ವಿಡಿಯೋ : ರಿಷಭ್ ಶೆಟ್ಟಿ ಹೇಳುವ ಹರಿಕಥೆ ಕೇಳಿ
ನಿರ್ದೇಶಕ ರಿಷಭ್ ಶೆಟ್ಟಿ 'ಬೆಲ್ ಬಾಟಂ' ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳುತ್ತಿದ್ದಾರೆ. ಈ ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ.
ಚಿತ್ರದ ಟೀಸರ್ ಮತ್ತು ಹಾಡು ಈಗಾಗಲೇ ಹಿಟ್ ಆಗಿದೆ. ಅದೇ ರೀತಿ ಟ್ರೇಲರ್ ಕೂಡ ಮುನ್ನುಗುತ್ತಿದೆ. ನಿನ್ನೆ ಸಂಜೆ ರಿಲೀಸ್ ಆಗಿರುವ ಟ್ರೇಲರ್ ಯೂ ಟ್ಯೂಬ್ ನಲ್ಲಿ 15 ಗಂಟೆಯ ಒಳಗೆ 2 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ.

ಈ ಸಿನಿಮಾ ಪ್ರತಿ ಹಂತದಲ್ಲಿಯೂ ವಿಭಿನ್ನವಾಗಿದೆ ಎಂದು ಸಾಭೀತು ಮಾಡುತ್ತಿದೆ. ಚಿತ್ರದ ಟ್ರೇಲರ್ ಕೂಡ ಡಿಫರೆಂಟ್ ಆಗಿದೆ. ಹರಿಕಥೆಯ ಮೂಲಕ ಚಿತ್ರವನ್ನು ವಿವರಿಸಿರುವ ಶೈಲಿ ವಿಶೇಷವಾಗಿದೆ. ಸಿನಿಮಾ ಪಕ್ಕಾ ಮನರಂಜನೆ ನೀಡಲಿದೆ ಎನ್ನುವುದನ್ನು ಟ್ರೇಲರ್ ಹೇಳುತ್ತಿದೆ.
ರಿಷಭ್ ಶೆಟ್ಟಿ, ಹರಿಪ್ರಿಯಾ ಸಿನಿಮಾದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜಯತೀರ್ಥ ಚಿತ್ರದ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಗಮನ ಸೆಳೆಯುತ್ತಿದೆ.
ಅಂದಹಾಗೆ, 'ಬೆಲ್ ಬಾಟಂ' ಸಿನಿಮಾ ಇದೇ ತಿಂಗಳ 18 ರಂದು ಬಿಡುಗಡೆಯಾಗಲಿದೆ.
English summary
'Bell Bottom'' kannada movie trailer got positive response.


Click it and Unblock the Notifications