ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 100 ರೂಪಾಯಿ ದಂಡ
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ತೆರಿಗೆ ತಲೆನೋವು
ನಟ ದರ್ಶನ್ ಗೆ 100 ರೂಪಾಯಿ ದಂಡ ಹಾಕಲಾಗಿದೆ. ಆಸ್ತಿ ತೆರೆಗೆ ಬಾಕಿ ಇದ್ದ ಕಾರಣ ಬಿಬಿಎಂಪಿ ದರ್ಶನ್ ಗೆ ದಂಡ ವಿಧಿಸಿದೆ.
ದರ್ಶನ್ ಆರ್ ಆರ್ ನಗರದಲ್ಲಿರುವ ತಮ್ಮ ನಿವಾಸದ ಆಸ್ತಿಯ ತೆರಿಗೆ ಕಟ್ಟಬೇಕಿತ್ತು. 2017-18 ನೇ ಸಾಲಿನ ಆಸ್ತಿಗೆ ತೆರಿಗೆ ಕಟ್ಟದ ಕಾರಣ ದರ್ಶನ್ ಗೆ 100 ರೂಪಾಯಿ ದಂಡ ಹಾಕಲಾಗಿದೆ. ಜೊತೆಗೆ 2164 ರೂಪಾಯಿ ಬಡ್ಡಿ ಕೂಡ ಸೇರಲಿದೆ.
ದರ್ಶನ್ 12,024 ರೂಪಾಯಿಯನ್ನು ಆಸ್ತಿಯ ತೆರಿಗೆಯಾಗಿ ಪಾವತಿ ಮಾಡಬೇಕಿತ್ತು. ಆದರೆ, ಸರಿಯಾದ ಸಮಯಕ್ಕೆ ಅದನ್ನು ಕಟ್ಟದ ಕಾರಣ ಈಗ ದಂಡ + ಬಡ್ಡಿ ಸೇರಿ 14,288 ರೂಪಾಯಿಯಾಗಿದೆ.

ಅಂದಹಾಗೆ, ನಟ ದರ್ಶನ್ ಸದ್ಯ 'ಯಜಮಾನ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರು. ಆದರೆ, ಅಂಬರೀಶ್ ಅವರ ವಿಧಿವಶದ ಹಿನ್ನಲೆಯಲ್ಲಿ ಬೆಂಗಳೂರಿಗೆ ಮರಳಿದ್ದರು.
English summary
BBMP fined 100rs fined to kannada actor Darshan for not paying tax.


Click it and Unblock the Notifications