For Quick Alerts
  ALLOW NOTIFICATIONS  
  For Daily Alerts

  ರಿಷಬ್ ಸೆಂಚುರಿ : ನೂರು ದಿನ ಪೂರೈಸಿದ 'ಬೆಲ್ ಬಾಟಂ'

  |

  ಒಂದು ಒಳ್ಳೆಯ ಕಥೆ, ಹೊಸತನದ ಪ್ರಯೋಗ ಇದ್ದರೆ ಸಿನಿಮಾ ಗೆಲ್ಲುತ್ತದೆ ಎನ್ನುವುದು ಮತ್ತೆ ಸಾಬೀತಾಗಿದೆ. 'ಬೆಲ್ ಬಾಟಂ' ಸಿನಿಮಾ ಇಂದಿಗೆ (ಶುಕ್ರವಾರ) ಸರಿಯಾಗಿ ನೂರು ದಿನಗಳನ್ನು ಪೂರೈಸಿದೆ.

  ಐಪಿಎಲ್ ಹಾಗೂ ಚುನಾವಣೆಯ ನಡುವೆಯೂ ಈ ಸಿನಿಮಾ ತನ್ನ ಶಕ್ತಿ ತೋರಿಸಿದೆ. ಬೆಂಗಳೂರಿನ ಸ್ವಪ್ನ, ವೀರೇಶ್, ಸವಿತ, ಸೇರಿದಂತೆ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ಈಗಲೂ ಪ್ರದರ್ಶನ ಆಗುತ್ತಿದೆ.

  Bell Bottom Review : ಕಿಲಾಡಿ ದಿವಾಕರನ ಕಳ್ಳ, ಪೊಲೀಸ್ ಆಟ Bell Bottom Review : ಕಿಲಾಡಿ ದಿವಾಕರನ ಕಳ್ಳ, ಪೊಲೀಸ್ ಆಟ

  ಮೈಸೂರು, ಶಿವಮೊಗ್ಗ, ದಾವಣಗೆರೆ, ಉಡುಪಿ ಸೇರಿದಂತೆ ಕೆಲ ಜಿಲ್ಲಾ ಕೇಂದ್ರದಲ್ಲಿಯೂ ಸಿನಿಮಾ ಓಡುತ್ತಿದೆ. ಈ ಖುಷಿಯನ್ನು ಚಿತ್ರತಂಡ ಪ್ರೇಕ್ಷಕರ ಜೊತೆಗೆ ಹಂಚಿಕೊಳ್ಳಲು ನಿರ್ಧಾರ ಮಾಡಿದೆ.

  ನಾಳೆ (ಮೇ 25) ಬೆಂಗಳೂರಿನ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ ಸಂಜೆ 6 ಗಂಟೆಗೆ 100 ದಿನಗಳ ಯಶಸ್ವಿ ಪ್ರದರ್ಶನದ ಸಂಭ್ರಮವನ್ನು ಪ್ರೇಕ್ಷಕರ ಜೊತೆ ಚಿತ್ರತಂಡ ಸೆಲಿಬ್ರೇಟ್ ಮಾಡುತ್ತಿದೆ

  ಇನ್ನು ತಮ್ಮ ಸಂತಸ ಹಂಚಿಕೊಂಡಿರುವ ನಿರ್ದೇಶಕ ಜಯತೀರ್ಥ ''ಇವತ್ತಿಗೆ ಬೆಲ್ ಬಾಟಂ ನೂರು ದಿನಗಳ ಪ್ರದರ್ಶನವನ್ನು ಪೂರೈಸಿದೆ. ನಮ್ಮನ್ನು ಸಮೃದ್ಧಿಯೊಂದಿಗೆ 100 ರ ಗಡಿದಾಟಿಸಿ ಮುನ್ನಡೆಸುತ್ತಿರುವ ಅನ್ನದಾತರಿಗೆ ಮತ್ತು ಬೆಲ್ ಬಾಟಂ ಕಟ್ಟಲು ನನಗೆ ಬೆನ್ನೆಲುಬಾದ ನನ್ನ ನಿರ್ಮಾಪಕರು, ತಂತ್ರಜ್ಞರು, ಕಲಾವಿದರು, ಸಂಗೀತ-ಸಾಹಿತಿಗಳು ಮತ್ತು ವಿತರಕರಿಗೆ ಅನಂತಾನಂತ ಕೃತಜ್ಞತೆಗಳು. Love You All'' ಎಂದಿದ್ದಾರೆ.

  'ಬೆಲ್ ಬಾಟಂ' ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಆಗಿತ್ತು. ಹರಿಪ್ರಿಯಾ ನಾಯಕಿಯಾಗಿದ್ದರು. ಸಿನಿಮಾದ ಕಾಮಿಡಿ, ಹಾಡುಗಳು, ನಿರೂಪಣಾ ಶೈಲಿ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿತ್ತು.

  English summary
  Actor Rishab Shett and Hariprriya' 'Bell Bottom' kannada movie completes 100 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X