twitter
    For Quick Alerts
    ALLOW NOTIFICATIONS  
    For Daily Alerts

    Beast In Karnataka: ಥಿಯೇಟರ್‌ಯಿಂದ 'ಬೀಸ್ಟ್' ಎತ್ತಂಗಡಿ, 'ಕೆಜಿಎಫ್ 2' ಎಂಟ್ರಿ!

    |

    ತಮಿಳಿನ 'ಬೀಸ್ಟ್' ಚಿತ್ರ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿರೀಕ್ಷೆಯಿಂದ 'ಬೀಸ್ಟ್' ಸಿನಿಮಾ ನೋಡಿದ ಪ್ರೇಕ್ಷಕರು, ಚಿತ್ರ ಅಷ್ಟಕಷ್ಟೇ ಎನ್ನುತ್ತಿದ್ದಾರೆ. ಚಿತ್ರದಲ್ಲಿ ನಟ ವಿಜಯ್ ಅಬ್ಬರ ಬಿಟ್ಟರೆ ಬೇರೆ ಏನೂ ಇಲ್ಲ ಎನ್ನಲಾಗುತ್ತಿದೆ. ಇದೇ ಟೈಮ್‌ನಲ್ಲಿ 'ಬೀಸ್ಟ್'ಗೆ ಕನ್ನಡದ 'ಕೆಜಿಎಫ್ 2' ಎದುರಾಗಿದೆ.

    'ಬೀಸ್ಟ್' ಮತ್ತು 'ಕೆಜಿಎಫ್ 2' ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆದ ಬಳಿಕ, ಈ ಎರಡು ಚಿತ್ರಗಳು ಬಾಕ್ಸಫೀಸ್‌ನಲ್ಲಿ ಮುಖಾ, ಮುಖಿ ಆಗುತ್ತವೆ. ಕಾಳಗ ಜೋರಾಗಿ ಇರಲಿದೆ ಎನ್ನಲಾಗಿತ್ತು. ಆದರೆ 'ಬೀಸ್ಟ್' ಸಿನಿಮಾ ರಿಲೀಸ್ ಬಳಿಕ ಚಿತ್ರಣ ಬದಲಾಗಿದೆ. ಯಾವ ಕಾಂಪಿಟೇಷನ್ ಇಲ್ಲ. ಈಗೇನಿದ್ದರೂ ಕೇವಲ 'ಕೆಜಿಎಫ್ 2' ಚಿತ್ರದ್ದೇ ಆಟ ಎನ್ನುವುದು ಸ್ಪಷ್ಟವಾಗಿದೆ.

    <br>Beast Movie Review: ಹಳೆ ಸೂತ್ರಗಳ, ಹೊಸ ಆ್ಯಕ್ಷನ್ ಚಿತ್ರ 'ಬೀಸ್ಟ್'!
    Beast Movie Review: ಹಳೆ ಸೂತ್ರಗಳ, ಹೊಸ ಆ್ಯಕ್ಷನ್ ಚಿತ್ರ 'ಬೀಸ್ಟ್'!

    ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಜೋರಾಗಿಯೇ ಇರುತ್ತೆ. ಆದರೆ ಈಗ ಕನ್ನಡದ 'ಕೆಜಿಎಫ್' ಚಿತ್ರದ ಮುಂದೆ ನಿಲ್ಲುವ ಧೈರ್ಯ ಪರಭಾಷೆ ಚಿತ್ರಗಳು ಮಾಡಿಲ್ಲ. 'ಬೀಸ್ಟ್' ಒಂದು ದಿನ ಮುಂಚೆ ರಿಲೀಸ್ ಆಗಿ ಕರುನಾಡಿನಲ್ಲಿ ಒಂದೇ ದಿನಕ್ಕೆ ಆಟ ಮುಗಿಸಿದೆ.

    ಕರ್ನಾಟಕದ ಥಿಯೇಟರ್‌ನಿಂದ 'ಬೀಸ್ಟ್' ಔಟ್!

    ಕರ್ನಾಟಕದ ಥಿಯೇಟರ್‌ನಿಂದ 'ಬೀಸ್ಟ್' ಔಟ್!

    'ಕೆಜಿಎಫ್ 2' ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ. ವಿಶ್ವಾದ್ಯಂತ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ತೆರೆಗೆ ಬರುತ್ತಿದೆ. ಅಂತೆಯೇ ಕರ್ನಾಟಕದಲ್ಲೂ ಕೂಡ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಚಿತ್ರ ತೆರೆಗೆ ಬರುತ್ತಿದೆ. ಆದರೆ ಒಂದು ದಿನ ಮೊದಲೇ 'ಬೀಸ್ಟ್' ರಿಲೀಸ್ ಆಗಿ, ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆದರೆ 'ಬೀಸ್ಟ್‌' ರಿಲೀಸ್ ಆಗಿದ್ದರೂ 'ಕೆಜಿಎಫ್ 2' ಚಿತ್ರಕ್ಕೆ ಈಗಾಗಲೇ ಚಿತ್ರಮಂದಿರಗಳು ನಿಗದಿ ಆಗಿವೆ. ಹಾಗಾಗಿ 'ಬೀಸ್ಟ್' ಚಿತ್ರವನ್ನು ಹಲವು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತದೆ.

    Beast First Review: ನಟ ವಿಜಯ್ ಒನ್ ಮ್ಯಾನ್ ಶೋ ತಮಿಳಿನ 'ಬೀಸ್ಟ್'!Beast First Review: ನಟ ವಿಜಯ್ ಒನ್ ಮ್ಯಾನ್ ಶೋ ತಮಿಳಿನ 'ಬೀಸ್ಟ್'!

    ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಿಂದ ಎತ್ತಂಗಡಿ!

    ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಿಂದ ಎತ್ತಂಗಡಿ!

    ಇನ್ನು ಬೆಂಗಳೂರಿನಲ್ಲಿ ಸದಾ ವಿಜಯ್ ಚಿತ್ರಗಳ ಹಾವಳಿ ಇದ್ದಿದ್ದೆ. ಆದರೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕಾಗಿ ತಮಿಳಿನ ಚಿತ್ರವನ್ನು ಎತ್ತಂಗಡಿ ಮಾಡಲಾಗುತ್ತದೆ. ಮೆಜೆಸ್ಟಿಕ್‌ನಲ್ಲಿ ಇರುವ ಅನುಪಮ, ಅಭಿನಯ, ಭೂಮಿಕಾ ಚಿತ್ರ ಮಂದಿಗಳಲ್ಲಿ 'ಬೀಸ್ಟ್' ರಿಲೀಸ್ ಆಗಿದೆ. ಆದರೆ ನಾಳೆಯಿಂದ, ಅಂದರೆ ಏಪ್ರಿಲ್ 14ರಿಂದ ಈ ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಚಿತ್ರ ರಿಲೀಸ್ ಆಗಲಿದ್ದು, 'ಬೀಸ್ಟ್' ಚಿತ್ರವನ್ನು ತೆಗೆದು ಹಾಕಲಾಗುತ್ತದೆ.

    ಕರ್ನಾಟಕದಾದ್ಯಂತ 1480 ಸ್ಕ್ರೀನ್‌ಗಳಲ್ಲಿ 'ಬೀಸ್ಟ್'!

    ಕರ್ನಾಟಕದಾದ್ಯಂತ 1480 ಸ್ಕ್ರೀನ್‌ಗಳಲ್ಲಿ 'ಬೀಸ್ಟ್'!

    ಸದ್ಯ ಬೀಸ್ಟ್ ಕರ್ನಾಟಕದಾದ್ಯಂತ 1480 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಆದರೆ 'ಕೆಜಿಎಫ್ 2' ರಿಲೀಸ್‌ನಿಂದಾಗಿ ಒಂದೇ ದಿನಕ್ಕೆ 'ಬೀಸ್ಟ್' ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗಲಿದೆ. ಏನಿಲ್ಲಾ ಅಂದರೂ ಕರ್ನಾಟಕದದ್ಯಂತ 30 ರಿಂದ 40 ಚಿತ್ರಮಂದಿರಗಳಿಂದ 'ಬೀಸ್ಟ್' ಚಿತ್ರವನ್ನು ತೆಗೆದು ಹಾಕಲಾಗುತ್ತದೆ. ಹಾಗಾಗಿ ಯಾವ ಕಡೆಯಿಂದಲೂ 'ಬೀಸ್ಟ್' ಚಿತ್ರ 'ಕೆಜಿಎಫ್ 2' ಚಿತ್ರಕ್ಕೆ ಪೈಪೋಟಿ ಒಡ್ಡಲಾರದು.

    'ಕೆಜಿಎಫ್ 2' ಗೆ ಹೆಚ್ಚಿನ ಬೇಡಿಕೆ!

    'ಕೆಜಿಎಫ್ 2' ಗೆ ಹೆಚ್ಚಿನ ಬೇಡಿಕೆ!

    ಇನ್ನು ಎಲ್ಲೆಲ್ಲೂ 'ಕೆಜಿಎಫ್ 2' ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿ ಇದೆ. 'ಕೆಜಿಎಫ್ 2' ಜೊತೆಗೆ ಮತ್ಯಾವ ದೊಡ್ಡ ಚಿತ್ರ ಇಲ್ಲದ ಕಾರಣ, ಭಾರತದಾದ್ಯಂತ ಬೇಡಿಕೆ ಹೆಚ್ಚಾಗಿದೆ. ಕರ್ನಾಟಕ ಮಾತ್ರ ಅಲ್ಲದೆ, ತಮಿಳುನಾಡು, ಕೇರಳ, ಆಂಧ್ರ, ದೆಹೆಲಿ, ಮುಂಬೈನಲ್ಲೂ ಕೂಡ 'ಕೆಜಿಎಫ್ 2' ಚಿತ್ರ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.

    English summary
    Beast Replaced By Kgf 2 In Many Theaters Of karnataka,
    Wednesday, April 13, 2022, 17:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X