»   » 'ಬೆಳ್ಳಿಹೆಜ್ಜೆ': ಕನ್ನಡ ಚಿತ್ರರಂಗದಲ್ಲಿ ಸುಧಾರಾಣಿ ನಡೆದು ಬಂದ ಹಾದಿ

'ಬೆಳ್ಳಿಹೆಜ್ಜೆ': ಕನ್ನಡ ಚಿತ್ರರಂಗದಲ್ಲಿ ಸುಧಾರಾಣಿ ನಡೆದು ಬಂದ ಹಾದಿ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಜುಲೈ 2ರಂದು ಸಂಜೆ 5 ಘಂಟೆಗೆ ಬೆಂಗಳೂರಿನ ಕುಮಾರ ಪಾರ್ಕ್ ರಸ್ತೆಯಲ್ಲಿರುವ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ತಾರೆ ನಟಿ ಸುಧಾರಾಣಿ ಅವರ ಜೊತೆ 'ಬೆಳ್ಳಿಹೆಜ್ಜೆ' ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅತೀ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ 'ಬೆಳ್ಳಿ ಹೆಜ್ಜೆ' ಹಿರಿಯರ, ಸಾಧಕರ, ನಟರ, ಗಾಯಕರ ಮಧುರ ನೆನಪುಗಳ ಮೆರವಣಿಗೆಯಾಗಿದೆ.['ಕನ್ನಡ ಚಿತ್ರಗಳ ಚೈತ್ರಕಾಲ' ವಿಶೇಷ ಕಾರ್ಯಕ್ರಮಕ್ಕೆ ನೀವೂ ಬನ್ನಿ]

'Belli Hejje': Actress Sudharani Guest Karnataka Chalanachitra Academy

ಈ ಸುಂದರ ಕಾರ್ಯಕ್ರಮದಲ್ಲಿ ನಟಿ ಸುಧಾರಾಣಿ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಲಿದ್ದಾರೆ. ಹಾಗೂ ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ನಡೆದು ಬಂದ ಹಾದಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದಾರೆ.[ಬೆಳ್ಳಿ ಮಾತಿನಲ್ಲಿ ಪವರ್ ಸ್ಟಾರ್ ಪವರ್ ಫುಲ್ ಮಾತುಗಳು]

'Belli Hejje': Actress Sudharani Guest Karnataka Chalanachitra Academy

ಸುಂದರ ಸಂಜೆಯ ಸಮಾರಂಭದ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ನಟಿ ತಾರಾ ಅನುರಾಧ, ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ಕನ್ನಡ ಚಲನಚಿತ್ರ ರಂಗದ ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.[ಚಿತ್ರಗಳು: ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು]

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

English summary
Belli - Hejje program organized by Karnataka Chalana Chitra Academy on 2nd July 5 pm in Gandhi Bhavan Mahadev Desai Hall, Kumara Park Road Bengaluru. Kannada Actress Sudharani will be guest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada