»   » ಬಾಲಿವುಡ್ ಚಿತ್ರಕ್ಕೆ ಕೊಡುವ ಗೌರವವನ್ನ ಕನ್ನಡ ಚಿತ್ರಕ್ಕೆ ನೀಡದ ದೀಪಿಕಾ.!

ಬಾಲಿವುಡ್ ಚಿತ್ರಕ್ಕೆ ಕೊಡುವ ಗೌರವವನ್ನ ಕನ್ನಡ ಚಿತ್ರಕ್ಕೆ ನೀಡದ ದೀಪಿಕಾ.!

Posted By:
Subscribe to Filmibeat Kannada
ಬಾಲಿವುಡ್ ಚಿತ್ರಕ್ಕೆ ಕೊಟ್ಟ ಮರ್ಯಾದೆ ಕನ್ನಡ ಚಿತ್ರಕ್ಕೆ ದೀಪಿಕಾ ಪಡುಕೋಣೆ ಕೊಡಲಿಲ್ಲ | Filmibeat Kannada

ನಟಿ ದೀಪಿಕಾ ಪಡುಕೋಣೆ ನೋಡಿದಾಗ ಕನ್ನಡಿಗರು 'ಈಕೆ ನಮ್ಮ ಕನ್ನಡದ ಹುಡುಗಿ... ಕರಾವಳಿಯ ಕುವರಿ.... ಬೆಂಗಳೂರಿನ ಬೆಡಗಿ' ಅಂತ ಹೇಳಿ ಹೆಮ್ಮೆ ಪಡುತ್ತಾರೆ. ಆಕೆಯ ಸಿನಿಮಾವನ್ನು ತಪ್ಪಿಸದೇ ನೋಡುತ್ತಾರೆ. ಆದರೆ ದೀಪಿಕಾ ಮಾತ್ರ ತಾವು ಕನ್ನಡ ಚಿತ್ರದಲ್ಲಿ ನಟಿಸಿರುವುದನ್ನೇ ಮರೆತು ಬಿಟ್ಟಿರುವ ಹಾಗೆ ಕಾಣುತ್ತಿದೆ.

ನಟಿ ದೀಪಿಕಾ ಪಡುಕೋಣೆ ಇತ್ತೀಚಿಗಷ್ಟೆ ಒಂದು ಸಂದರ್ಶನ ನೀಡಿದ್ದರು. ಅದರಲ್ಲಿ ತಮ್ಮ ಮೊದಲ ಬಾಲಿವುಡ್ ಚಿತ್ರ 'ಓಂ ಶಾಂತಿ ಓಂ' ಬಗ್ಗೆ ಮಾತನಾಡಿದ್ದಾರೆ. ಅವರ ಆ ಮಾತುಗಳನ್ನು ಒಮ್ಮೆ ಕೇಳಿದರೆ ದೀಪಿಕಾ ಕನ್ನಡ ಚಿತ್ರಕ್ಕೆ ನೀಡಿದ ಗೌರವ ಇದೇನಾ.? ಎನ್ನುವಂತೆ ಮಾಡುತ್ತದೆ.

ಸಂದರ್ಶನದಲ್ಲಿ

ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ತಮ್ಮ 'ಓಂ ಶಾಂತಿ ಓಂ' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರ ಮಾತುಗಳಲ್ಲಿ ಕನ್ನಡದ ಚಿತ್ರವನ್ನು ನಿರ್ಲಕ್ಷ್ಯ ಮಾಡಿದ್ದು ಎದ್ದು ಕಾಣುತ್ತಿದೆ.

ಮೊದಲ ಬಾರಿ ಸಿನಿಮಾ ಸೆಟ್ ಗೆ ಹೋಗಿದ್ದು

''ಓಂ ಶಾಂತಿ ಓಂ' ಚಿತ್ರ ಮರೆಯುವುದಕ್ಕೆ ಸಾಧ್ಯ ಇಲ್ಲ. ಅದಕ್ಕೂ ಮುಂಚೆ ನಾನು ಯಾವುದೇ ಸಿನಿಮಾ ಸೆಟ್ ಗಳಿಗೂ ಸಹ ಹೋಗಿರಲ್ಲೇ ಇಲ್ಲ. ಆ ಸಮಯದಲ್ಲಿ ನನಗೆ ಏನೂ ಗೊತ್ತಿರಲೇ ಇಲ್ಲ'' ಎಂದು ಸಂದರ್ಶನದಲ್ಲಿ ದೀಪಿಕಾ ಹೇಳಿಕೆ ನೀಡಿದ್ದಾರೆ.

ಏನೂ ತಿಳಿದಿರಲಿಲ್ಲ

''ನನಗೆ ಈ ಚಿತ್ರಕ್ಕೂ ಮುಂಚೆ ಹೇಗೆ ಕ್ಯಾಮರಾ ಎದುರಿಸಬೇಕು.. ಹೇಗೆ ನೋಡಬೇಕು.. ಯಾವ ರೀತಿ ಡೈಲಾಗ್ ಹೇಳಬೇಕು.. ಯಾವ ರೀತಿ ನಟನೆ ಮಾಡಬೇಕು ಯಾವುದು ತಿಳಿದೇ ಇರಲಿಲ್ಲ'' ಅಂತ ದೀಪಿಕಾ ಸಂದರ್ಶನದಲ್ಲಿ ಹೇಳಿದ್ದಾರೆ.

ನಂಬಿಕೆ ಇಟ್ಟಿದ್ದ ಶಾರೂಖ್, ಫಾರಾನ್

''ಯಾವುದೇ ಅನುಭವ ಇಲ್ಲದ ನನ್ನ ಮೇಲೆ ಶಾರೂಖ್ ಖಾನ್ ಮತ್ತು ಫರಾ ಖಾನ್ ನಂಬಿಕೆ ಇಟ್ಟಿದ್ದರು. ಅವರೇ ನನಗೆ ಧೈರ್ಯ ತುಂಬಿದರು'' ಎಂದು ಬಾಲಿವುಡ್ ಮಂದಿಯನ್ನು ಮಾತ್ರ ದೀಪಿಕಾ ಹೊಗಳಿದ್ದಾರೆ.

ಅನುಭವ ಇರಲಿಲ್ಲ

''ಮೊದಲ ಚಿತ್ರದಲ್ಲಿ ಎರಡು ಪಾತ್ರವನ್ನು ಮಾಡಿದ್ದೆ. ಅದಕ್ಕೂ ಮುಂಚೆ ನನಗೆ ನಟನೆ ಬಗ್ಗೆ ಸ್ವಲ್ಪವೂ ಅನುಭವ ಇರಲಿಲ್ಲ'' ಎಂದು ಹೇಳಿದ ದೀಪಿಕಾ 'ಐಶ್ವರ್ಯ' ಚಿತ್ರದ ಬಗ್ಗೆ ಬಾಯಿ ಬಿಟ್ಟಿಲ್ಲ.

'ಬಿಗ್ ಬಾಸ್' ಮನೆಗೆ ಹೋಗುತ್ತಿದ್ದಾರಂತೆ ನಟಿ ದೀಪಿಕಾ ಪಡುಕೋಣೆ

ಎಲ್ಲಾ ಮರೆತರು

ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಅಭಿನಯಿಸಿದ್ದು ಕನ್ನಡ 'ಐಶ್ವರ್ಯ' ಚಿತ್ರದಲ್ಲಿ. ಆದರೆ ಈ ಸಂದರ್ಶನದಲ್ಲಿ ಮಾತ್ರ ಅದರ ಬಗ್ಗೆ ಒಂದು ಮಾತು ಕೂಡ ಹೇಳಿಲ್ಲ. ಜೊತೆಗೆ ಮೊದಲ ಬಾರಿಗೆ ಸಿನಿಮಾ ಸೆಟ್ ಗೆ ಹೋಗಿದ್ದು 'ಓಂ ಶಾಂತಿ ಓಂ' ನಲ್ಲಿ, ಅದಕ್ಕೂ ಮುಂಚೆ ನಟನೆಯ ಅನುಭವ ಇಲ್ಲ ಅಂತ ಹೇಳಿದ್ದಾರೆ. ಅವರ ಈ ಮಾತುಗಳನ್ನು ಕೇಳಿದರೆ ಸಾಕು ಅವರ ಕನ್ನಡದ ಚಿತ್ರದ ಮೇಲಿನ ನಿಜವಾದ ಅಭಿಮಾನ ತಿಳಿಯುತ್ತದೆ.

ಯೂಟ್ಯೂಬ್ ನಲ್ಲಿ ನಂ1 ಟ್ರೆಂಡಿಂಗ್ ಆದ 'ಪದ್ಮಾವತಿ' ಮೊದಲ ಹಾಡು

ಒಂದು ವರ್ಷ ಗ್ಯಾಪ್ ಇತ್ತು

ಮೊದಲು ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಐಶ್ವರ್ಯ' ಸಿನಿಮಾದಲ್ಲಿ ದೀಪಿಕಾ ನಟಿಸಿದ್ದರು. 'ಐಶ್ವರ್ಯ' ನಂತರ 1 ವರ್ಷದ ಬಳಿಕ ಬಾಲಿವುಡ್ ಚಿತ್ರರಂಗಕ್ಕೆ ದೀಪಿಕಾ ಎಂಟ್ರಿ ಕೊಟ್ಟರು.

English summary
''Before 'Om shanti Om' I never entered any film set'' says Deepika Padukone. 'ಓಂ ಶಾಂತಿ ಓಂ' ಚಿತ್ರಕ್ಕೆ ಮುಂಚೆ ನಾನು ಯಾವುದೇ ಸಿನಿಮಾ ಸೆಟ್ ಗಳಿಗೂ ಸಹ ಹೋಗಿರಲ್ಲೇ ಇಲ್ಲ ಎಂದ ದೀಪಿಕಾ ಪಡುಕೋಣೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada