ತರುಣ್ ಸುಧೀರ್ ಕೈ ಹಿಡಿಯುತ್ತಿರುವ ಖುಷಿಯಲ್ಲಿ ಸೋನಾಲ್ ಸೂಪರ್ ಪಾರ್ಟಿ...!

ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂಥ ಪ್ರೀತಿ ಅನ್ನೋದು ಹೇಗೆ ಎಲ್ಲಿ ಯಾವಾಗ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ. ಇದಕ್ಕೆ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಅತ್ಯುತ್ತಮ ಉದಾಹರಣೆ.

ಹೌದು, ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂದು ಸಾರಿರುವ ತರುಣ್ ಸುಧೀರ್ ಮತ್ತು ಸೋನಾಲ್, ಈ ಆಗಸ್ಟ್ 10 ಮತ್ತು 11ರಂದು ಹೊಸ ಬದುಕಿಗೆ ಕಾಲಿಡಲಿದ್ದಾರೆ. ಬೆಂಗಳೂರಿನ ಕೆಂಗೇರಿ ಬಳಿಯ ಹಾಲ್​ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಂಥೆರೊ ವಿವಾಹವಾಗಲಿದ್ದಾರೆ. ಈ ಹಿನ್ನೆಲೆ ಬ್ಯಾಚುಲರ್ ಪಾರ್ಟಿ ಮಾಡಿ ಸೋನಾಲ್ ಸಂಭ್ರಮ ಪಟ್ಟಿದ್ದಾರೆ.

Before her wedding to director Tharun Sudhir Sonal Monteiro celebrates her bachelorette party


ಹೌದು, ಇನ್ನೇನು ಹೆತ್ತವ್ವನ ಮನೆ ತೊರೆದು ಗಂಡನ ಮನೆಗೆ ಹೊರಡಲು ಅಣಿಯಾದ ಸೋನಾಲ್‌ಗೆ ಅವರ ತಾಯಿ ಮತ್ತು ತಂಗಿ ಸೋನಾಲ್‌ಗೆ ಕಣ್ಣಿಗೆ ಬಟ್ಟೆ ಕಟ್ಟಿ ರೆಸಾರ್ಟ್‌ವೊಂದಕ್ಕೆ ಕರೆದೊಯ್ದಿದ್ದಾರೆ. ಈ ಮೂಲಕ ಸರ್‌ಫ್ರೈಸ್ ನೀಡಿದ್ದಾರೆ. ಆ ನಂತರ ಅಮ್ಮ ಮತ್ತು ತಂಗಿ ಹಾಗೂ ಸ್ನೇಹಿತೆಯ ಜೊತೆ ಸೋನಾಲ್ ಪಾರ್ಟಿ ಮಾಡಿದ್ದಾರೆ. ಖುಷಿ ಖುಷಿಯಾಗಿ ಕ್ಷಣಗಳನ್ನೂ ಕಳೆದಿದ್ದಾರೆ.

ಸೋನಾಲ್ ಆಸೆಯನ್ನು ಗಮನದಲ್ಲಿಟ್ಕೊಂಡು ಆರ್ಗನೈಸ್ ಮಾಡಲಾಗಿದ್ದ ಈ ಬ್ಯಾಚುಲರ್ ಪಾರ್ಟಿಯಲ್ಲಿ, ತರುಣ್ ಸುಧೀರ್ ಅವರ ಮುಖವಾಡವೇ ಹೈಲೆಟ್. ಈ ಮುಖವಾಡ ಗಮನ ಸೆಳೆಯುತ್ತದೆ. ಬ್ಯಾಚುಲರ್ ಪಾರ್ಟಿಯ ಕಾನ್ಸೆಪ್ಟ್ ವಿಶೇಷವಾಗಿದೆ ಎಂಬ ಭಾವನೆಯನ್ನೂ ಮೂಡಿಸುತ್ತದೆ.

before-her-wedding-to-director-tharun-sudhir-sonal-monteiro-celebrates-her-bachelorette-party

ಬ್ಯಾಚುಲರ್ ಪಾರ್ಟಿಯ ಈ ವಿಡಿಯೋವನ್ನು ಹಂಚಿಕೊಂಡಿರುವ ಸೋನಾಲ್, ಸೋನು ನಾವು ನಿನ್ನನ್ನು ಶುಕ್ರವಾರ ಕರೆದುಕೊಂಡು ಹೋಗಿ ಶನಿವಾರ ಮರಳಿ ಬಿಡ್ತಿವಿ ಎಂದು ಹೇಳಿ ಈ ರೀತಿ ಸರ್‌ಪ್ರೈಸ್‌ ಪಾರ್ಟಿ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಉಳಿದಂತೆ ಮದುವೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ತರುಣ್ ಮತ್ತು ಸೋನಾಲ್, ಚಿತ್ರರಂಗದಲ್ಲಿನ ತಮ್ಮ ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟಿದ್ದಾರೆ. ಪರಿಸರ ಸ್ನೇಹಿ ಕಾರ್ಡ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಬೇರೆಯವರಿಗೆ ಮಾದರಿ ಕೂಡ ಆಗಿದ್ದಾರೆ.

ಅಂದ್ಹಾಗೇ ಇವರಿಬ್ಬರ ನಡುವೆ ಪ್ರೇಮಾಂಕುರಕ್ಕೆ ಪರೋಕ್ಷವಾಗಿ ಕಾರಣವಾದ ದರ್ಶನ್, ಒಂದು ಕಡೆ ಜೈಲಿನಲ್ಲಿದ್ದಾರೆ. ಮತ್ತೊಂದು ಕಡೆ ಅವರ ನಲ್ಮೆಯ ಸ್ನೇಹಿತ-ಸಹೋದರ ತರುಣ್ ಸುಧೀರ್ ಮದುವೆಯ ಸಂಭ್ರಮದಲ್ಲಿದ್ದಾರೆ. ಸಹಜವಾಗಿ ತರುಣ್ ಮತ್ತು ಸೋನಾಲ್ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು ಸಾಧ್ಯವಾಗದ ಕಾರಣ ದರ್ಶನ್ ಅವರಿಗೆ ಬೇಸರ ಇದ್ದೇ ಇರುತ್ತೆ. ಸಂಭ್ರಮದಲ್ಲಿ ದರ್ಶನ್ ಭಾಗಿಯಾಗಲ್ಲವಲ್ಲ ಎಂಬ ಕೊರಗು ಕೂಡ ತರುಣ್ ಸುಧೀರ್ ಮತ್ತು ಸೋನಾಲ್ ಅವರನ್ನು ಕಾಡುತ್ತಿರುತ್ತೆ. ಆದರೂ.. ಮದುವೆ ಮುಂದೂಡಲು ಆಗಲ್ಲ. ಯಾಕೆಂದರೆ.. ಖುದ್ದು ದರ್ಶನ್ ಅವರೇ ''ಯಾವುದೇ ಕಾರಣಕ್ಕೂ ಮದುವೆಯ ದಿನಾಂಕ ಮುಂದೂಡಬೇಡ'' ಎಂದು ತರುಣ್‌ ಅವರಿಗೆ ಹೇಳಿದ್ದಾರೆ. ಹೀಗಾಗಿಯೇ ಹಸೆಮಣೆ ಏರಲು ಸಿದ್ಧವಾಗಿರುವ ತರುಣ್ ಸುಧೀರ್ ಮತ್ತು ಸೋನಾಲ್ ಅವರ ಆರತಕ್ಷತೆ ಆಗಸ್ಟ್ 10ರಂದು ನಡೆದರೆ, ಆಗಸ್ಟ್ 11ರಂದು ಭಾನುವಾರ ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿಯಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X