'ಕೆಜಿಎಫ್ 2' ಚಿತ್ರದಲ್ಲಿ ನಟಿಸಬೇಕಿತ್ತು ಈ ಬ್ಯುಟಿಫುಲ್ ಬೆಡಗಿ!
'ಕೆಜಿಎಫ್ 2' ಸಿನಿಮಾ ಸದ್ಯ 100ನೇ ದಿನದ ಸಂಭ್ರಮದಲ್ಲಿ ಇದೆ. 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ, 100 ದಿನ ಆಗಿದೆ. ಈ ಖುಷಿಗಾಗಿ, ಸಿನಿಮಾತಂಡ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದೆ. ಇದರೊಂದಿಗೆ ಸಿನಿಮಾದ ದಾಖಲೆಗಳ ಬಗ್ಗೆ ಮತ್ತೆ ಜನರು ಮೆಲುಕು ಹಾಕುತ್ತಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು 'ಕೆಜಿಎಫ್ 2' ಸಿನಿಮಾದ ರಿಲೀಸ್ ಆಗಿ 100 ದಿನ ಆಗಿದ್ದರ ಬಗ್ಗೆ ಪೋಸ್ಟ್ ಹಾಕಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ಬೆನ್ನಲ್ಲೇ ಸದ್ಯ 'ಕೆಜಿಎಫ್ 2' ಸಿನಿಮಾದ 100 ದಿನದ ಸಂಭ್ರವನ್ನು ಅಭಿಮಾನಿಗಳು ಸಂಭ್ರಮಿಸುತ್ತದ್ದಾರೆ.
ಇನ್ನು ಇದೇ ಬೆನ್ನಲ್ಲೇ ಕೆಜಿಎಫ್ 2 ಸಿನಿಮಾದ ಬಗ್ಗೆ, ಹೊಸದೊಂದು ಸುದ್ದಿ ಹೊರ ಬಿದ್ದಿದೆ. ಈ ಚಿತ್ರಕ್ಕೆ ಬೆಂಗಾಲಿ ನಟಿ ದರ್ಶನ ಎಂಟ್ರಿ ಆಗ್ಬೇಕಿತ್ತು. ದರ್ಶನಳನ್ನು ಕೆಜಿಎಫ್ ಟೀಮ್ ತಿರಸ್ಕರಿಸಿದೆ. ಈ ವಿಚಾರ ಈಗ ಬಯಲಿಗೆ ಬಂದಿದೆ.
'ಕೆಜಿಎಫ್ 2' ಆಡಿಷನ್‌ನಲ್ಲಿ ನಟ ದರ್ಶನ!
ಕೆಜಿಎಫ್ ಸಿನಿಮಾ ಹಿಟ್ ಆದ ಬಳಿಕ, ಕೆಜಿಎಫ್ 2 ಸಿನಿಮಾದಲ್ಲಿ ಒಮ್ಮೆ ಆದರೂ ನಟಿಸಬೇಕು ಎನ್ನುವ ಹಂಬಲ ಸಾಕಷ್ಟು ಜನರಲ್ಲಿ ಮನೆ ಮಾಡಿತ್ತು. ಚಿತ್ರದ ಆಡಿಷನ್‌ನಲ್ಲಿ ಹಲವರು ಭಾಗಿ ಆಗಿದ್ದರು. ಕೆಜಿಎಫ್ 2 ಸಿನಿಮಾದಲ್ಲಿ ಭಾಗಿಯಾಗಬೇಕು ಎನ್ನುವ ಹಂಬಲ ಹಲವು ಸಿನಿಮಾ ತಾರೆಯರಿಗೂ ಕೂಡ ಇತ್ತು. ಅದರಲ್ಲಿ ನಟಿ ದರ್ಶನ ಕೂಡ ಒಬ್ಬರು. ಹಾಗಾಗಿ ಕೆಜಿಎಫ್ 2 ಚಿತ್ರದ ಆಡಿಷನ್‌ನಲ್ಲಿ ನಟಿ ದರ್ಶನಾ ಭಾಗಿ ಆಗಿದ್ದರು.
ರಿಜೆಕ್ಟ್ ಆದ ದರ್ಶನಾ!
'ಕೆಜಿಎಫ್ 2' ಚಿತ್ರದ ಆಡಿಷನ್‌ನಲ್ಲಿ ನಟಿ ದರ್ಶನಾ ಭಾಗಿ ಆಗಿದ್ದರಂತೆ. ಆದರೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿಲ್ಲ. ಹೌದು ನಟಿ ದರ್ಶನಾ ಎರಡೂ ಬಾರಿ ಕೆಜಿಎಫ್ 2 ಸಿನಿಮಾದಲ್ಲಿ ನಟಿಸುವ ಆಸೆಯಿಂದ ಆಡಿಷನ್‌ನಲ್ಲಿ ಭಾಗಿ ಆಗಿದ್ದರು. ಆದರೆ ಎರಡೂ ಬಾರಿ ಕೂಡ ಆಡಿಷನ್‌ನಿಂದ ರಿಜೆಕ್ಟ್ ಆಗಿದ್ದಾರಂತೆ. ಈ ವಿಚಾರವನ್ನು ಈಗ ನಟಿ ಹಂಚಿಕೊಂಡಿದ್ದಾರೆ. ದರ್ಶನಾ ಚಿತ್ರದ ವಿಶೇಷ ಪಾತ್ರ ಒಂದರಲ್ಲಿ ನಟಿಸಬೇಕಿತ್ತಂತೆ, ಆದರೆ ಅದು ಯಾವ ಪಾತ್ರ ಎನ್ನುವ ಬಗ್ಗೆ ಮಾತ್ರ ರಿವೀಲ್ ಮಾಡಿಲ್ಲ.
ದರ್ಶನಾ ಬಾನಿಕ್ ಯಾರು!
ಕೆಜಿಎಫ್ ಆಡಿಷನ್‌ನಲ್ಲಿ ರಿಜೆಕ್ಟ್ ಆದ ನಟಿ ದರ್ಶನಾ ಚಿರಪರಿತ ನಟಿಯೇ. ಈಕೆ ಬೆಂಗಾಲಿ ಮೂಲದ ನಟಿ. ಆದರೆ ಸೌತ್ ಸಿನಿಮಾರಂಗದಲ್ಲಿ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ತೆಲುಗು, ತಮಿಳು, ಹಿಂದಿ, ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ ದರ್ಶನಾ. ಆದರೆ ಕೆಜಿಎಫ್‌ನಲ್ಲಿ ನಟಿಸಬೇಕು ಎನ್ನುವ ಈಕೆಯ ಆಸೆ ಮಾತ್ರ ಸಾಕಾರವಾಗಿಲ್ಲ.
'ಕೆಜಿಎಫ್ 2' ಹಾಡಿ ಹೊಗಳಿದ ನಟಿ!
ಇನ್ನು 'ಕೆಜಿಎಫ್ 2' ಸಿನಿಮಾ ನೋಡಿದ ಬಳಿಕ ನಟಿ ದರ್ಶನಾ ಸಿನಿಮಾ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಮತ್ತು ದರ್ಶನಾ ಬಾನಿಕ್ ಥಿಯೇಟರ್‌ನಲ್ಲಿ 'ಕೆಜಿಎಫ್ 2' ವೀಕ್ಷಿಸಿದಾಗ ಕಿರುಚುವ, ಚಪ್ಪಾಳೆ ತಟ್ಟುವ, ಕೂಗುವ ಮತ್ತು ಹುರಿದುಂಬಿಸುವ ಸದ್ದು ಮಾತ್ರವೇ ಇತ್ತು. 3 ಗಂಟೆಗಳ ದೊಡ್ಡ ಸಂಭ್ರಮ ಅದು ಎಂದು ಕೆಜಿಫ್ 2 ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.


Click it and Unblock the Notifications











