twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಕಾಲಕ್ಕೆ ಗಾನಸುಧೆ ಹರಿಸಿದ ಬೆಳವಾಡಿ ಅಮ್ಮ-ಮಗಳು

    |

    ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲರಿಗೂ ಆತಂಕ, ಎಲ್ಲರಿಗೂ ಗಾಬರಿ, ಭಯ. ಇಂಥಹಾ ಸಮಯದಲ್ಲಿ ನಟಿ ಸುಧಾ ಬೆಳವಾಡಿ ಮತ್ತು ಮಗಳು ಸಂಯುಕ್ತಾ ಹೊರನಾಡು ಸುಂದರವಾದ ಹಾಡೊಂದನ್ನು ಪ್ರಸ್ತುತ ಪಡಿಸಿದ್ದಾರೆ.

    Recommended Video

    Susheel Gowda No more,ಅಭಿನಯಿಸಿದ ಚಿತ್ರ ಬಿಡುಗಡೆಗು ಮುನ್ನ ಕೊನೆಯುಸಿರೆಳೆದ ಸುಶೀಲ್ ಗೌಡ | Filmibeat kannada

    ನಟಿ ಸುಧಾ ಬೆಳವಾಡಿ ಮತ್ತು ನಾಯಕ ನಟಿ ಸಂಯುಕ್ತಾ ಹೊರನಾಡು ಇಬ್ಬರೂ ಮನೆಯಲ್ಲೇ ಕೂತು ಏಕರಾಗದಲ್ಲಿ ಸುಂದರವಾದ, ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ಹಾಡೊಂದನ್ನು ಹಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    'ತಾಳುವುದಾ ನೀ ಕಲಿಮಗು, ಬಾಳುವುದಾ ನೀ ಕಲಿ ಮಗು..' ಎಂದು ಆರಂಭವಾಗುವ ಹಾಡನ್ನು ಅಮ್ಮ-ಮಗಳಿಬ್ಬರೂ ಸುಂದರವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡು ಕೇಳಲು ಇಂಪಾಗಿ, ಸಾಹಿತ್ಯ ಅರ್ಥವತ್ತಾಗಿ ಇದೆ.

    ಮನಸಿನ ಸ್ಲೇಟನು ಖಾಲಿ ಇಡು

    'ಕಳೆದುಹೋದುದಕೆ ಕೊರಗ ಬಿಡು ಉಳಿದಿದೆ ಎಷ್ಟೋ ಹರುಷ ಪಡು ಕಳೆಯುವ ಕೂಡುವ ಲೆಕ್ಕವ ಅಳಿಸಿ, ಮನಸಿನ ಸ್ಲೇಟನು ಖಾಲಿ ಇಡು' ಎಂಬ ಅರ್ಥವತ್ತಾದ ಸಾಲುಗಳನ್ನು ಹಾಡು ಒಳಗೊಂಡಿದೆ.

    'ತಾಳುವ ಧೀರ, ಆಳುವ ಊರ'

    'ತಾಳುವ ಧೀರ, ಆಳುವ ಊರ'

    'ತಾಳುವುದಾ ನೀ ಕಲಿಮಗು, ಬಾಳುವುದಾ ನೀ ಕಲಿ ಮಗು, ತಾಳುವ ಧೀರ, ಆಳುವ ಊರ, ಎನ್ನುವುದಾ ನೀ ನೆನಪಿಡು..' ಎಂದು ತಾಳ್ಮೆಯ ಅವಶ್ಯಕತೆ ಬಗ್ಗೆ ಹಾಡಿನಲ್ಲಿ ಪ್ರಸ್ತಾಪ ಮಾಡಿದ್ದಾರೆ ಸುಧಾ ಮತ್ತು ಸಂಯುಕ್ತಾ.

    'ನೆಚ್ಚಿದ ಗೆಳೆಯರ ನಂಟ ಬಿಡು'

    'ನೆಚ್ಚಿದ ಗೆಳೆಯರ ನಂಟ ಬಿಡು'

    'ನೆಚ್ಚದ ಗೆಳೆಯರ ನಂಟ ಬಿಡು, ಚುಚ್ಚಲು, ಗೆಳೆಯ ನಕ್ಕು ಬಿಡು, ಮೆಚ್ಚಿದರಾಯಿತು ಮೇಲಿನ ದೈವ, ಹಚ್ಚಿಕೊಳ್ಳದೇ ಇದ್ದುಬಿಡು' ಎಂಬ ಸಾಳಿನ ಮೂಲಕ, ಯಾರನ್ನೂ ನೆಚ್ಚಿಕೊಳ್ಳಬೇಡ, ನಗುವು ಹಾಗೂ ದೇವರ ಮೇಲಿನ ನಂಬಿಕೆಯೊಂದು ಜೊತೆಗಿರಲಿ ಎಂದು ಸಾಂತ್ವನವನ್ನು ಹಾಡು ಒಳಗೊಂಡಿದೆ.

    20 ಸಾವಿರ ಮಂದಿ ವೀಕ್ಷಿಸಿದ್ದಾರೆ

    20 ಸಾವಿರ ಮಂದಿ ವೀಕ್ಷಿಸಿದ್ದಾರೆ

    ಸಂಯುಕ್ತಾ ಹೊರನಾಡು ಅವರ ಇನ್‌ಸ್ಟಾಗ್ರಾಂ ನಲ್ಲಿ ಹಾಡಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಡನ್ನು ಸುಮಾರು 20 ಸಾವಿರ ಮಂದಿ ವೀಕ್ಷಿಸಿದ್ದಾರೆ ಮತ್ತು ಮೆಚ್ಚಿಕೊಂಡಿದ್ದಾರೆ.

    English summary
    Sudha Belvadi and her daughter Samyukta Hornad sung a beautiful song about patience.
    Wednesday, July 8, 2020, 23:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X