'ತ್ರಿವಿಕ್ರಮ' ಸಿನಿಮಾ ನೋಡಲು ರಜೆ, 5 ಅಂಕ ಹೆಚ್ಚುವರಿ! ಪ್ರಾಂಶುಪಾಲ ಘೋಷಣೆ

ರವಿಚಂದ್ರನ್ ಪುತ್ರ ವಿಕ್ರಮ್ ನಟಿಸಿರುವ 'ತ್ರಿವಿಕ್ರಮ' ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಜೋರಾಗಿ ಮಾಡುತ್ತಿದೆ.

ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ತೆರಳಿ ಕಾಲೇಜುಗಳಲ್ಲಿ ಸಿನಿಮಾದ ಪ್ರಚಾರವನ್ನು ಚಿತ್ರತಂಡ ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ, ದಾವಣಗೆರೆಯ ಕಾಲೇಜೊಂದರಲ್ಲಿ ನಾಯಕ ವಿಕ್ರಮ್ ಹಾಗೂ ನಾಯಕಿ ಆಕಾಂಕ್ಷಾ ನೃತ್ಯ ಮಾಡಿ ರಂಜಿಸಿದ್ದಾರೆ.

ಬೆಳಗಾವಿಯಲ್ಲಿಯೂ ಹಲವು ಕಾಲೇಜುಗಳಿಗೆ ತೆರಳಿರುವ ಚಿತ್ರತಂಡ ಸಿನಿಮಾದ ಪ್ರಚಾರ ಮಾಡಿದೆ. ಬೆಳಗಾವಿಯ ಒಂದು ಕಾಲೇಜಿಗೆ ಚಿತ್ರತಂಡ ತೆರಳಿದಾಗ ನಡೆಸಿದ ಕಾರ್ಯಕ್ರಮದಲ್ಲಿ ಆ ಕಾಲೇಜಿನ ಪ್ರಾಂಶುಪಾಲರು ಅತಿ ಉತ್ಸಾಹದಲ್ಲಿ ಘೋಷಣೆ ಒಂದನ್ನು ಮಾಡಿಬಿಟ್ಟಿದ್ದಾರೆ.

ಸಿನಿಮಾ ನೋಡಿದರೆ ಗ್ರೇಸ್ ಮಾರ್ಕ್ಸ್!

ಸಿನಿಮಾ ನೋಡಿದರೆ ಗ್ರೇಸ್ ಮಾರ್ಕ್ಸ್!

ಕಾಲೇಜುಗಳಲ್ಲಿ ಕೃಪಾಂಕ ಅಥವಾ ಗ್ರೇಸ್ ಮಾರ್ಕ್‌ಗಳನ್ನು ವಿದ್ಯಾರ್ಥಿಗಳ ವರ್ತನೆ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆ, ವ್ಯಕ್ತಿತ್ವ, ಸಮಾಜಕ್ಕೆ ಸೇವೆ ಇನ್ನಿತರ ಕಾರಣಕ್ಕೆ ಕೊಡಲಾಗುತ್ತದೆ. ಆದರೆ ಬೆಳಗಾವಿಯ (ಜೆಜಿಐ) ಜೈನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಸಿನಿಮಾ ನೋಡಿದರೆ 5 ಗ್ರೇಸ್ ಅಂಕ ನೀಡುವುದಾಗಿ ಘೋಷಿಸಿದ್ದಾರೆ. ಸಿನಿಮಾ ನೋಡಲು ರಜೆಯನ್ನೂ ಸಹ ನೀಡುವುದಾಗಿ ಹೇಳಿದ್ದಾರೆ.

ಸಿನಿಮಾ ನೋಡಲು ರಜೆ ಘೋಷಿಸಿದ ಪ್ರಾಂಶುಪಾಲ!

ಸಿನಿಮಾ ನೋಡಲು ರಜೆ ಘೋಷಿಸಿದ ಪ್ರಾಂಶುಪಾಲ!

ಬೆಳಗಾವಿಯ ಜೆಜಿಐ ಕಾಲೇಜಿಗೆ 'ತ್ರಿವಿಕ್ರಮ' ಚಿತ್ರತಂಡ ಪ್ರಚಾರಕ್ಕೆ ತೆರಳಿದ್ದ ವೇಳೆ ಕಾಲೇಜಿನ ವತಿಯಿಂದ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ವೇದಿಕೆ ಮೇಲೆ ಮಾತನಾಡಿರುವ ಕಾಲೇಜಿನ ಪ್ರಾಂಶುಪಾಲರು. ವೇದಿಕೆ ಮೇಲೆ ಬಹಳ ಉತ್ಸಾಹದಿಂದ ಭಾಷಣ ಮಾಡಿದ್ದು, ಹಾಡೊಂದನ್ನು ಸಹ ಹಾಡಿದ್ದಾರೆ. ಅಲ್ಲದೆ, 'ತ್ರಿವಿಕ್ರಮ' ಸಿನಿಮಾ ವೀಕ್ಷಿಸಲು ಶನಿವಾರ ಅರ್ಧ ದಿನ ರಜೆ ನೀಡುವುದಾಗಿ ಘೋಷಿಸಿದ್ದಾರೆ. ಮುಂದುವರೆದು, ಟಿಕೆಟ್ ವೀಕ್ಷಿಸಿ ಆ ಟಿಕೆಟ್ ಅನ್ನು ತಂದು ತೋರಿಸಿದರೆ ಐದು ಗ್ರೇಸ್ ಮಾರ್ಕ್‌ ಅನ್ನು ಸಹ ನೀಡುವುದಾಗಿ ಹೇಳಿದ್ದಾರೆ. ಪ್ರಾಂಶುಪಾಲರ ಈ ಆಫರ್‌ಗೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ.

ಪ್ರೀತಿ ನೀಡಿ ಗೆಲ್ಲಿಸಿ ಎಂದ ವಿಕ್ರಮ್

ಪ್ರೀತಿ ನೀಡಿ ಗೆಲ್ಲಿಸಿ ಎಂದ ವಿಕ್ರಮ್

''ಪ್ರತಿಯೊಬ್ಬರಿಗೂ ಒಂದು ಬೆಲ್ಟ್ ಇರುತ್ತದೆ. ಅದೇ ರೀತಿಯಲ್ಲಿ ಹೀರೋಗೂ ಕರ್ನಾಟಕದಲ್ಲಿ ಬೆಲ್ಟ್ ಇದ್ದೇ ಇರುತ್ತೆ. ನನ್ನ ತಂದೆಗೆ ಸಿನಿ ಪ್ರೇಕ್ಷಕರು ತುಂಬಾ ಪ್ರೀತಿ ತೋರಿಸಿದ್ದಾರೆ. 'ತ್ರಿವಿಕ್ರಮ' ಜೂನ್ 24 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ದಾವಣಗೆರೆಯಲ್ಲಿ ಅರುಣಾ, ಅಶೋಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಮೂಲಕ ನಿಮ್ಮ ಮನಸು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಪ್ರತಿಯೊಬ್ಬರೂ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹ ಕೊಡಿ ಎಂದು ಚಿತ್ರತಂಡ ದಾವಣಗೆರೆಗೆ ಆಗಮಿಸಿದ್ದಾರೆ ಮನವಿ ಮಾಡಿದ್ದರು ನಟ ವಿಕ್ರಮ್.

ಪ್ರೇಮಕತೆಯುಳ್ಳ ಸಿನಿಮಾ 'ತ್ರಿವಿಕ್ರಮ'

ಪ್ರೇಮಕತೆಯುಳ್ಳ ಸಿನಿಮಾ 'ತ್ರಿವಿಕ್ರಮ'

'ತ್ರಿವಿಕ್ರಮ' ಸಿನಿಮಾವು ರವಿಚಂದ್ರನ್‌ನ ಎರಡನೇ ಮಗ ವಿಕ್ರಮ್‌ರ ಮೊದಲ ಸಿನಿಮಾ (ನಾಯಕನಾಗಿ) ಆಗಿದ್ದು, ಸಿನಿಮಾದಲ್ಲಿ ಬೆಡಗಿ ಆಕಾಂಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ಸಹನ ಎಚ್‌ಎಸ್ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶಿವಮಣಿ, ಅಕ್ಷರಾ ಗೌಡ ಇನ್ನೂ ಕೆಲವರು ನಟಿಸಿದ್ದಾರೆ. ತುಂಬಾ ಮುಗ್ಧ ಹುಡುಗನಿಗೆ ಜೈನ ಧರ್ಮದ ಯುವತಿಯೊಬ್ಬಾಕೆ ಜೊತೆ ಪ್ರೇಮವಾಗುತ್ತದೆ. ಆ ನಂತರ ಅವರ ಪ್ರೇಮಕ್ಕೆ ಯಾವ ಅಡೆ-ತಡೆಗಳು ಎದುರಾಗುತ್ತವೆ. ಪ್ರೀತಿಯನ್ನು ಅವರು ಹೇಗೆ ಧಕ್ಕಿಸಿಕೊಳ್ಳುತ್ತಾರೆ ಎಂಬುದು ಸಿನಿಮಾದ ಕತೆ.

More from Filmibeat

English summary
Belgaum JGI college principle announce half day leave to watch Trivikrama Kannada movie. And also announce 5 grace marks for watching movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X