ಬೆಳ್ಳಿಪರದೆ ಮೇಲೆ ಮಿನುಗಲಿದ್ದಾರೆ 'ಬಿಗ್ ಬಾಸ್' ಆಂಗ್ರಿ ಯಂಗ್ ಮ್ಯಾನ್ ಜಗನ್.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸೌಂಡ್ ಮಾಡಿದ ಸ್ಪರ್ಧಿಗಳ ಪೈಕಿ ಜಗನ್ ಕೂಡ ಒಬ್ಬರು. ಆಗಾಗ ಟೆಂಪರ್ ರೈಸ್ ಮಾಡಿಕೊಳ್ಳುತ್ತಿದ್ದ ಜಗನ್ ಹಲವು ಗದ್ದಲ-ಗಲಾಟೆಗಳಿಗೆ ನಾಂದಿ ಹಾಡಿದ್ದರು, ಸಾಕ್ಷಿ ಆಗಿದ್ದರು.

ಮೂಗಿನ ತುದಿಯಲ್ಲೇ ಕೋಪ ಹೊಂದಿರುತ್ತಿದ್ದ ಜಗನ್, 'ಬಿಗ್ ಬಾಸ್ ಫೈನಲ್ 5' ಹಂತ ತಲುಪಲಿಲ್ಲ. ಆದರೂ ಜಗನ್ ಗೆ ಮಾತ್ರ ಕಿರುತೆರೆ ಮತ್ತು ಬೆಳ್ಳಿತೆರೆ ಮೇಲೆ ಡಿಮ್ಯಾಂಡ್ ಕಮ್ಮಿ ಆಗಿಲ್ಲ.

'ಗಾಂಧಾರಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಜಗನ್ ಸದ್ಯ 'ಸೀತಾ ವಲ್ಲಭ' ಸೀರಿಯಲ್ ನಲ್ಲಿ ಮಿಂಚುತ್ತಿದ್ದಾರೆ. ಹೀಗಿರುವಾಗಲೇ, ಸ್ಯಾಂಡಲ್ ವುಡ್ ನಿಂದ ಜಗನ್ ಗೆ ಬುಲಾವ್ ಬಂದಿದ್ಯಂತೆ. ಸದ್ಯದಲ್ಲೇ ಬೆಳ್ಳಿತೆರೆ ಮೇಲೆ ಜಗನ್ ಮಿನುಗಲಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಫೆಬ್ರವರಿಯಲ್ಲಿ ಅನೌನ್ಸ್ ಮೆಂಟ್

ಫೆಬ್ರವರಿಯಲ್ಲಿ ಅನೌನ್ಸ್ ಮೆಂಟ್

ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲು ಜಗನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಫೈನಲೈಸ್ ಆಗಿದ್ದು, ಫೆಬ್ರವರಿ ತಿಂಗಳಲ್ಲಿ ಪ್ರಾಜೆಕ್ಟ್ ಬಗ್ಗೆ ಘೋಷಿಸಲಿದ್ದಾರೆ ನಟ ಜಗನ್.

ಸಿಲ್ವರ್ ಸ್ಕ್ರೀನ್ ಗೆ ಕಮ್ ಬ್ಯಾಕ್

ಸಿಲ್ವರ್ ಸ್ಕ್ರೀನ್ ಗೆ ಕಮ್ ಬ್ಯಾಕ್

ಹಾಗ್ನೋಡಿದ್ರೆ, ಇದು ಜಗನ್ ಅಭಿನಯದ ಚೊಚ್ಚಲ ಚಿತ್ರವೇನಲ್ಲ. ಏಳೆಂಟು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ 'ಜೋಶ್' ಚಿತ್ರದಲ್ಲಿ ಜಗನ್ ನಟಿಸಿದ್ದರು. ಇದೀಗ ಲ್ಯಾಂಗ್ ಗ್ಯಾಪ್ ಬಳಿಕ ಚಿತ್ರರಂಗದ ಕಡೆ ಜಗನ್ ಮುಖ ಮಾಡಿದ್ದಾರೆ.

ಸಿನಿಮಾಗಳಲ್ಲಿ ಅಭಿನಯಿಸುವ ಕನಸು

ಸಿನಿಮಾಗಳಲ್ಲಿ ಅಭಿನಯಿಸುವ ಕನಸು

ಸಿನಿಮಾಗಳಲ್ಲಿ ಅಭಿನಯಿಸಬೇಕೆಂಬ ಕನಸು ಜಗನ್ ಗೆ ಮೊದಲಿನಿಂದಲೂ ಇದೆ. ಆದ್ರೆ, ಅವರ ವೃತ್ತಿ ಬದುಕಿಗೆ ತಿರುವು ಕೊಟ್ಟಿದ್ದು ಕಿರುತೆರೆ. ಹೀಗಾಗಿ, ''ಸ್ಮಾಲ್ ಸ್ಕ್ರೀನ್ ಬಿಡಲ್ಲ'' ಅಂತಾರೆ ಜಗನ್.

ಇಷ್ಟು ದಿನ ಯಾಕೆ ಸಿನಿಮಾ ಒಪ್ಪಿಕೊಳ್ಳಲಿಲ್ಲ.?

ಇಷ್ಟು ದಿನ ಯಾಕೆ ಸಿನಿಮಾ ಒಪ್ಪಿಕೊಳ್ಳಲಿಲ್ಲ.?

ಏಳೆಂಟು ವರ್ಷಗಳಲ್ಲಿ ಜಗನ್ ಗೆ ಚಿತ್ರರಂಗದಿಂದ ಹಲವು ಅವಕಾಶಗಳು ಹುಡುಕಿಕೊಂಡು ಬಂದಿದ್ವು. ಆದ್ರೆ, ಸೀರಿಯಲ್ ಗೆ ಕಮಿಟ್ ಆಗಿದ್ದ ಕಾರಣ ಯಾವ ಆಫರ್ ನೂ ಜಗನ್ ಒಪ್ಪಿಕೊಂಡಿರಲಿಲ್ಲ. ಈಗ, ಬಿಗ್ ಬಜೆಟ್ ಚಿತ್ರವೊಂದರಲ್ಲಿ ಸೆಕೆಂಡ್ ಹೀರೋ ಆಗಿ ನಟಿಸಲು ಜಗನ್ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡ ಓದುತ್ತಿರಿ.

More from Filmibeat

English summary
Bigg Boss Kannada 5 Contestant Jagan to make his comeback to Sandalwood Silver Screen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X