'ಅಷ್ಟಾವಕ್ರ' ಚಿತ್ರದೊಂದಿಗೆ ಬೆಳ್ಳಿಮಾತುಗಳು, ಬನ್ನಿ ಪಾಲ್ಗೊಳ್ಳಿ

By Suneetha

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ನಡೆಸುವ 'ಬೆಳ್ಳಿಸಿನಿಮಾ ಬೆಳ್ಳಿಮಾತು' ಕಾರ್ಯಕ್ರಮದಲ್ಲಿ ಜೂನ್ 18, ಶನಿವಾರದಂದು, ನಿರ್ದೇಶಕ ರಾಜಾರವಿಶಂಕರ್ ನಿರ್ದೇಶನದ 'ಅಷ್ಟಾವಕ್ರ' ಎಂಬ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಐತಿಹಾಸಿಕ ಕಥೆಯುಳ್ಳ 'ಅಷ್ಟಾವಕ್ರ' ಚಿತ್ರತಂಡದ ಜೊತೆ ಇಂದು (ಜೂನ್ 18) ಸಂಜೆ 4 ಘಂಟೆಗೆ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬೆಳ್ಳಿ ಮಾತು ಸಂವಾದ ಕಾರ್ಯಕ್ರಮ ಜರುಗಲಿದೆ.['ಕನ್ನಡ ಚಿತ್ರಗಳ ಚೈತ್ರಕಾಲ' ವಿಶೇಷ ಕಾರ್ಯಕ್ರಮಕ್ಕೆ ನೀವೂ ಬನ್ನಿ]

'Belli Cinema-Belli Mathu' Kannada Movie 'Ashtaavakra'

ಚಿತ್ರದ ನಿರ್ದೇಶಕ ರಾಜಾರವಿಶಂಕರ್ ಅವರು ಚಿತ್ರದ ಬಗ್ಗೆ ಬೆಳ್ಳಿ ಮಾತುಗಳನ್ನಾಡಲಿದ್ದು, ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇನ್ನುಳಿದಂತೆ ಹಿರಿಯ ಕಲಾವಿದ ಮತ್ತು ಚಿತ್ರ ನಿರ್ಮಾಪಕ ಡಾ.ಎಂ.ಕೆ ಸುಂದರರಾಜನ್, ಹಿರಿಯ ಕಲಾವಿದೆ ಪ್ರಮೀಳಾ ಜೋಷಾಯ್ ಮತ್ತು ನಟಿ ಮೇಘನಾ ರಾಜ್ ಅವರು ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ 'ಅಷ್ಟಾವಕ್ರ' ಚಿತ್ರದ ಪ್ರದರ್ಶನ ಏರ್ಪಡಿಸಿ ತದನಂತರ ಚಿತ್ರದ ಬಗ್ಗೆ ದೀರ್ಘ ಚರ್ಚಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ವಹಿಸಲಿದ್ದಾರೆ...

More from Filmibeat

English summary
Kannada Movie 'Ashtaavakra', 'Belli Cinema-Belli Mathu' movie shows and discussions by Karnataka Chalanachitra Academy is organised in Chamundeshwari Theater, Millers Road, Bengaluru on June 18th, Saturday at 4 o clock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X