ಬಾಲಿವುಡ್ ಗೆ ಹೊರಟ 'ಬೆಲ್ ಬಾಟಮ್', ನಾಯಕ ಯಾರು?
ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಬೆಲ್ ಬಾಟಮ್ ಸಿನಿಮಾ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ರೆಟ್ರೋ ಸ್ಟೈಲ್ ನಲ್ಲಿ ಮೂಡಿಬಂದಿದ್ದ ಕಾಮಿಡಿ ಥ್ರಿಲ್ಲರ್ ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು.
ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಷಬ್ ಶೆಟ್ಟಿ ನಟನೆಯಲ್ಲೂ ಕಮಾಲ್ ಮಾಡಿದ್ರು. ಇದೀಗ, ಈ ಚಿತ್ರ ಬಾಲಿವುಡ್ ಕಡೆ ಹೊರಟಿದೆ. ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಯಶಸ್ಸು ಕಂಡ ಬೆಲ್ ಬಾಟಮ್ ಹಿಂದಿಯಲ್ಲಿ ರೀಮೇಕ್ ಆಗಲಿದೆ.
ಹಿಂದಿಯ ಖ್ಯಾತ ನಿರ್ಮಾಣ ಸಂಸ್ಥೆ ಕೆಎನ್ಎನ್ ಎಂಟರ್ ಪ್ರೈಸಸ್ ಹಿಂದಿ ರೀಮೇಕ್ ಹಕ್ಕು ಖರೀದಿಸಿದ್ದು, 75 ಲಕ್ಷ ನೀಡಿದ್ದಾರಂತೆ. ಈಗ, ಹಿಂದಿಯಲ್ಲಿ ಈ ಚಿತ್ರಕ್ಕೆ ನಾಯಕ ಯಾರಾಗಬಹುದು ಎಂಬ ಕುತೂಹಲ ಕಾಡ್ತಿದೆ.

ಹಿಂದಿಯಲ್ಲಿ ಮಾತ್ರವಲ್ಲ ಸೌತ್ ಇಂಡಸ್ಟ್ರಿಯಲ್ಲೂ ಬೆಲ್ ಬಾಟಮ್ ಸಿನಿಮಾ ರೀಮೇಕ್ ಆಗ್ತಿದೆ. ಈಗಾಗಲೇ ತಮಿಳಿನಲ್ಲಿ ನಟ ಆರ್ಯ ಈ ಸಿನಿಮಾ ಮಾಡುವ ಸಾಧ್ಯತೆ ಇದೆ. ಅಷ್ಟರಲ್ಲೇ ತೆಲುಗಿನಲ್ಲೂ ರೀಮೇಕ್ ಆಗುತ್ತೆ ಎಂಬ ವಿಷ್ಯವನ್ನ ಸ್ವತಃ ನಿರ್ದೇಶಕ ಜಯತೀರ್ಥ ಅವರೇ ತಿಳಿಸಿದ್ದಾರೆ.
ಇನ್ನುಳಿದಂತೆ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡಿರುವ ಬೆಲ್ ಬಾಟಮ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಶೇಷ ಅಂದ್ರೆ, ಅಜನೀಶ್ ಗೆ ಇದು 25ನೇ ಚಿತ್ರ.


Click it and Unblock the Notifications











