ಯಶ್ 'ಟಾಕ್ಸಿಕ್' ಅಖಾಡಕ್ಕೆ ವಜ್ರದೇಹಿ ಎಂಟ್ರಿ; ಯಾರೀ ಮಸಲ್‌ಮ್ಯಾನ್?

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಮೇಕಿಂಗ್ ಹಂತದಲ್ಲೇ ಭಾರೀ ಸದ್ದು ಮಾಡ್ತಿದೆ. ದೇಶ ವಿದೇಶದ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಮುಕ್ತಾಯವಾಗಿದೆ. ನಯನತಾರ ಸೇರಿ ಹಲವರು ಬಣ್ಣ ಹಚ್ಚಿ ನಟಿಸಿದ್ದಾರೆ.

'ಟಾಕ್ಸಿಕ್' ಕಥೆ ಏನು? ಜಾನರ್ ಏನು? ಎನ್ನುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೋಷನ್ ಪೋಸ್ಟರ್ ನೋಡಿ ಇದು ಡ್ರಗ್ಸ್ ಮಾಫಿಯಾ ಕಥೆ ಎಂದು ಊಹಿಸಲಾಗುತ್ತಿದೆ. 60, 70ರ ದಶಕದ ಕಥೆ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

Benedict Garrett On Board for rocking star Yash starrer Toxic

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. 'KGF'-2 ಚಿತ್ರದಿಂದ ಕನ್ನಡ ಸಿನಿಮಾ 1000 ಕೋಟಿ ರೂ. ಗಳಿಸುವುದು ಕಷ್ಟವೇನಲ್ಲ ಎನ್ನುವುದು ಸಾಬೀತಾಗಿದೆ. ಹಾಗಾಗಿ ಬಜೆಟ್‌ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅದ್ಭುತ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ.

ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗುವ ನಿರೀಕ್ಷೆಯಿದೆ. ಅದಕ್ಕೆ ತಕ್ಕ ಯೂನಿವರ್ಸಲ್ ಸಬ್ಜೆಕ್ಟ್, ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ರಯತ್ನ ನಡೀತ್ತಿದೆ. ಸದ್ಯ ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಸೆಟ್ ನಿರ್ಮಿಸಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ.

Benedict Garrett On Board for rocking star Yash starrer Toxic

ನಯನತಾರ ಜೊತೆಗೆ ಅಕ್ಷಯ್‌ ಒರೆರಾಯ್, ತಾರಾ ಸುತಾರಿಯಾ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ ಎನ್ನಲಾಗ್ತಿದೆ. ಇನ್ನು ಬ್ರಿಟೀಷ್ ನಟ ಡ್ಯಾರೆನ್ ಡಿಸಿಲ್ವಾ ಕೂಡ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಯಾವುದೇ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿ ಬಿಟ್ಟುಕೊಟ್ಟಿಲ್ಲ. ಇದೀಗ ಮತ್ತೊಬ್ಬ ಬ್ರಿಟೀಷ್ ನಟ ಬೆನೆಡಿಕ್ಟ್ ಗ್ಯಾರೆಟ್ 'ಟಾಕ್ಸಿಕ್' ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ತಿಳಿಸಿದ್ದಾರೆ.

ಮುಂಬೈ ಮೂಲದ ಬ್ರಿಟೀಷ್ ನಟ ಬೆನೆಡಿಕ್ಟ್ ಗ್ಯಾರೆಟ್ ಈಗಾಗಲೇ ಕೆಲ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಸರತ್ತು ಮಾಡಿ ವಜ್ರದೇಹಿಯಾಗಿರುವ ಗ್ಯಾರೆಟ್ ತಮ್ಮ ಖಡಕ್ ನೋಟದಿಂದ ಗಮನ ಸೆಳೆಯುತ್ತಾರೆ. ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ಶೈರ್‌ನ ವೆಲ್ಲಿಂಗ್‌ಬರೋದಲ್ಲಿ ಹುಟ್ಟಿದ ಬ್ರಿಟೀಷ್‌ ನಟ ಸದ್ಯ ಮುಂಬೈನಲ್ಲೇ ನೆಲೆಸಿದ್ದಾರೆ. ತಮಿಳು ಹಾಗೂ ಮರಾಠಿ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.

ನಾರ್ಥಾಂಪ್ಟನ್‌ನ ರಂಗಭೂಮಿಯಲ್ಲಿ ಗ್ಯಾರೆಟ್ ನಟನೆ ಆರಂಭಿಸಿದರು. 2012ರಲ್ಲಿ ಬಿಗ್‌ ಬ್ರದರ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಹಾಲಿವುಡ್ ಟಿವಿ ಹಾಗೂ ರೇಡಿಯೋ ಶೋಗಳಲ್ಲಿ ಕೂಡ ಅವರು ಗುರ್ತಿಸಿಕೊಂಡಿದ್ದಾರೆ. ತಮ್ಮ ಖಡಕ್ ದೇಹದಾರ್ಢ್ಯದಿಂದ ಗ್ಯಾರೆಟ್ ಸದ್ದು ಮಾಡುತ್ತಾ ಬರುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಡಯೆಟ್, ವರ್ಕ್‌ಔಟ್ ಬಗ್ಗೆ ಫೋಟೊ, ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಬೆನೆಡಿಕ್ಟ್ ಗ್ಯಾರೆಟ್ ಮಾಡಿದ್ದ ಪೋಸ್ಟ್‌ಗೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು. ಈ ವೇಳೆ ಅವರು 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆ ನಟಿಡುವ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಆದರೆ ಯಾವ ಪಾತ್ರ, ಲುಕ್ ಹೇಗಿರುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. 'ಟಾಕ್ಸಿಕ್' ಚಿತ್ರಕ್ಕಾಗಿ ಯಶ್ ಹೊಸ ತಂಡವನ್ನೇ ಕಟ್ಟಿರುವುದು ಗೊತ್ತಾಗುತ್ತಿದೆ. ತಂತ್ರಜ್ಞರು ಹಾಗೂ ಕಲಾವಿದರ ವಿಚಾರದಲ್ಲಿ ಬಹಳ ಚೂಸಿಯಾಗಿದ್ದಾರೆ. ಕನ್ನಡದ ಕಲಾವಿದರು ಯಾರಿಗೆಲ್ಲಾ ಅವಕಾಶ ಸಿಗುತ್ತದೆ ಕಾದು ನೋಡಬೇಕಿದೆ.

ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಸಿನಿಮಾ ಸೆಟ್ಟೇರುವುದು ತಡವಾಗಿತ್ತು. ಏಪ್ರಿಲ್ 10ಕ್ಕೆ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಹಾಗಾಗಿ ಅದೇ ದಿನ 'ಟಾಕ್ಸಿಕ್' ರಿಲೀಸ್ ಅನುಮಾನ ಎನ್ನುವಂತಾಗಿದೆ.

More from Filmibeat

English summary
Mumbai-based British actor joins Yash's Toxic movie;
Read more about: yash toxic kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X