'ಅರಿವಿನ ಮನೆ'ಯಲ್ಲಿ ಗಣ್ಯರ ಬೆಳ್ಳಿ ಮಾತುಗಳು

By Suneetha

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ನಡೆಸುವ 'ಬೆಳ್ಳಿಸಿನಿಮಾ ಬೆಳ್ಳಿಮಾತು' ಕಾರ್ಯಕ್ರಮದಲ್ಲಿ ಮೇ 28, ಶನಿವಾರದಂದು ನಿರ್ದೇಶಕ ಶಿವಾನಂದ್ ಸೋಮಪ್ಪ ಅವರ ನಿರ್ದೇಶನದ 'ಅರಿವಿನ ಮನೆ' ಎಂಬ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

ಕನ್ನಡ ಪ್ರಶಸ್ತಿ ಪುರಸ್ಕೃತ ಹಾಗೂ ಸದಭಿರುಚಿಯ ಕನ್ನಡ ಚಿತ್ರಗಳನ್ನು ವಾರಕ್ಕೊಮ್ಮೆ ಅಂದರೆ ಪ್ರತಿ ಶನಿವಾರ ಪ್ರದರ್ಶಿಸಿ ಆ ಚಿತ್ರಕ್ಕೆ ಸಂಬಂಧಿಸಿದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರೊಡನೆ ಸಂವಾದ ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.['ಪ್ರಕೃತಿ' ಸಿನಿಮಾ ಜೊತೆ ಬೆಳ್ಳಿ ಸಿನಿಮಾ-ಬೆಳ್ಳಿ ಮಾತು]

'Belli Cinema-Belli Mathu' Kannada Movie 'Arivina Mane'

ಅಂದಹಾಗೆ ಮೇ 28, ಶನಿವಾರ ಸಂಜೆ 4 ಘಂಟೆಗೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬೆಳ್ಳಿ ಸಿನಿಮಾ "ಅರಿವಿನ ಮನೆ" ಎಂಬ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು.

ಕಾರ್ಯಕ್ರಮದಲ್ಲಿ "ಅರಿವಿನ ಮನೆ" ಚಿತ್ರದ ಪ್ರದರ್ಶನದ ನಂತರ ಚಿತ್ರದ ನಿರ್ದೇಶಕ ಶಿವಾನಂದ್ ಸೋಮಪ್ಪ, ಅವರ ಜೊತೆ ಬೆಳ್ಳಿಮಾತು ಸಂವಾದ ಏರ್ಪಡಿಸಲಾಗಿದೆ.['ಬೆಳ್ಳಿ ಸಿನೆಮಾ-ಬೆಳ್ಳಿ ಮಾತು' ಸಿನಿ ರಸಿಕರೊಡನೆ ಸಂವಾದ]

'Belli Cinema-Belli Mathu' Kannada Movie 'Arivina Mane'

ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್, ಶಿಕ್ಷಣ ತಜ್ಞ ಡಾ.ವೂಡೇ, ಪಿ. ಕೃಷ್ಣ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ವಹಿಸಲಿದ್ದಾರೆ.

More from Filmibeat

English summary
Kannada Movie 'Arivina Mane' 'Belli Cinema-Belli Mathu' movie shows and discussions by Karnataka Chalanachitra Academy is organised in Chamundeshwari Theater, Millers Road, Bengaluru on May 28th, Saturday at 4 o clock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X