'ವಿದಾಯ' ಚಲನಚಿತ್ರದ ಜೊತೆ ಬೆಳ್ಳಿ ಮಾತುಗಳು

By Suneetha

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ನಡೆಸುವ 'ಬೆಳ್ಳಿ ಸಿನಿಮಾ ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಈ ಶನಿವಾರ ನಿರ್ದೇಶಕ ಪಿ.ಶೇಷಾದ್ರಿ ಅವರ 'ವಿದಾಯ' ಸಿನಿಮಾ ಪ್ರದರ್ಶನಗೊಳ್ಳಲಿದೆ.

ನಟಿ ಲಕ್ಷ್ಮಿ ಗೋಪಾಲ ಸ್ವಾಮಿ, ಹಿರಿಯ ನಟ ದತ್ತಣ್ಣ, ನಟ ಸುಚೇಂದ್ರ ಪ್ರಸಾದ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿರುವ 'ವಿದಾಯ' ಸಿನಿಮಾ ಬೆಳ್ಳಿ ಸಿನಿಮಾ ಬೆಳ್ಳಿ ಮಾತು ಕಾರ್ಯಕ್ರಮಕ್ಕೆ ಈ ಬಾರಿ ಆಯ್ಕೆ ಆಗಿದೆ.[ಬೆಳ್ಳಿ ಮಾತಿನಲ್ಲಿ ಪವರ್ ಸ್ಟಾರ್ ಪವರ್ ಫುಲ್ ಮಾತುಗಳು]

'Belli Cinema-Belli Mathu' Kannada Movie 'Vidaaya'

ಫೆಬ್ರವರಿ 20 ರಂದು ಶನಿವಾರ ಸಂಜೆ 4-00 ಗಂಟೆಗೆ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬೆಳ್ಳಿ ಸಿನಿಮಾ "ವಿದಾಯ" ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಹೆಚ್. ಬಿ. ದಿನೇಶ್ ಅವರು ತಿಳಿಸಿದ್ದಾರೆ.[ಬೆಳ್ಳಿ ಸಿನಿಮಾದಲ್ಲಿ 'ರಂಗಿತರಂಗ' ತಂಡದ ಬೆಳ್ಳಿ ಮಾತು]

'Belli Cinema-Belli Mathu' Kannada Movie 'Vidaaya'

ಅಂದಹಾಗೆ "ವಿದಾಯ " ಚಲನಚಿತ್ರ ಪ್ರದರ್ಶನದ ನಂತರ ಚಿತ್ರದ ನಿರ್ದೇಶಕ ಪಿ. ಶೇಷಾದ್ರಿ ಅವರ ಬೆಳ್ಳಿಮಾತು - ಸಂವಾದ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ "ವಿದಾಯ" ಚಿತ್ರದ ನಿರ್ಮಾಪಕ ಬಸಂತ ಕುಮಾರ್ ಪಾಟೀಲ್, ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗೂ ಚಿತ್ರನಟಿ ಲಕ್ಷ್ಮೀ ಗೋಪಾಲಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ವಹಿಸಲಿದ್ದಾರೆ.

More from Filmibeat

English summary
Kannada Movie 'Vidaaya', 'Belli Cinema-Belli Mathu' movie shows and discussions by Karnataka Chalanachitra Academy is organised in Chamundeshwari Theater, Millers Road, Bengaluru on December 26th, Saturday at 4 o clock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X