'ಬೊಂಬೆ ಹೇಳುತೈತೆ' ಹಾಡಿಗೂ ಮುಂಚೆ 2 ಕೋಟಿ ದಾಟಿದ್ದ ಹಾಡು ಯಾವುದು?
ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡು ಯ್ಯೂಟ್ಯೂಬ್ ನಲ್ಲಿ 2 ಕೋಟಿ ವೀಕ್ಷಕರನ್ನ ಪಡೆದು ದಾಖಲೆ ಮಾಡಿತ್ತು. ಈ ಹಾಡಿಗೂ ಮುಂಚೆ ಕನ್ನಡದ ಮತ್ತೊಂದು ಹಾಡು ಈ ದಾಖಲೆ ಮಾಡಿದೆ.
ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು ಯಾರ ಮುಖವ ನಾ ನೋಡಿದೆ' ಹಾಡು 2.8 ಕೋಟಿ ವೀಕ್ಷಕರನ್ನ ಹೊಂದಿದೆ. ಇದು 'ಕಿರಿಕ್ ಪಾರ್ಟಿ'ಯ ಹೊಸ ಮೈಲುಗಲ್ಲು.

ಧನಂಜಯ್ ರಂಜನ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಗಾಯಕ ವಿಜಯ ಪ್ರಕಾಶ್ ಈ ಹಾಡನ್ನ ಹಾಡಿದ್ದಾರೆ. ಈ ಸೂಪರ್ ಹಿಟ್ ಆಲ್ಬಂಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ 30 ರಂದು ತೆರೆಕಂಡಿದ್ದ 'ಕಿರಿಕ್ ಪಾರ್ಟಿ' ಸದ್ಯ 150 ದಿನಗಳ ಸಂಭ್ರಮವನ್ನ ಆಚರಿಸಿಕೊಂಡಿತ್ತು. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಈ ಚಿತ್ರದಲ್ಲಿ ಅಭಿನಯಿಸಿದ್ದರು. ರಿಷಬ್ ಶೆಟ್ಟಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.
More from Filmibeat
English summary
Kannada Song 'Belageddu' From Rakshit Shetty Starrer 'Kirik Party' Reached 28 Million Views in Youtube.
rakshit shetty sandalwood song ರಕ್ಷಿತ್ ಶೆಟ್ಟಿ ಹಾಡು ಸ್ಯಾಂಡಲ್ ವುಡ್ puneeth rajkumar ಪುನೀತ್ ರಾಜ್ ಕುಮಾರ್


Click it and Unblock the Notifications











