ಜನವರಿ 27ಕ್ಕೆ 'ಬೆಲ್ ಬಾಟಂ' ಸೀಕ್ವೆಲ್ ಚಿತ್ರದ ಶೀರ್ಷಿಕೆ ಅನಾವರಣ

ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯಾ ನಟಿಸಿದ್ದ ಸೂಪರ್ ಹಿಟ್ ಚಿತ್ರ ಬೆಲ್ ಬಾಟಂ. 2019ರಲ್ಲಿ ತೆರೆಕಂಡಿದ್ದ ಈ ಸಿನಿಮಾದ ಮುಂದುವರಿದ ಭಾಗ ಬರಲಿದೆ. ಹೊಸ ಥ್ರಿಲ್ಲಿಂಗ್ ಪ್ರಕರಣದೊಂದಿಗೆ ಡಿಟೆಕ್ಟಿವ್ ದಿವಾಕರ್ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಜಯತೀರ್ಥ ಅವರೇ ಮುಂದುವರಿದ ಭಾಗಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದು, ಈ ಚಿತ್ರದ ಶೀರ್ಷಿಕೆಯನ್ನು ಜನವರಿ 27 ತಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಸದ್ಯಕ್ಕೆ ರಿಷಭ್ ಶೆಟ್ಟಿ ನಾಯಕನಾಗಿ ಮುಂದುವರಿಯುವುದು ಖಚಿತವಾಗಿದೆ. ಆದರೆ, ಹರಿಪ್ರಿಯಾ ಸೇರಿದಂತೆ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಲಾವಿದರು ಇರಲಿದ್ದಾರಾ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ.

Bell Bottom 2 Movie Official Title Revealing On Jan 27th

ಹೊಸ ಸುದ್ದಿ ಏನಪ್ಪಾ ಅಂದ್ರೆ 'ಬೆಲ್ ಬಾಟಂ-2' ಚಿತ್ರದಲ್ಲಿ ತಾನ್ಯ ಹೋಪ್ ಇರಲಿದ್ದಾರೆ ಎನ್ನುವುದು. 'ಯಜಮಾನ' ಚಿತ್ರದಲ್ಲಿ ಡಿ ಬಾಸ್ ಜೊತೆ ಬಸಣ್ಣಿ ಬಾ ಎಂದು ಕುಣಿದಿದ್ದ ತಾನ್ಯ ಡಿಟೆಕ್ಟಿವ್ ದಿವಾಕರ್‌ಗೆ ಸಾಥ್ ನೀಡುವ ಸಾಧ್ಯತೆ ಹೆಚ್ಚಿದೆ.

ಜಯತೀರ್ಥ ಅವರು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪುತ್ರ ನಟನೆಯ 'ಬನಾರಸ್' ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಬಿಡುಗಡೆಗೆ ತಯಾರಾಗಿದ್ದಾರೆ. ಈ ಕಡೆ ರಿಷಭ್ ಶೆಟ್ಟಿ ಹೀರೋ, ಹರಿಕಥೆ ಅಲ್ಲ ಗಿರಿಕಥೆ, ಮಹಾನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಪ್ರಾಜೆಕ್ಟ್‌ ಕೈಯಲ್ಲಿಟ್ಟುಕೊಂಡಿದ್ದಾರೆ.

More from Filmibeat

English summary
Kannada actor-director Rishab Shetty's Much Awaited Sequel Bell Bottom 2 Movie Official Title Revealing On Jan 27th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X