twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಗುಣಗಾನ ಮಾಡಿದ ಸಚಿವ ಬಿಸಿ ಪಾಟೀಲ್

    |

    ಶಿಳ್ಳೆ ಚಪ್ಪಾಳೆ ಇದ್ದರೇನೇ ಬದುಕು, ಶಿಳ್ಳೆ‌, ಚಪ್ಪಾಳೆ ಇದ್ದರೆನೇ ಕಲಾವಿದರ ಜೀವನ. ಚಿತ್ರಮಂದಿರಗಳಲ್ಲಿ ಚಲನಚಿತ್ರಗಳನ್ನು ನೋಡುವ ಮೂಲಕ ಚಿತ್ರರಂಗವನ್ನು ಕಲಾವಿದರನ್ನು ಜನರು ಬೆಳೆಸಬೇಕು ಎಂದು ಚಲನಚಿತ್ರ ನಟರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

    ಹಿರೇಕೆರೂರಿ ತಾಲೂಕಿನಲ್ಲಿ ನಡೆದ ರೈತರೊಂದಿಗೊಂದು ದಿನ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

    ನಾನು ಆಧುನಿಕ ಕೌರವನ ಪಾತ್ರ ಮಾಡಿದ್ದೆ. ಪೌರಾಣಿಕ ಕೌರವ ಧುರ್ಯೋಧನನಾಗಿದ್ದು ನಟ ದರ್ಶನ್‌. ಬಹಳ ವರ್ಷ ನಾನು ಸಿನಿಮಾ ಮಾಡಿರಲಿಲ್ಲ. ಯಶಸ್ ಸೂರ್ಯ ನಟನನ್ನು ಪರಿಚಯಿಸಿ ಚಿತ್ರರಂಗದಲ್ಲಿ ಬೆಳೆಸುವ ದೃಷ್ಟಿಯಿಂದ ದರ್ಶನ್ ಅವರ ಸ್ಫೂರ್ತಿ, ಡಿ ಬಾಸ್ ಶಕ್ತಿಯಿಂದ ನಾವುಗಳು ಮುಂದಾಗಿದ್ದೇವೆ. ಅದರಂತೆ 'ಗರಡಿ' ಚಿತ್ರ ನಿರ್ಮಾಣವಾಗುತ್ತಿದೆ ಎಂದರು.

    ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಮೆಚ್ಚಿ ದರ್ಶನ್ ಹಿರೇಕೆರೂರೊಗೆ ಬಂದಿದ್ದಾರೆ. ಯಾವುದೇ ಗಾಡ್ ಫಾದರ್ ಇಲ್ಲದೇ ಬೆಳೆದವರು ನಟ ದರ್ಶನ್‌. ರಾಜ್ಯದ ಜನತೆಯೇ ಅವರ ಅಭಿಮಾನಿಗಳು ಹಾಗೂ ಗಾಡ್ ಫಾದರ್ ಎರಡೂ ಸಹ ಎಂದು ಹೊಗಳಿದರು.

    ರೈತರ ಮೇಲೆ ದರ್ಶನ್‌ಗೆ ಪ್ರೀತಿ

    ರೈತರ ಮೇಲೆ ದರ್ಶನ್‌ಗೆ ಪ್ರೀತಿ

    ದುರ್ಗಾದೇವಿ ಪಾದಾರವಿಂದಗಳಿಗೆ ನಮಸ್ಕರಿಸೋ ಮೂಲಕ ಗರಡಿ ಚಿತ್ರಕ್ಕೆ ಕ್ಲ್ಯಾಪಿಂಗ್ ಮಾಡಿದ್ದೇವೆ. ಡಿ ಬಾಸ್ ಎಂದರೆನೇ ದರ್ಶನ್. ಶಿಳ್ಳೆ ಚಪ್ಪಾಳೆ ಇದ್ದರೆನೇ ಜೀವ. ಜನತೆ ನನ್ನನ್ನು ಶಾಸಕರನ್ನಾಗಿ ಮಾಡಿ ಕೃಷಿಕರ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ರಾಜ್ಯದ ರೈತರ ಹಿತ ಕಾಯಲು ಕೃಷಿ ಅಭಿಮಾನಿ ರೈತನೂ ಆಗಿರುವುದರಿಂದ ರೈತರ ಮೇಲಿನ ಅಭಿಮಾನದಿಂದ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ. ಇದೇ ಪ್ರೀತಿಯಿಂದ ಹಿರೇಕೆರೂರಿನಲ್ಲಿ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಬಿಸಿ ಪಾಟೀಲ್ ಹೇಳಿದರು.

    ಪುನೀತ್ ರಾಜ್‌ಕುಮಾರ್‌ಗೆ ಪುಷ್ಪ ನಮನ

    ಪುನೀತ್ ರಾಜ್‌ಕುಮಾರ್‌ಗೆ ಪುಷ್ಪ ನಮನ

    ರೈತ ಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ದೀಪಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಇತ್ತೀಚೆಗೆ ಅಗಲಿದ ಚಿತ್ರನಟ ದಿ.ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೃಷಿ ಸಚಿವ ಬಿ.ಸಿ.ಪಾಟೀಲ್ ವೇದಿಕೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ರೈತರ ಹೆಸರಿನಲ್ಲಿ ಸಾರ್ವಜನಿಕವಾಗಿ ಆಚರಿಸಿಕೊಂಡರು. ದರ್ಶನ್ ಅಭಿಮಾನಿಗಳಿಂದ ಬಿ.ಸಿ.ಪಾಟೀಲರು ಹಾಗೂ ದರ್ಶನ್‌ರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

    ಬೆನ್ನೆಲುಬಾಗಿ ನಿಂತಿದ್ದಾರೆ ದರ್ಶನ್: ಯೋಗರಾಜ್ ಭಟ್

    ಬೆನ್ನೆಲುಬಾಗಿ ನಿಂತಿದ್ದಾರೆ ದರ್ಶನ್: ಯೋಗರಾಜ್ ಭಟ್

    ನಿರ್ದೆಶಕ ಯೋಗರಾಜ್ ಭಟ್ ಅವರಿಂದ ವೇದಿಕೆಯಲ್ಲಿ ಸೌಮ್ಯ ಬ್ಯಾನರ್ ಅಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗರಡಿ ಚಲನಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ, ಈ ಚಲನಚಿತ್ರದ ಹಿಂದೆ ಆಲದ ಮರದ ತರಹ ನಿಂತವರು ನಟ ದರ್ಶನ್ ನೂತನ ಯಶಸ್ ಸೂರ್ಯರಂತವರನ್ನು ಕೈಹಿಡಿದು ನಡೆಸಬೇಕಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಹಲವು ಮುಖಂಡರು

    ಕಾರ್ಯಕ್ರಮದಲ್ಲಿ ಹಲವು ಮುಖಂಡರು

    ಪ್ರಾಸ್ತಾವಿಕವಾಗಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಮಾತನಾಡಿದರು. ವೇದಿಕೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್, ನಟ ಶ್ರೇಯಸ್ ಸೂರ್ಯ, ಬಿಜೆಪಿ ಯುವನಾಯಕಿ ಸೃಷ್ಟಿಪಾಟೀಲ್, ದೊಡ್ಡಗೌಡಪಾಟೀಲ್, ಗುರುಶಾಂತ್ ಯತ್ನಾಳ್, ಸಿದ್ದರಾಜ್ ಕಲ್ಬಡ್ಡಿ ಸೇರಿದಂತೆ ಮತ್ತಿತ್ತರು ಪ್ರಮುಖರು ಉಪಸ್ಥಿತರಿದ್ದರು.

    English summary
    Minister, Actor BC Patil praised Darshan in Raitharondige ondu dina program in Hirekeruru. He said Darshan got successes on his own.
    Monday, November 15, 2021, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X