ಯಾರ ಜೊತೆ ಬೆಡ್ ಹತ್ತಬೇಕು ಎಂದು ಯೋಚಿಸಿದ್ದರೆ ಪರದಾಡ್ತಿರಲಿಲ್ಲ ; ದರ್ಶನ್ ಬಗ್ಗೆ ಯುವತಿ ವ್ಯಂಗ್ಯ-ತಿರುಗೇಟು ಕೊಟ್ಟ ನಟಿ

ತೂಗುದೀಪ ಶ್ರೀನಿವಾಸ್ ಅವರಂತಹ ಮೇರು ನಟನ ಮಗನಾದರೂ ಕೂಡ ಕಡುಗಷ್ಟದಿಂದ ಮೇಲೆ ಬಂದವರು ದರ್ಶನ್. ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲನ್ನೇರುತ್ತಾ ಚಾಲೆಂಜಿಂಗ್ ಸ್ಟಾರ್ ಆಗಿ ಹೊರ ಹೊಮ್ಮಿದ ದರ್ಶನ್ ಅವರದ್ದು ಕಳೆದ ವರ್ಷದವರೆಗೆ ನಿಜಕ್ಕೂ ಪ್ರೇರಣಾದಾಯಕ ವ್ಯಕ್ತಿತ್ವವಾಗಿತ್ತು. ಆದರೆ.. ಕಳೆದ ವರ್ಷ ಇದೇ ದರ್ಶನ್ ಎತ್ತರಕ್ಕೇರಿದವರು ಪಾತಾಳಕ್ಕೆ ಬೀಳಬಹುದು ಎನ್ನುವುದಕ್ಕೆ ಕೂಡ ಮಾದರಿ ವ್ಯಕ್ತಿಯಾದರು.

ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿ ಕಳೆದ ವರ್ಷ ಅಕ್ಷರಶಃ ನರಕ ಯಾತನೆಯನ್ನು ಅನುಭವಿಸಿದ ದರ್ಶನ್, ಅಪವಿತ್ರ ಸಂಬಂಧಕ್ಕೆ ಹಾತೊರೆದು ಕಳೆದ ವರ್ಷ 131 ದಿನಗಳವರೆಗೆ ಜೈಲಿನಲ್ಲಿ ಕಾಲ ಕಳೆದರು. ಈ ವರ್ಷ ಮತ್ತೆ ಜೈಲು ಪಾಲಾದರು.

BED WAR Floor Cures Back Pain Viral Girl Savages Darshan Chitral Rangaswamy BLASTS Taunt-Exclusive

ಇಂಥಾ ದರ್ಶನ್ ಕೊನೆ ಪಕ್ಷ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯವಾದರೂ ಕೊಡಿ ಎಂದು ಮನವಿಯನ್ನು ಮಾಡುತ್ತಲೇ ಇದ್ದಾರೆ. ಆದರೆ..ಒಂದು ತಿಂಗಳಾದರೂ ಕೂಡ ಇವರ ಮನವಿಗೆ ಮನ್ನಣೆ ಸಿಕ್ಕಿಲ್ಲ. ದರ್ಶನ್ ಅವರ ಈ ದಯನೀಯ ಸ್ಥಿತಿ ಕಂಡು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಮಮ್ಮಲ ಮರುಗುತ್ತಿದ್ದಾರೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ.

ಆದರೆ ಇದರ ನಡುವೆ ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ ಅನೇಕರು ಬಹಿರಂಗವಾಗಿಯೇ ದರ್ಶನ್ ಅವರ ಅಪಹಾಸ್ಯ ಮಾಡುತ್ತಿದ್ದಾರೆ. ದರ್ಶನ್ ಅವರ ಸದ್ಯದ ಸ್ಥಿತಿಯನ್ನು ಕಂಡು ಖುಷಿ ಪಡುತ್ತಿದ್ದಾರೆ. ಹೀಯಾಳಿಸುತ್ತಿದ್ದಾರೆ. ನಿಂದಿಸುತ್ತಿದ್ದಾರೆ.

ಇದಕ್ಕೆ ಒಂದು ಕೈಗನ್ನಡಿ ಎಂಬಂತೆ ಅದೆಲ್ಲೋ ದೂರದ ದೇಶದಲ್ಲಿ ಓಡಾಡಿಕೊಂಡು ಯುವತಿಯೊಬ್ಬರು ದರ್ಶನ್ ಮಾಡುತ್ತಿರುವ ಹಾಸಿಗೆಯ ಮನವಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ಯುವತಿಯ ಕುಲ ಗೋತ್ರ ಗೊತ್ತಿಲ್ಲದಿದ್ದರೂ ಮ್ಯಾಜಿಕ್ ನ್ಯೂಸ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ವ್ಯಾಪಕ ವೈರಲ್ ಆಗಿದೆ. ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಯಾಕೆಂದರೆ ಈ ಯುವತಿ ಮಾತನಾಡಿದ ಮಾತುಗಳೇ ಹಾಗಿವೆ.

ವಿಡಿಯೋದಲ್ಲಿ ರಸ್ತೆಯಲ್ಲಿ ನಡೆಯುತ್ತಾ ಜ್ಯೂಸ್ ಕುಡಿಯುತ್ತಾ ಮಾತನಾಡಿರುವ ಯುವತಿ ''ಏನು ದರ್ಶನ್‌ಗೆ ಜೈಲಲ್ಲಿ ಬೆಡ್ ಸಿಗ್ತಿಲ್ಲವಾ!, ಆಚೆ ಇರೋವಾಗ ಯಾರ ಜೊತೆ ಬೆಡ್ ಹತ್ತಬೇಕು, ಹತ್ತಬಾರದು ಎಂದು ಯೊಚಿಸಿ ಜೀವನ ಮಾಡಿದ್ದರೆ. ಇವತ್ತು ಜೈಲಲ್ಲಿ ಬೆಡ್ ಗೆ ಪರದಾಡೋ ದಿನ ಬರುತ್ತಿರಲಿಲ್ಲ'' ಎಂದು ಹೇಳಿದ್ದಾರೆ.

BED WAR Floor Cures Back Pain Viral Girl Savages Darshan Chitral Rangaswamy BLASTS Taunt-Exclusive

ಮುಂದುವರಿದು, "ಆಯುರ್ವೇಧದ ಪ್ರಕಾರ ಹಾಸಿಗೆ ಇಲ್ಲದೇ ಫ್ಲಾಟ್ ಸರ್ಫೇಸ್ ಮೇಲೆ (ನೆಲ) ಮಲಗಿದರೆ ಬೆನ್ನು ನೋವು ವಾಸಿಯಾಗುತ್ತಂತೆ. ಅಣ್ಣಂಗೆ ಬೆನ್ನು ನೋವು ವಾಸಿಯಾಗಬೇಕು. ಅದು ಮುಖ್ಯ'' 'ಎಂದು ವ್ಯಂಗ್ಯವಾಡಿದ್ದಾರೆ.

ಯುವತಿಯ ಈ ಮಾತುಗಳಿಗೆ ಕನ್ನಡದ ನಟಿ ಮತ್ತು ಬಾಡಿ ಬಿಲ್ಡರ್ ಚಿತ್ರಲ್ ರಂಗಸ್ವಾಮಿ ಕೆರಳಿದ್ದು ಕಮೆಂಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಇಷ್ಟೇ ಅಲ್ಲ ಈ ಕುರಿತು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಕೂಡ ಮಾತನಾಡಿರುವ ಚಿತ್ರಲ್ ವಿಡಿಯೋ ಮಾಡಿರುವ ಯುವತಿಯ ವಿರುದ್ದ ಕೆಂಡ ಕಾರಿದ್ದಾರೆ.

BED WAR Floor Cures Back Pain Viral Girl Savages Darshan Chitral Rangaswamy BLASTS Taunt-Exclusive

''ಫಿಲ್ಮಿಬೀಟ್ ಕನ್ನಡ''ಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಚಿತ್ರಲ್, ''ಸಾಮಾನ್ಯವಾಗಿ ಹುಡುಗ ಇರಲಿ..ಹುಡುಗಿ ಇರಲಿ.. ಯಾರ ಜೊತೆಯಾದರು ಆತ್ಮೀಯರಾದಾಗ ಇಬ್ಬರ ನಡುವೆ ಗಾಢವಾದ ಸಂಬಂಧ ಬೆಸೆದಾಗ ಅವರು ಮುಂದುವರೆಯುತ್ತಾರೆ. ಅದು ಸಹಜ. ಅವರ ಇಬ್ಬರ ನಡುವೆ ಇರುವ ಆತ್ಮೀಯತೆ ಮತ್ತು ಅವರ ಸಂಬಂಧ ಅವರಿಗೆ ಮಾತ್ರ ಗೊತ್ತಿರುತ್ತೆ ಹೊರಗಡೆ ಯಾರಿಗೂ ಗೊತ್ತಿರುವುದಿಲ್ಲ. ಹೀಗಿರುವಾಗ ಅಲ್ಲಿ ಅವರು ಬೆಡ್ ಹತ್ತುವುದಕ್ಕೂ, ಇಲ್ಲಿ ಕಾಕತಾಳಿಯ ಎನ್ನುವಂತೆ ದುರಾದೃಷ್ಟದಿಂದ ಇವರು ಜೈಲಿಗೆ ಹೋಗಿದ್ದಕ್ಕೂ, ಎಲ್ಲಿಂದ ಎಲ್ಲಿಗೆ ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. ಯಾರೋ ಒಬ್ಬರು ತೊಂದರೆಯಲ್ಲಿದ್ದಾಗ ಆಡಿಕೊಂಡು ನಗುವುದು ತಪ್ಪು'' ಎಂದು ಹೇಳಿದ್ದಾರೆ.

ಮುಂದುವರೆದು ''ಯಾವಾಗಲೂ ಸೆಕೆಂಡ್ ಒನ್..ಸೆಕೆಂಡ್ ಒನ್.. ಎಂದು ಪವಿತ್ರಾ ಗೌಡ ಅವರನ್ನು ದೂಷಿಸುತ್ತಾರೆ. ದ್ವೇಷಿಸುತ್ತಾರೆ. ಅದಕ್ಕೆ ಪ್ರಮುಖ ಕಾರಣ ಬೇರೆ ಯಾರು ಅಲ್ಲ ಬದಲಿಗೆ ದರ್ಶನ್ ಸರ್ ಅವರೇ . ಯಾಕೆಂದರೆ ಎಲ್ಲರ ಎದುರು ಹೌದು ಇವಳು ನನ್ನವಳು ಎಂದು ಬಹಿರಂಗವಾಗಿ ಅವರು ಒಪ್ಪಿಕೊಂಡಿದ್ದರೆ, ಪವಿತ್ರಾ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ . ಆದರೆ ಅವರ ಸ್ಥಿತಿಗಳು ಹೇಗಿದ್ದವೋ ಏನೋ..? ಹೇಳಿಕೊಳ್ಳುವಂತಹ ಸ್ಥಿತಿ ಇತ್ತೋ ಇಲ್ವೋ..? ನಮಗೇನು ಗೊತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರ ಇಬ್ಬರ ನಡುವೆ ಇರುವ ಆತ್ಮೀಯತೆಯ ಬಗ್ಗೆ ಹೊರಗಡೆ ಇರುವ ನಮಗೇನು ಗೊತ್ತಿದೆ..?'' ಎಂದು ಪ್ರಶ್ನೆ ಮಾಡಿದ್ದಾರೆ.

Take a Poll

''ನಮ್ಮ ಸಮಾಜ ಹೇಗೆ ಅಂದರೆ ಮದುವೆಯಾದ ಹೆಂಡತಿಯ ಜೊತೆ ಆತ್ಮೀಯತೆ ಮತ್ತು ಪ್ರೀತಿ ಇರಲಿ ಇಲ್ಲದಿರಲಿ ಆದರೆ ಅವರನ್ನು ಒಳ್ಳೆಯವರಂತೆ ನೋಡುತ್ತೆ. ಆದರೆ ಮತ್ತೊಬ್ಬ ಹುಡುಗಿ ಜೊತೆ ಸಂಬಂಧ ಇದ್ದರೆ ಅದನ್ನು ಅಫೇರ್ ಎಂದು ನೋಡುತ್ತೆ, ಅವಳಿಂದ ಎಷ್ಟೇ ಪ್ರೀತಿ ಸಿಕ್ಕರು ಕೂಡ ಅವಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತೆ . ಹಲವು ಜನರ ಬದುಕಿನಲ್ಲಿ ನಿಜವಾದ ಪ್ರೀತಿ ಎರಡನೇ ಬಾರಿಯೇ ಸಿಕ್ಕಿದೆ. ಆದರೆ ತೆಗಳಿಕೆ ನಿಂದನೆ ಮಾತ್ರ ಕಡಿಮೆಯಾಗಿಲ್ಲ'' ಎಂದು ಹೇಳಿದ್ದಾರೆ.

''ದರ್ಶನ್ ಸರ್ ಮತ್ತು ಪವಿತ್ರಾ ನಡುವೆ ಇರುವ ಸಂಬಂಧವನ್ನು ಜಡ್ಜ್ ಮಾಡಲು ನಾವ್ಯಾರು..? ಆ ಹುಡುಗಿ ವಿಡಿಯೋ ಮಾಡಿದ್ದಾಳಲ್ಲ. ಆಕೆಯ ವ್ಯೆಯಕ್ತಿಕ ಬದುಕಿನಲ್ಲಿ ಏನೇನಾಗಿದೆ ಎನ್ನುವುದು ನಮಗೇನಾದರೂ ಗೊತ್ತಿದೆಯಾ ಗೊತ್ತಿಲ್ಲ. ಹೀಗಿದ್ದಾಗ ಆ ಹುಡುಗಿಗೆ ಯಾಕೆ ಬೇರೆಯವರ ಚಿಂತೆ. ಬೇರೆಯವರು ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಅವರನ್ನು ನೋಡಿ ನಗಲು ಇವರು ಯಾರು'' ಎಂದು ಕೆಂಡ ಕಾರಿದ್ದಾರೆ ಚಿತ್ರಲ್ ರಂಗಸ್ವಾಮಿ.

BED WAR Floor Cures Back Pain Viral Girl Savages Darshan Chitral Rangaswamy BLASTS Taunt-Exclusive

ಸದ್ಯ ದರ್ಶನ್ ಬಗ್ಗೆ ವ್ಯಂಗ್ಯವಾಡಿರುವ ಯುವತಿ ವಿರುದ್ಧ ಹಲವರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರ ಸಮಸ್ಯೆಯನ್ನು ನೋಡಿ ತಮಾಷೆ ಮಾಡ್ತೀರಾಲ ನೀವು ಎಲ್ಲ ಮನುಷ್ಯರಾ ಎನ್ನುತ್ತಿದ್ದಾರೆ. ನಿಮ್ಮ ಮನೆಯ ಸಮಸ್ಯೆಗಳತ್ತ ಮೊದಲು ಗಮನ ಕೊಡಿ ಬೇರೆಯವರ ಚಿಂತೆ ನಿಮಗ್ಯಾಕೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೂ ಕೆಲವರು ಅಶ್ಲೀಲ- ಅಸಹ್ಯ ಭಾಷೆಯ ಪದಗಳ ಪ್ರಯೋಗವನ್ನು ಕೂಡ ಮಾಡಿದ್ದಾರೆ.

ಇನ್ನುಳಿದಂತೆ ಹಾಸಿಗೆ ದಿಂಬಿಗಾಗಿ ಪರಪ್ಪನ ಅಗ್ರಹಾರದಲ್ಲಿ ಪರದಾಡುತ್ತಿರುವ ದರ್ಶನ್ ಮತ್ತೊಮ್ಮೆ ಹಾಸಿಗೆ ಮತ್ತು ದಿಂಬಿಗೆ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರೇ ದಯಮಾಡಿ ಒಮ್ಮೆ ಪರಿಶೀಲಿಸುವಂತೆ ಕೋರಿಕೊಂಡಿದ್ದರು. ದರ್ಶನ್ ಸಲ್ಲಿಸಿದ್ದ ಅರ್ಜಿ ಸ್ವೀಕಾರವಾಗಿದ್ದು, ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಜಡ್ಜ್‌ ಸೂಚಿಸಿದ್ದಾರೆ. ಜೈಲಿನಲ್ಲಿ ನಿಯಮ ಪಾಲನೆ ಆಗಿದೆಯೋ, ಇಲ್ಲವೋ ಎನ್ನುವುದನ್ನು ಪರಿಶೀಲಿಸಿ ಅ. 18ರ ಒಳಗೆ ವರದಿ ನೀಡುವಂತೆ ಹೇಳಿದ್ದಾರೆ. ಈ ವರದಿ ಸಲ್ಲಿಕೆ ಬಳಿಕ ಅದನ್ನು ಗಮನಿಸಿ, ಅಗತ್ಯ ಸೌಕರ್ಯ ನಿಡಲಾಗಿದೆಯೋ ಇಲ್ಲವೋ ಎಂದು ತಿಳಿದು ಮುಂದಿನ ತಿರ್ಪು ಹೊರಡಿಸುವ ಸಾಧ್ಯತೆ ಇದೆ. ಇನ್ನಾದರೂ ದರ್ಶ್‌ನ್‌ಗೆ ಹಾಸಿಗೆ ದಿಂಬು ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
The "Floor Cures Back Pain!" viral video savage Darshan over his jail struggle sparks a huge controversy. See Actress Chitral Rangaswamy's exclusive take on the mockery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X