'ರಾಜಕುಮಾರ' ಜೊತೆ 'ಕಿರಿಕ್ ಪಾರ್ಟಿ' ಸಾಧನೆಯೂ ನೆನಪಿರಲಿ !
'ರಾಜಕುಮಾರ' ಸಿನಿಮಾದ 'ಬೊಂಬೆ ಹೇಳುತೈತೆ..' ಹಾಡು ಯೂ ಟ್ಯೂಬ್ ನಲ್ಲಿ 40 ಮಿಲಿಯನ್ ಹಿಟ್ಸ್ ಪಡೆದಿದೆ. ಆದರೆ ಈಗ 'ಕಿರಿಕ್ ಪಾರ್ಟಿ' ಸಿನಿಮಾ ಕೂಡ ಅದೇ ಸಾಧನೆ ಮಾಡಿದೆ.
'ಬೊಂಬೆ ಹೇಳುತೈತೆ..' ಹಾಡಿನ ರೀತಿ 'ಕಿರಿಕ್ ಪಾರ್ಟಿ' ಸಿನಿಮಾದ 'ಬೆಳಗೆದ್ದು..' ಹಾಡನ್ನು ಕೂಡ 40 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ಮೂಲಕ 'ಕಿರಿಕ್ ಪಾರ್ಟಿ' ಚಿತ್ರದ ಈ ಹಾಡು ಹೊಸ ಇತಿಹಾಸ ಬರೆದಿದೆ.

'ಕಿರಿಕ್ ಪಾರ್ಟಿ' ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದೆ. ಅದರಲ್ಲಿಯೂ 'ಬೆಳಗೆದ್ದು..' ಹಾಡು ದೊಡ್ಡ ಮಟ್ಟದ ಜನಪ್ರಿಯ ಪಡೆದಿದೆ. ಅದಕ್ಕೆ ಸಾಕ್ಷಿ ಸದ್ಯ ಯೂ ಟ್ಯೂಬ್ ನಲ್ಲಿ ಆಗಿರುವ ಈ ದಾಖಲೆ. ಅಂದಹಾಗೆ, ಈ ಹಾಡಿಗೆ ಕನ್ನಡದ ಯುವ ಮತ್ತು ಪ್ರತಿಭಾವಂತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮ್ಯೂಸಿಕ್ ನೀಡಿದ್ದು, ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ.
English summary
'Kirik Party' movie 'Belageddu' song has reached 40 million views in Youtube.


Click it and Unblock the Notifications