Just In
Don't Miss!
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಾಜ್' ಎಂಬ ಶಕ್ತಿಯನ್ನ ಹುಟ್ಟುಹಾಕಿದ್ದ 'ಸಿಂಹ'ದ ನೆನಪು
ಎಚ್.ಎಲ್.ಎನ್ ಸಿಂಹ ಕನ್ನಡ ಚಿತ್ರರಂಗ ಕಂಡ ದಿಗ್ಗಜ ಕಲಾವಿದರಲ್ಲಿ ಒಬ್ಬರು. ಇವರೊಬ್ಬ ನಟ, ನಿರ್ದೇಶಕ, ಬರಹಗಾರರಾಗಿದ್ದರು. ಮೂಲತಃ ರಂಗಭೂಮಿಯಲ್ಲಿ ಖ್ಯಾತಿ ಹೊಂದಿದ್ದ ಇವರನ್ನ ಚಿತ್ರರಂಗಕ್ಕೆ ಕರೆತಂದಿದ ಹೆಗ್ಗಳಿಕೆ ಗುಬ್ಬಿ ವೀರಣ್ಣ ಅವರಿಗೆ ಸಲ್ಲುತ್ತೆ.
ಡಾ ರಾಜ್ ಕುಮಾರ್ ಸೇರಿದಂತೆ ಹಲವರು ಸೂಪರ್ ಸ್ಟಾರ್ ಕಲಾವಿದರನ್ನ ಇಂಡಸ್ಟ್ರಿಗೆ ಪರಿಚಯಿಸಿದ ಖ್ಯಾತಿ ಇವರದ್ದು. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಅವರು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಸಿಂಹ ಅವರಿಗೆ ಇಂದು ಜನುಮ ದಿನ.
ಎಚ್.ಎಲ್.ಎನ್ ಸಿಂಹ ಅವರು ಜುಲೈ 25, 1904 ರಲ್ಲಿ ಮಂಡ್ಯದ ಮಳವಳ್ಳಿ ತಾಲೋಕಿನ ಮಾರೆಹಳ್ಳಿಯಲ್ಲಿ ಜನಿಸಿದ್ದರು. ಆರಂಭದಿಂದಲೂ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಅವರು ನಾಟಕ ಬರೆದು, ಅಭಿನಯಿಸಿದರು. ಇಂತಹ ಹಿರಿಯ ಚಿತ್ರೋಧ್ಯಮಿಯ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ಓದಿ....

ಗುಬ್ಬಿ ವೀರಣ್ಣನಿಂದ ಚಿತ್ರರಂಗಕ್ಕೆ
ನಾಟಕಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದ ಸಿಂಹ ಅವರು, ಟೈಗರ್ ವರದಾಚಾರ್ಯರ, ಸಿ.ಬಿ. ಮಲ್ಲಪ್ಪ, ಗುರುಕರ್, ಗುಬ್ಬಿ, ಪೀರ್ ಮುಂತಾದ ನಾಟಕ ಕಂಪೆನಿಗಳಲ್ಲಿ ಸೇರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದರು. ಈ ವೇಳೆ ಸಿಂಹ ಅವರನ್ನ ಮೆಚ್ಚಿಕೊಂಡ ಗುಬ್ಬಿ ವೀರಣ್ಣ ತಮ್ಮ ಚಿತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರು.

ಸಿನಿಮಾಗೂ ಮುನ್ನ ನಾಟಕಗಳು
ಎಚ್ ಎಲ್ ಎನ್ ಸಿಂಹ ಅವರನ್ನ ಉತ್ತುಂಗಕ್ಕೇರಿಸಿದ್ದು 'ಸಂಸಾರ ನೌಕ' ನಾಟಕ. 1933ರಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡ ‘ಸಂಸಾರ ನೌಕ' ನಾಟಕ ವರದಕ್ಷಿಣೆ, ನಿರುದ್ಯೋಗ, ಬಾಲ್ಯವಿವಾಹ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಭಿಸಿತ್ತು. ನಂತರ ‘ಶಹಜಹಾನ್' ನಾಟಕದಲ್ಲಿ ಶಹಜಹಾನನ ಪಾತ್ರ ಮತ್ತು ‘ಗೌತಮ ಬುದ್ಧ'ದಲ್ಲಿ ಚೆನ್ನನ ಪಾತ್ರಗಳು ಸಿಂಹರಿಗೆ ಮತ್ತಷ್ಟು ಹೆಸರು ತಂದು ಕೊಟ್ಟಿತ್ತು.

ಬಿ.ಆರ್.ಪಂತುಲು 'ಸಂಸಾರ ನೌಕ'
ಮದ್ರಾಸಿನ ಪ್ರಖ್ಯಾತ ಚಿತ್ರ ನಿರ್ಮಾಪಕರಾದ ಕೆ. ರಾಜಗೋಪಾಲ ಚೆಟ್ಟಿಯಾರ್ ಅವರು ‘ಸಂಸಾರ ನೌಕ' ನಾಟಕವನ್ನ ಸಿನಿಮಾ ಮಾಡಿದರು. ಹೀಗಾಗಿ, ‘ಸಂಸಾರ ನೌಕ' ಕನ್ನಡದ ಮೊದಲ ಸಾಮಾಜಿಕ ಚಿತ್ರವಾಯಿತು. ಈ ಚಿತ್ರದಲ್ಲಿ ಬಿ.ಆರ್ ಪಂತುಲು, ಎಂ.ವಿ. ರಾಜಮ್ಮ, ಡಿಕ್ಕಿ ಮಾಧವ ರಾವ್, ತಮಾಷಾ ಮಾಧವರಾವ್, ಹುಣಸೂರು ಕೃಷ್ಣಮೂರ್ತಿ, ಮತ್ತು ಹನುಮಂತರಾವ್ ಅಂತಹ ಶ್ರೇಷ್ಠ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದರು ಎಚ್ ಎಲ್ ಎನ್ ಸಿಂಹ.
ಬಿ.ಆರ್.ಪಂತುಲು ಕುರಿತ 'ಸಾಕ್ಷ್ಯಚಿತ್ರ' ಹಾಗೂ 'ಪುಸ್ತಕ' ಬಿಡುಗಡೆ

'ಬೇಡರ ಕಣ್ಣಪ್ಪ'ನ ಸೂತ್ರದಾರ
ಡಾ ರಾಜ್ ಕುಮಾರ್ ಅವರ ಚೊಚ್ಚಲ ಸಿನಿಮಾ ‘ಬೇಡರ ಕಣ್ಣಪ್ಪ' ಸಿನಿಮಾಗೆ ನಿರ್ದೇಶನ ಮಾಡಿದ್ದು ಇದೇ ಸಿಂಹ. ಮುತ್ತುರಾಜ್ ಅವರನ್ನ ಕರೆತಂದು ರಾಜ್ ಕುಮಾರ್ ಮಾಡಿದ್ದು ಇದೇ ನಿರ್ದೇಶಕ. ಡಾ. ರಾಜ್ ಕುಮಾರ್ ಅಲ್ಲದೆ ಡಾ. ಜಿ.ವಿ.ಅಯ್ಯರ್, ನರಸಿಂಹ ರಾಜು, ರಾಜಾ ಸುಲೋಚನ, ಡಾ. ಹೊನ್ನಪ್ಪ ಭಾಗವತರ್, ರಾಜಾ ಶಂಕರ್, ಬಿ, ಹನುಮಂತಾಚಾರ್ ಇಂತಹ ಮಹಾನ್ ಕಲಾವಿದರನ್ನ ಚಿತ್ರರಂಗಕ್ಕೆ ಪರಿಚಯಿಸಿದರು.

ಸಿಂಹ ಅವರ 'ದಿ ಬೆಸ್ಟ್' ಸಿನಿಮಾಗಳು
'ಬೇಡರ ಕಣ್ಣಪ್ಪ 'ಸಿನಿಮಾದ ನಂತರ 'ಅನುಗ್ರಹ' 'ಗುಣಸಾಗರಿ', 'ತೇಜಸ್ವಿನಿ', ಅಬ್ಬಾ ಆ ಹುಡುಗಿ, ಸಂಸಾರ ನೌಕೆ ಚಿತ್ರಗಳು ಸಿಂಹ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸೂಪರ್ ಹಿಟ್ ಸಿನಿಮಾಗಳು. ಎಪ್ಪತ್ತರ ದಶಕದಲ್ಲಿ ತೆರೆಕಂಡ ‘ಅನುಗ್ರಹ' ಎಚ್ ಎಲ್ ಎನ್ ಸಿಂಹರ ಕೊನೆಯ ಚಿತ್ರ. ಜುಲೈನಲ್ಲಿ ಜನಿಸಿದ್ದ ಅವರು ಜುಲೈ 3, 1972ರಲ್ಲಿ ಇಹಲೋಕ ತ್ಯಜಿಸಿದರು.