ಶ್ರೇಷ್ಠತೆಯ ಸೊಕ್ಕು ; ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಹಾಡು ಹಾಕಿದ ಡಾಗ್ ಸತೀಶ್ - ರಜತ್, ವಿನಯ್ ಗೌಡ ಧಗಧಗ

''ಬಿಗ್ ಬಾಸ್‌'' ಮನೆಗೆ ಹೋಗಿ ಬಂದ ಬಹುತೇಕರು ದೇಶ ಗೆದ್ದು ಬಂದವರಂತೆ ಬೀಗುತ್ತಾರೆ. ತಲೆ ನಿಲ್ಲದವರಂತೆ ವರ್ತಿಸುತ್ತಾರೆ. ಜನಪ್ರಿಯತೆ ಸಿಕ್ಕ ತಕ್ಷಣ ಮೈ ಮರೆಯುತ್ತಾರೆ. ಕಾರ್ಯಕ್ರಮದಲ್ಲಿ ಇವರನ್ನು ಕ್ಯಾರೇ ಕೂಡ ಅಂದಿರುವುದಿಲ್ಲ. ಆದರೂ ಕೂಡ ಮನೆಯಿಂದ ಹೊರಗಡೆ ಬಂದ ತಕ್ಷಣ ತಾವೂ ಕೂಡ ಸೆಲೆಬ್ರಿಟಿ ಎಂಬ ಭ್ರಮೆಯಲ್ಲಿ ಓಡಾಡಲು ಶುರು ಮಾಡುತ್ತಾರೆ.

ಜನಪ್ರಿಯತೆಯ ಅಮಲಿನಲ್ಲಿ ಮಾಡಬಾರದ ಅನಾಚಾರ ಮಾಡುತ್ತಾರೆ. ಸುಖಾ ಸುಮ್ಮನೆ ಕಿರಿಕ್ ಮಾಡುತ್ತಾ, ವಿವಾದಕ್ಕೀಡಾಗುತ್ತಾರೆ. ಬೇರೆಯವರ ತೇಜೋವಧೆ ಮಾಡುವ ಪ್ರಯತ್ನವನ್ನು ಕೂಡ ಮಾಡುತ್ತಾರೆ. ಉದಾಹರಣೆಗೆ ಡಾಗ್ ಸತೀಶ್.

BBK Stars Vinay amp amp Rajath Outraged Dog Sathish Mocks Sudeep in Viral Toilet Video

ಹೌದು, ಡಾಗ್ ಸತೀಶ್ ಅಲಿಯಾಸ್ ಸತೀಶ್ ಕ್ಯಾಡಬಾಮ್ಸ್. ಸಾಮಾಜಿಕ ಜಾಲತಾಣದ ದೃಷ್ಟಿಯಲ್ಲಿ ಬಿಲ್ಡಪ್ ರಾಜಾ. ಕಳೆದ ಬಾರಿ ಮೂರನೇ ಸ್ಪರ್ಧಿಯಾಗಿ ''ಬಿಗ್ ಬಾಸ್'' 12ನೇ ಸೀಸನ್ ಮನೆ ಪ್ರವೇಶ ಮಾಡಿದ್ದ ಖ್ಯಾತ ಡಾಗ್ ಬ್ರೀಡರ್.

ಎಳವೆಯಿಂದಲೇ ನಾಯಿಗಳ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಡಾಗ್ ಸತೀಶ್ ಹತ್ತನೇ ತರಗತಿಯಲ್ಲಿದ್ದಾಗಲೇ ನಾಯಿಗಳ ಮಾರಾಟದಲ್ಲಿ ತೊಡಗಿಕೊಂಡಿದ್ದರು. ಕೋಟ್ಯಂತರ ಮೌಲ್ಯದ ನಾಯಿಗಳನ್ನು ಖರೀದಿಸುವ, ಮಾರಾಟ ಮಾಡುವುದೇ ಇವರ ಉದ್ಯೋಗ. ಖುದ್ದು ಡಾಗ್ ಸತೀಶ್ ''ಬಿಗ್ ಬಾಸ್'' ವೇದಿಕೆಯಲ್ಲಿಈ ಮಾತನ್ನು ಹೇಳಿದ್ದರು.

ಇಂಥಾ ಡಾಗ್ ಸತೀಶ್ ವಿರುದ್ಧ ''ಬಿಗ್ ಬಾಸ್‌''ನ ಸ್ಫರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಕೆರಳಿ ಕೆಂಡವಾಗಿದ್ದಾರೆ. ''ಬಿಗ್ ಬಾಸ್'' ಧನರಾಜ್ ಕೂಡ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಯಾಕೆಂದರೆ ಡಾಗ್ ಸತೀಶ್ ಅವರ ನಡೆ ಸುದೀಪ್ ಅವರಿಗೆ ಅವಮಾನ ಮಾಡುವಂತೆ ಇದೆ.

ಹೌದು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಡಾಗ್ ಸತೀಶ್ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಟಾಯ್ಲೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಇದು. ಇಲ್ಲಿಯೂ ಕೂಡ ಅಣ್ಣ ಸುಸ್ಸು ಮಾಡಿದರೂ ನ್ಯೂಸ್ ಆಗುತ್ತೆ ಎಂದು ಬಿಲ್ಡಪ್ ತೆಗೆದುಕೊಂಡಿರುವ ಡಾಗ್ ಸತೀಶ್ ತಮ್ಮ ಈ ವಿಡಿಯೋಗೆ ಸುದೀಪ್ ಅಭಿನಯದ ''ಮಾರ್ಕ್'' ಚಿತ್ರದ ಚಾರ್ಟ್‌ಬಸ್ಟರ್ ಹಾಡು ''ದಾದಾ ಯಾರ್ ಗೊತ್ತಾ'' ಹಾಡನ್ನು ಬಳಸಿಕೊಂಡಿದ್ದಾರೆ.

BBK Stars Vinay amp amp Rajath Outraged Dog Sathish Mocks Sudeep in Viral Toilet Video

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಬಿಗ್ ಬಾಸ್ ಸ್ಫರ್ಧಿಗಳಾದ ಮತ್ತು ಸುದೀಪ್ ಅವರ ಮೇಲೆ ಅತೀವವಾದ ಅಭಿಮಾನವನ್ನು ಹೊಂದಿರುವ ವಿನಯ್ ಗೌಡ ಮತ್ತು ರಜತ್ ಅವರ ಕಣ್ಣಿಗೆ ಬಿದ್ದಿದೆ. ಹೀಗಾಗಿಯೇ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಇಬ್ಬರು ಏಕವಚನದಲ್ಲಿಯೇ ಡಾಗ್ ಸತೀಶ್ ವಿರುದ್ಧ ಕೆಂಡ ಕಾರಿದ್ದಾರೆ.

ಸುದೀಪ್ ಸರ್ ಸಾಮಗ್ ಹೆಂಗೋ ಹಾಕಿದೆ, ಸಾಂಗ್ ಡಿಲೀಟ್ ಆಗಿಲ್ಲ ಅಂದರೆ ಇದೇ ನಿನಗೆ ಮಗನೇ ಎಂದು ಹೇಳಿರುವ ರಜತ್ ಸುಮ್ಮನೆ ಇದೀವಿ ಅಂತ ಆಟ ಆಡ್ತಿದ್ದೀಯಾ ಎಂದು ಕಿಡಿ ಕಾರಿದ್ದಾರೆ. ಕಾಲ್ ಮಾಡ್ತಿದ್ದೀನಿ ತಾನೇ ಫೋನ್ ಫಿಕ್ ಮಾಡೋಲೇ ಎಂದು ಏಕವಚನದಲ್ಲಿಯೇ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ವಿನಯ್ ಗೌಡ ಕೂಡ ಏಕವಚನದಲ್ಲಿಯೇ ಪ್ರತಿಕ್ರಿಯೆ ನೀಡಿದ್ದು, ಮೊದಲು ಸಾಂಗ್‌ನ ಡಿಲೀಟ್ ಮಾಡು. ಇಲ್ಲ ಕಾದು ನೋಡು..ನಿನ್ನನ್ನು ಜನ ನಾಯಿ ತರಹ ಹೊಡೀತಾರೆ. ಆ ವಿಡಿಯೋನ ನಾನು ಹಾಕ್ತೀನಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಧನರಾಜ್ ಕೂಡ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದು, ಬ್ರದರ್.. ನಾನು ಇದುವರೆಗೂ ಯಾರಿಗೂ ಈ ತರಹ ಕಾಮೆಂಟ್ ಮಾಡಿಲ್ಲ. ನಾನು ಸೌಮ್ಯ ಜೀವಿ. ನೀವು ಬಹಳ ತಪ್ಪು ಮಾಡ್ತಾ ಇದ್ದೀರಾ. ಸುದೀಪ್‌ ಸರ್ ಫ್ಯಾನ್ಸ್ ಬನ್ನಿ ಇಲ್ಲಿ ಎಂದಿದ್ದಾರೆ.

BBK Stars Vinay amp amp Rajath Outraged Dog Sathish Mocks Sudeep in Viral Toilet Video

ಇವರು ಮಾತ್ರವಲ್ಲ ಸಹಜವಾಗಿ ಸುದೀಪ್ ಅಭಿಮಾನಿಗಳು ಖೂಡ ಡಾಗ್ ಸತೀಶ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಕೂಡಲೇ ವಿಡಿಯೋವನ್ನು ಡಿಲೀಟ್ ಮಾಡುವಂತೆ ಹೇಳುತ್ತಿದ್ದಾರೆ. ನಾಯಿಗೆ ಇರುವ ನಿಯತ್ತು ಕೂಡ ನಿಮಗೆ ಇಲ್ವಲ್ಲಾ ಎಂದು ಕಿಡಿ ಕಾರುತ್ತಿದ್ಧಾರೆ. ನೀವೇ ಶ್ರೇಷ್ಠ ಎಂಬ ಸೊಕ್ಕಿನಲ್ಲಿ ಹೀಗೆ ಮಾಡಿದ್ದೀರಾ ಅಥವಾ ಕುಡಿದ ಮತ್ತಿನಲ್ಲಿ ವಿಡಿಯೋ ಹಂಚಿಕೊಂಡಿದ್ದೀರಾ ಎಂಬ ಪ್ರಶ್ನೆಯನ್ನು ಕೂಡ ಹಲವರು ಕೇಳುತ್ತಿದ್ಧಾರೆ.

More from Filmibeat

English summary
"Did 'Dog' Sathish go too far? Fans are absolutely livid after the viral star used the legendary 'Mark' anthem for a bathroom video. Is this a harmless joke or a massive insult to Rajath and Vinay Gowda? See the reactions and the video that sparked the firestorm here
Read more about: biggboss sudeep filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X