'ಬೆಲ್ ಬಾಟಂ' ಹಾಕಿ ಬಂದ ಯೋಗರಾಜ್ ಭಟ್
ನಿರ್ದೇಶಕ ರಿಷಬ್ ಶೆಟ್ಟಿ ನಟನೆಯ 'ಬೆಲ್ ಬಾಟಂ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಟ ಹಾಗೂ ರಿಷಬ್ ಸ್ನೇಹಿತ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ದಾರೆ.
ವಿಶೇಷ ಅಂದರೆ, ನಿರ್ದೇಶಕ ಯೊಗರಾಜ್ ಭಟ್ ಹಾಗೂ ಶಿವಮಣಿ ಟೀಸರ್ ನಲ್ಲಿ ಕಾಣಿಸಿದ್ದಾರೆ. ಈ ಹಿಂದೆ 'ದ್ಯಾವ್ರೇ' ಚಿತ್ರದಲ್ಲಿ ನಟಿಸಿದ್ದ ಯೋಗರಾಜ್ ಭಟ್ ಲಾಂಗ್ ಗ್ಯಾಪ್ ಬಳಿಕ ಒಂದು ಪಾತ್ರ ಮಾಡಿದ್ದಾರೆ.
'ವೆನಿಲ್ಲಾ' ಚಿತ್ರದ ಬಳಿಕ ಮತ್ತೆ ನಿರ್ದೇಶಕ ಜಯತೀರ್ಥ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಪ್ರತಿ ಸಿನಿಮಾದಲ್ಲಿಯೂ ಹೊಸ ರೀತಿಯ ಕಥೆ ಹೇಳುವ ಅವರು ಈಗ ಪತ್ತೆದಾರಿ ಕಥೆ ಹೇಳಲು ಶುರುಮಾಡಿದ್ದಾರೆ.

ಡಿಟೆಕ್ಟಿವ್ ದಿವಕರ್ ಆಗಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಚಿತ್ರದ ಮೇಲೆ ಆಸಕ್ತಿ ಹುಟ್ಟುವಂತೆ ಮಾಡುತ್ತದೆ. ಕಾಮಿಡಿ ಟಚ್ ಕೂಡ ಟೀಸರ್ ನಲ್ಲಿದೆ. ಹರಿಪ್ರಿಯಾ ಸಿನಿಮಾದ ನಾಯಕಿಯಾಗಿದ್ದಾರೆ. 'ಬೆಲ್ ಬಾಟಂ' ಮುಂದಿನ ವರ್ಷ ಬಿಡುಗಡೆ ಆಗಲಿದೆ.
English summary
Rishab Shetty and Haripriya's 'Bell Bottom' Kannada movie teaser released. The movie is directed by Jayatheertha.
haripriya rishab shetty jayatheertha kannada movies sandalwood ಹರಿಪ್ರಿಯಾ ಜಯತೀರ್ಥ ಕನ್ನಡ ಸಿನಿಮಾ ಸ್ಯಾಂಡಲ್ ವುಡ್


Click it and Unblock the Notifications