For Quick Alerts
  ALLOW NOTIFICATIONS  
  For Daily Alerts

  ಜನವರಿ 27ಕ್ಕೆ 'ಬೆಲ್ ಬಾಟಂ' ಸೀಕ್ವೆಲ್ ಚಿತ್ರದ ಶೀರ್ಷಿಕೆ ಅನಾವರಣ

  |

  ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯಾ ನಟಿಸಿದ್ದ ಸೂಪರ್ ಹಿಟ್ ಚಿತ್ರ ಬೆಲ್ ಬಾಟಂ. 2019ರಲ್ಲಿ ತೆರೆಕಂಡಿದ್ದ ಈ ಸಿನಿಮಾದ ಮುಂದುವರಿದ ಭಾಗ ಬರಲಿದೆ. ಹೊಸ ಥ್ರಿಲ್ಲಿಂಗ್ ಪ್ರಕರಣದೊಂದಿಗೆ ಡಿಟೆಕ್ಟಿವ್ ದಿವಾಕರ್ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

  ಜಯತೀರ್ಥ ಅವರೇ ಮುಂದುವರಿದ ಭಾಗಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದು, ಈ ಚಿತ್ರದ ಶೀರ್ಷಿಕೆಯನ್ನು ಜನವರಿ 27 ತಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

  ರಿಷಬ್ ಶೆಟ್ಟಿ 'ಬೆಲ್ ಬಾಟಂ-2'ಗೆ ಎಂಟ್ರಿ ಕೊಟ್ಟ 'ಯಜಮಾನ'ನ ಬಸಣ್ಣಿ ರಿಷಬ್ ಶೆಟ್ಟಿ 'ಬೆಲ್ ಬಾಟಂ-2'ಗೆ ಎಂಟ್ರಿ ಕೊಟ್ಟ 'ಯಜಮಾನ'ನ ಬಸಣ್ಣಿ

  ಸದ್ಯಕ್ಕೆ ರಿಷಭ್ ಶೆಟ್ಟಿ ನಾಯಕನಾಗಿ ಮುಂದುವರಿಯುವುದು ಖಚಿತವಾಗಿದೆ. ಆದರೆ, ಹರಿಪ್ರಿಯಾ ಸೇರಿದಂತೆ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಲಾವಿದರು ಇರಲಿದ್ದಾರಾ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ.

  ಹೊಸ ಸುದ್ದಿ ಏನಪ್ಪಾ ಅಂದ್ರೆ 'ಬೆಲ್ ಬಾಟಂ-2' ಚಿತ್ರದಲ್ಲಿ ತಾನ್ಯ ಹೋಪ್ ಇರಲಿದ್ದಾರೆ ಎನ್ನುವುದು. 'ಯಜಮಾನ' ಚಿತ್ರದಲ್ಲಿ ಡಿ ಬಾಸ್ ಜೊತೆ ಬಸಣ್ಣಿ ಬಾ ಎಂದು ಕುಣಿದಿದ್ದ ತಾನ್ಯ ಡಿಟೆಕ್ಟಿವ್ ದಿವಾಕರ್‌ಗೆ ಸಾಥ್ ನೀಡುವ ಸಾಧ್ಯತೆ ಹೆಚ್ಚಿದೆ.

  ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ

  ಜಯತೀರ್ಥ ಅವರು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪುತ್ರ ನಟನೆಯ 'ಬನಾರಸ್' ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಬಿಡುಗಡೆಗೆ ತಯಾರಾಗಿದ್ದಾರೆ. ಈ ಕಡೆ ರಿಷಭ್ ಶೆಟ್ಟಿ ಹೀರೋ, ಹರಿಕಥೆ ಅಲ್ಲ ಗಿರಿಕಥೆ, ಮಹಾನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಪ್ರಾಜೆಕ್ಟ್‌ ಕೈಯಲ್ಲಿಟ್ಟುಕೊಂಡಿದ್ದಾರೆ.

  ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಇನ್ನಿಲ್ಲಾ | Filmibeat Kannada
  English summary
  Kannada actor-director Rishab Shetty's Much Awaited Sequel Bell Bottom 2 Movie Official Title Revealing On Jan 27th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X