For Quick Alerts
  ALLOW NOTIFICATIONS  
  For Daily Alerts

  'ಎದೆಗಾರಿಕೆ' ಬಗ್ಗೆ ಸುಮನಾ ಕಿತ್ತೂರು ಜೊತೆ ಬೆಳ್ಳಿ ಮಾತು

  By Suneetha
  |

  ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರತಿ ಶನಿವಾರ ನಡೆಸುವ 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಈ ಶನಿವಾರ (ಡಿಸೆಂಬರ್ 05) 'ಎದೆಗಾರಿಕೆ' ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಚಿತ್ರದ ನಿರ್ದೇಶಕಿ ಸುಮನಾ ಕಿತ್ತೂರು ಅವರು 'ಬೆಳ್ಳಿಮಾತು' ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

  ಕನ್ನಡ ಪ್ರಶಸ್ತಿ ಪುರಸ್ಕೃತ ಹಾಗೂ ಸದಭಿರುಚಿಯ ಕನ್ನಡ ಚಿತ್ರಗಳನ್ನು ವಾರಕ್ಕೊಮ್ಮೆ ಅಂದರೆ ಪ್ರತಿ ಶನಿವಾರ ಪ್ರದರ್ಶಿಸಿ ಆ ಚಿತ್ರಕ್ಕೆ ಸಂಬಂಧಿಸಿದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರೊಡನೆ ಸಂವಾದ ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

  'ಭೂಗತ ಜಗತ್ತಿನ ಘಟನೆಗಳನ್ನು ಹೆಣೆಯಲಾದ 'ಎದೆಗಾರಿಕೆ' ಕಥೆಯಲ್ಲಿ ಕೊಲ್ಲುವವನ ಮತ್ತು ಸಾಯಲಿಕ್ಕೆ ಬಂದವನ ನಡುವಿನ ವಾಸ್ತವ ವಿಚಾರಗಳನ್ನು ತೋರುವ ಚಿತ್ರ, ಪತ್ರಕರ್ತ ಮತ್ತು ಚಿಂತಕ ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ' ಕಾದಂಬರಿಯನ್ನು ಆಧರಿಸಿದ ಈ ಚಿತ್ರ ಅನಾಥನೊಬ್ಬನ ಬದುಕಿನಲ್ಲಿ ಜರುಗುವ ತವಕ-ತಲ್ಲಣಗಳನ್ನು ಚಿತ್ರಿಸುತ್ತದೆ.['ಪ್ರಕೃತಿ' ಸಿನಿಮಾ ಜೊತೆ ಬೆಳ್ಳಿ ಸಿನಿಮಾ-ಬೆಳ್ಳಿ ಮಾತು]

  ಕಾದಂಬರಿ ಆಧರಿಸಿ ತಯಾರಾದ 'ಎದೆಗಾರಿಕೆ' ಚಿತ್ರ 2012ನೇ ಸಾಲಿನ ತೃತೀಯ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದೆ.

  'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಈ ವಾರದ ಕಾರ್ಯಕ್ರಮ ಬೆಂಗಳೂರು ಮಿಲ್ಲರ್ಸ್ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಗಸ್ಟ್ 8 ರಂದು ಸಂಜೆ 4 ಗಂಟೆಗೆ ನಡೆಯಲಿದೆ.['ಬೆಳ್ಳಿ ಸಿನೆಮಾ-ಬೆಳ್ಳಿ ಮಾತು' ಸಿನಿ ರಸಿಕರೊಡನೆ ಸಂವಾದ]

  ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರು ವಹಿಸಲಿದ್ದು, ನಿರ್ದೇಶಕಿ ಸುಮನಾ ಕಿತ್ತೂರು, ನಟ ಆದಿತ್ಯ, ಧರ್ಮ, ನಿರ್ಮಾಪಕರಾದ ಎಂ.ಎಸ್. ರವೀಂದ್ರ ಅವರು ಉಪಸ್ಥಿತರಿರುತ್ತಾರೆ.

  English summary
  'Edegarike' Movie: 'Belli Cinema Belli Maathu' movie shows and discussions by Karnataka Chalanachitra Academy is organised in Chamundeshwari Theater, Millers Road, Bengaluru on December 5th, Saturday at 4 o clock.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X