For Quick Alerts
  ALLOW NOTIFICATIONS  
  For Daily Alerts

  ಅಂದು ಮಾಲಾಶ್ರೀ.. ಇಂದು ಧನ್ಯಾ: 30 ವರ್ಷಗಳ ಬಳಿಕ ಮತ್ತೊಮ್ಮೆ 'ಬೆಳ್ಳಿಕಾಲುಂಗುರ'!

  |

  ಕೆಲವು ಸಿನಿಮಾಗಳಿಗೆ ಅದೆಷ್ಟೇ ವರ್ಷ ಆದರೂ, ಮತ್ತೆ ಮತ್ತೆ ಸಿನಿಮಾ ನೋಡಬೇಕು ಅಂತ ಅನಿಸುತ್ತೆ. ಇಪ್ಪತ್ತು-ಮೂವತ್ತು ವರ್ಷಗಳಾದರೂ ಆ ಸಿನಿಮಾ ಜನ ಮಾನಸದಿಂದ ದೂರ ಆಗುವುದೇ ಇಲ್ಲ. ಇಂತಹ ಎವರ್‌ಗ್ರೀನ್ ಸಿನಿಮಾಗಳ ಪಟ್ಟಿಯಲ್ಲಿ 'ಬೆಳ್ಳಿಕಾಲುಂಗುರ' ಕೂಡ ಒಂದು.

  ದಿವಂಗತ ನಟ ಸುನೀಲ್ ಹಾಗೂ ಮಾಲಾಶ್ರೀ ಜೋಡಿ. ಕೆವಿ ರಾಜು ನಿರ್ದೇಶನ. ಎಂದೂ ಮರೆಯಲು ಸಾಧ್ಯವೇ ಇಲ್ಲದ ಹಂಸಲೇಖ ಸಂಗೀತ. ಇವೆಲ್ಲವೂ 'ಬೆಳ್ಳಿ ಕಾಲುಂಗುರ' ಸಿನಿಮಾ ಯಶಸ್ಸಿನ ಗುಟ್ಟು. 1992ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಕನಸಿನ ರಾಣಿ ಮಾಲಾಶ್ರೀ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿತ್ತು. ಈ ಕಾರಣಕ್ಕೆ 'ಬೆಳ್ಳಿ ಕಾಲುಂಗುರ' ಅಂದರೆ ಮೊದಲು ನೆನಪಿಗೆ ಬರೋದು ಮಾಲಾಶ್ರೀ.

  15ನೇ ವಯಸ್ಸಿಗೆ ಮಾಲಾಶ್ರೀ ಚಿತ್ರರಂಗ ಪ್ರವೇಶ: ಮಗಳ ವಯಸ್ಸು ಎಷ್ಟು?15ನೇ ವಯಸ್ಸಿಗೆ ಮಾಲಾಶ್ರೀ ಚಿತ್ರರಂಗ ಪ್ರವೇಶ: ಮಗಳ ವಯಸ್ಸು ಎಷ್ಟು?

  ಮಾಲಾಶ್ರೀಯನ್ನು ಸ್ಟಾರ್ ಪಟ್ಟಕ್ಕೇರಿಸಿದ್ದ ಸಿನಿಮಾ 'ಬೆಳ್ಳಿ ಕಾಲುಂಗುರ'. ಇಂದು ಮತ್ತೆ ಇದೇ ಟೈಟಲ್‌ ಇಟ್ಕೊಂಡು ಹೊಸ ಸಿನಿಮಾ ಸೆಟ್ಟೇರಲಿದೆ. ಸಾರಾ ಗೋವಿಂದು ಅವರೇ ಹೊಸ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹಳ ದಿನಗಳ ಬಳಿಕ ಮತ್ತೆ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಹೊಸ 'ಬೆಳ್ಳಿ ಕಾಲುಂಗುರ' ನಾಳೆ (ಆಗಸ್ಟ್ 12) ಸೆಟ್ಟೇರುತ್ತಿದೆ. ಹಾಗಿದ್ದರೆ, ಹೊಸ 'ಬೆಳ್ಳಿಕಾಲುಂಗುರ' ಕಥೆಯೇನು? ನಿರ್ದೇಶಕ ಹೆಚ್ ವಾಸು ಬಿಟ್ಟುಕೊಟ್ಟ ಸೀಕ್ರೆಟ್ ಏನು? ಅಂತ ತಿಳಿಯಲು ಮುಂದೆ ಓದಿ.

  ಮಾಲಾಶ್ರೀ ಬೆಳ್ಳಿ ಕಾಲುಂಗುರಕ್ಕೆ 30 ವರ್ಷ!

  ಮಾಲಾಶ್ರೀ ಬೆಳ್ಳಿ ಕಾಲುಂಗುರಕ್ಕೆ 30 ವರ್ಷ!

  ದಿವಂಗತ ಕೆವಿ ರಾಜು ನಿರ್ದೇಶಿಸಿದ್ದ 'ಬೆಳ್ಳಿ ಕಾಲುಂಗುರ' ಸಿನಿಮಾ 1992ರಲ್ಲಿ ರಿಲೀಸ್ ಆಗಿತ್ತು. ಆಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮಾಲಾಶ್ರೀಗೆ ಕನಸಿನ ರಾಣಿ ಅನ್ನೋ ಪಟ್ಟ ಸಿಗುವುದಕ್ಕೆ ಈ ಸಿನಿಮಾ ಅಡಿಪಾಯ ಹಾಕಿಕೊಟ್ಟಿತ್ತು. ಇದೇ ಸಿನಿಮಾ ಈಗ 30 ವರ್ಷಗಳ ಸಂಭ್ರಮದಲ್ಲಿದೆ. ಕನ್ನಡ ಎವರ್‌ ಗ್ರೀನ್ ಸಿನಿಮಾ 30 ವರ್ಷಗಳ ಬಳಿಕ ಮತ್ತೆ ಸುದ್ದಿಯಲ್ಲಿದೆ. ಸಾರಾ ಗೋವಿಂದು ಅಂದು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈಗ ಮತ್ತೆ ಇದೇ ಹೆಸರಿಟ್ಟು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

  Radhana Ram : ಅವರೂ ಅಲ್ಲ.. ಇವರೂ ಅಲ್ಲ.. ದರ್ಶನ್ 56ನೇ ಸಿನಿಮಾಗೆ 'ಕಿರಣ್ ಬೇಡಿ' ಪುತ್ರಿನೇ ನಾಯಕಿ?Radhana Ram : ಅವರೂ ಅಲ್ಲ.. ಇವರೂ ಅಲ್ಲ.. ದರ್ಶನ್ 56ನೇ ಸಿನಿಮಾಗೆ 'ಕಿರಣ್ ಬೇಡಿ' ಪುತ್ರಿನೇ ನಾಯಕಿ?

  ಅಂದು ಮಾಲಾಶ್ರೀ.. ಇಂದು ಧನ್ಯಾ!

  ಅಂದು ಮಾಲಾಶ್ರೀ.. ಇಂದು ಧನ್ಯಾ!

  1992ರಲ್ಲಿ ತೆರೆಕಂಡಿದ್ದ 'ಬೆಳ್ಳಿ ಕಾಲುಂಗುರ' ಸಿನಿಮಾದಲ್ಲಿ ಮಾಲಾಶ್ರೀ ಹೀರೊಯಿನ್ ಆಗಿ ನಟಿಸಿದ್ದರು. ಟ್ರೆಡಿಷನಲ್ ಲುಕ್‌ನಲ್ಲಿ ಮಾಲಾಶ್ರೀ ಜನರ ಮನಗೆದ್ದಿದ್ದರು. ಥಿಯೇಟರ್‌ನಲ್ಲಿ ಹೆಂಗಳೆಯರು ಕಣ್ಣೀರು ಸುರಿಸುವಂತೆ ನಟಿಸಿದ್ದರು. ನಾಳೆ (ಆಗಸ್ಟ್ 11) ಸೆಟ್ಟೇರಲಿರೋ 'ಬೆಳ್ಳಿಕಾಲುಂಗುರ' ಸಿನಿಮಾದಲ್ಲಿ ಧನ್ಯಾ ರಾಮ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಲೀಡ್ ರೋಲ್‌ನಲ್ಲಿ ಹೊಸ ಹೀರೊ ಎಂಟ್ರಿ ಕೊಡುತ್ತಿದ್ದಾರೆ.

  ತ್ರಿಕೋನ ಪ್ರೇಮಕಥೆ!

  ತ್ರಿಕೋನ ಪ್ರೇಮಕಥೆ!

  ಸಾರಾ ಗೋವಿಂದು ನಿರ್ಮಿಸುತ್ತಿರುವ ಹೊಸ 'ಬೆಳ್ಳಿ ಕಾಲುಂಗುರ' ಸಿನಿಮಾವನ್ನು ಹೆಚ್. ವಾಸು ನಿರ್ದೇಶನ ಮಾಡುತ್ತಿದ್ದಾರೆ. " ನಾಳೆ 'ಬೆಳ್ಳಿ ಕಾಲುಂಗುರ' ಸಿನಿಮಾಗೆ 30 ವರ್ಷ ಈ ಕಾರಣಕ್ಕೆ ಹೊಸ ಸಿನಿಮಾಗೆ ಮುಹೂರ್ತ ಮಾಡುತ್ತಿದ್ದೇವೆ. ಇದು ತ್ರಿಕೋನ ಪ್ರೇಮಕಥೆ. ಒಬ್ಬ ಹೀರೊ, ಇಬ್ಬರು ಹೀರೋಯಿನ್ ಇದ್ದು, ಧನ್ಯ ರಾಮ್‌ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅಂದ್ಹಾಗೆ ಹೀರೊಗೆ ಇದು ಮೊದಲ ಸಿನಿಮಾ. ನಾಯಕಿ ವಿದೇಶದಲ್ಲಿ ಇದ್ದರೂ, ನಾಡು, ನುಡಿ ಸಂಸ್ಕೃತಿಯನ್ನು ಬಿಡುವುದಿಲ್ಲ. ತಾಯ್ನಾಡಿಗೆ ಮರಳಿದ ಬಳಿಕ ಧನ್ಯಾಗೆ ಹೀರೊ ಮೇಲೆ ಪ್ರೀತಿ ಹುಟ್ಟುತ್ತೆ. ಆದರೆ ಅಷ್ಟರಲ್ಲಷೇ ಹೀರೊ ಮತ್ತೊಬ್ಬ ನಾಯಕಿಯೊಂದಿಗೆ ಪ್ರೀತಿಯಲ್ಲಿರುತ್ತಾನೆ. ಈ ಕತೆ ಮುಂದೆ ಹೇಗೆ ಸಾಗುತ್ತೆ? ಅನ್ನುವುದೇ ಕಥೆ." ಎನ್ನುತ್ತಾರೆ ಹೆಚ್ ವಾಸು.

  ಸಿನಿಪ್ರಿಯರಿಗೆ ಸರ್ಪ್ರೈಸ್

  ಸಿನಿಪ್ರಿಯರಿಗೆ ಸರ್ಪ್ರೈಸ್

  ನಾಳೆ ( ಆಗಸ್ಟ್ 12) ಹೊಸ 'ಬೆಳ್ಳಿ ಕಾಲುಂಗರ' ಸಿನಿಮಾ ಸೆಟ್ಟೇರಲಿದೆ. ಇದೇ ವೇಳೆ ಹೊಸ ಸಿನಿಮಾದ ಲುಕ್ ರಿಲೀಸ್ ಆಗಲಿದೆ. ನಿರ್ದೇಶಕರು ಪಾತ್ರಗಳನ್ನು ರಿವೀಲ್ ಮಾಡಲಿದ್ದಾರೆ. ಅಲ್ಲದೆ 'ಬೆಳ್ಳಿಕಾಲುಂಗುರ' ಚಿತ್ರಕ್ಕೆ 30 ವರ್ಷ ಆಗಿದ್ದ ಹಿನ್ನೆಲೆಯಲ್ಲಿ ಪ್ರೋಮೊ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಸಿನಿಮಾವನ್ನು ನೆನೆಪಿಸಲು ಮತ್ತೊಮ್ಮೆ 'ಬೆಳ್ಳಿ ಕಾಲುಂಗುರ' ಸೆಟ್ಟೇರುತ್ತಿದ್ದು, ಪ್ರೇಕ್ಷಕರು ಏನಂತಾರೆ ಅನ್ನೋ ಕುತೂಹಲವಂತೂ ಇದೆ.

  Recommended Video

  ಗುರೂಜಿಯಾ ಹೊಸ ಅವತಾರ ನೋಡಿದ್ರೆ ಶಾಕ್‌ ಆಗೋದು ಪಕ್ಕಾ | Bigg boss OTT *Bigg Boss
  English summary
  Belli Kalungura Movie Starring Dhanya Ram Kumar As A Lead Launchig After 30 Years, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X