ಖ್ಯಾತ ನಟ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್‌ಗೆ ಸೀಮಂತ ಸಂಭ್ರಮ
ಸ್ಯಾಂಡಲ್ ವುಡ್ ನಲ್ಲಿ ಕೌರವ ಅಂತಾನೇ ಪ್ರಖ್ಯಾತಿ ಪಡೆದಿರುವ ನಟ ಬಿ.ಸಿ ಪಾಟೀಲ್ ತಾತನಾಗುವ ಸಂಭ್ರಮದಲ್ಲಿದ್ದಾರೆ. ಬಿ.ಸಿ ಪಾಟೀಲ್ ಮುದ್ದಿನ ಪುತ್ರಿ ಸೃಷ್ಟಿ ಪಾಟೀಲ್ ತಾಯಿಯಾಗುತ್ತಿದ್ದಾರೆ.
ಈ ಸಂಭ್ರಮವನ್ನು ಸೃಷ್ಟಿ ಪಾಟೀಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದಾರೆ. ಇಂದು ಬಿ.ಸಿ ಪಾಟೀಲ್ ಮನೆಯಲ್ಲಿ ಸರಳವಾಗಿ ಮಗಳ ಸೀಮಂತ ಸಂಭ್ರಮ ನೆರವೇರಿದ್ದು, ಕೇವಲ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಸೀಮಂತ ಸಂಭ್ರಮದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರ ಆಶೀರ್ವಾದ ಇರಲಿ ಎಂದು ಸೃಷ್ಟಿ ಕೇಳಿಕೊಂಡಿದ್ದಾರೆ. 'ಕೊರೊನಾ ಕಾರಣದಿಂದ ಎಲ್ಲರನ್ನೂ ಕರೆಯಲು ಆಗಲಿಲ್ಲ. ಕೊರೊನಾ ಕಡಿಮೆಯಾದ ನಂತರ ನಿಮ್ಮೆಲ್ಲರ ಆಶೀರ್ವಾದ ಪಡೆಯಲು ಖಂಡಿತ ಸಿಗುತ್ತೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದವನ್ನು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಸೃಷ್ಟಿ ಪಾಟೀಲ್‌ಗೆ ಸ್ನೇಹಿತರು ಮತ್ತು ಹಿತೈಶಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿರುವ ನಟಿ ಸೃಷ್ಟಿಗೆ ತಂದೆ-ತಾಯಿ ಆರತಿ ಮಾಡಿ ಸಹಿ ತಿನಿಸುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.
ಅಂದಹಾಗೆ ಸೃಷ್ಟಿ ಪಾಟೀಲ್ 2019ರಲ್ಲಿ ಉದ್ಯಮಿ ಸಂಜಯ್ ಬೇಲೂರು ಜೊತೆ ಹಸೆಮಣೆ ಏರಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ರಾಜಕೀಯ ಮತ್ತು ಸಿನಿ ಗಣ್ಯರು ಭಾಗಿಯಾಗಿದ್ದರು. ಸೃಷ್ಟಿ ಪಾಟೀಲ್ 'ಹ್ಯಾಪಿ ನ್ಯೂ ಇಯರ್' ಸಿನಿಮಾದಲ್ಲಿ ನಟಿಸಿದ್ದಾರೆ.

ಒಂದೇ ಒಂದು ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಸೃಷ್ಟಿ ಬಳಿಕ ಅಪ್ಪನ ಜೊತೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಸದಾ ಅಪ್ಪನ ಜೊತೆ ಕಾಣಿಸಿಕೊಳ್ಳುವ ಸೃಷ್ಟಿ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಇದೀಗ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದು, ಸದ್ಯದಲ್ಲೇ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ.


Click it and Unblock the Notifications











