, ಹೈದರಾಬಾದ್
ಫೆಬ್ರವರಿ 15: ಕರ್ನಾಟಕ ಬುಲ್ಡೋಜರ್ಸ್ Vs ಮುಂಬೈ ಹೀರೋಸ್, ಹೈದರಾಬಾದ್
ಫೆಬ್ರವರಿ 22: ಕರ್ನಾಟಕ ಬುಲ್ಡೋಜರ್ಸ್ Vs ಪಂಜಾಬ್ ಶೇರ್, ಸೂರತ್

More from Filmibeat

Read more about: ccl 2025 sudeep filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X