ನಿನ್ನ ರೇಟ್ ಎಷ್ಟು? ನಟಿಯ ಫೋಟೋ, ಪೋನ್ ನಂಬರ್ ಹಾಕಿ ಟಾರ್ಚರ್
''ನೀವು ಅಸಂತೃಪ್ತಿ ಹೊಂದಿದ್ದೀರಾ...? ರಾತ್ರಿ ನಿಮಗೆ ನಿದ್ದೆ ಬರ್ತಿಲ್ವಾ? ನಿಮ್ಮ ಪತ್ನಿ ನಿಮ್ಮ ಜೊತೆಯಲ್ಲಿ ಇಲ್ವಾ? ಯೋಚನೆ ಮಾಡ್ಬೇಡಿ....ನನಗೆ ಕಾಲ್ ಮಾಡಿ, ನಿಮಗಾಗಿ ಬರ್ತೀನಿ. ನನ್ನ ಹೆಸರು ಬ್ರಿಷ್ಟಿ ರಾಯ್. ನೀವು 10000, ಸಾವಿರದಿಂದ 20,000 ಸಾವಿರ ರೂಪಾಯಿವರೆಗೂ ಸಂಪಾದನೆ ಮಾಡಬಹುದು'' ಎಂಬ ಪೋಸ್ಟರ್ ಕೊಲ್ಕತ್ತಾ ನಗರದ ರೈಲ್ವೆ ಸ್ಟೇಷನ್, ಲೋಕಲ್ ಟ್ರೈನ್ ಗಳ ಮೇಲೆ ಹಾಕಲಾಗಿದೆಯಂತೆ.
ಈ ಕಾರಣದಿಂದ ಬೆಂಗಾಳಿ ಕಿರುತೆರೆ ನಟಿ ಬ್ರಿಷ್ಟಿ ರಾಯ್ ಗೆ ಸಿಕ್ಕಾಪಟ್ಟೆ ಫೋನ್ ಕಾಲ್ ಬರ್ತಿದೆ. ಫೋನ್ ಮಾಡಿದವರು 'ನಿನ್ನ ರೆಟ್ ಎಷ್ಟು? 'ಎಸ್ಕಾರ್ಟ್ ಸರ್ವಿಸ್' ಬಗ್ಗೆ ವಿವರಿಸಿ ಎಂದು ಕೇಳುತ್ತಿದ್ದಾರಂತೆ.
ಅಷ್ಟಕ್ಕೂ, ಬ್ರಿಷ್ಟಿ ರಾಯ್ ಯಾರು? ಈಕೆಯ ಫೋಟೋ ಮತ್ತು ಫೋನ್ ನಂಬರ್ ಬಳಸಿಕೊಂಡು ಯಾರೂ ಹೀಗೆ ಮಾಡ್ತಿದ್ದಾರೆ. ಈ ಬಗ್ಗೆ ಆ ನಟಿ ಹೇಳಿದ್ದೇನು? ಮುಂದೆ ಓದಿ...

ಫೋನ್ ಮಾಡಿ ರೇಟ್ ಕೇಳುತ್ತಿದ್ದಾರೆ
ಈ ಘಟನೆ ಬಗ್ಗೆ ಖಾಸಗಿ ವಾಹಿನಿ ಜೊತೆ ಮಾತನಾಡಿದ ನಟಿ ''ಆಗಸ್ಟ್ 24 ರಿಂದ ನನಗೆ ಅನೇಕ ಫೋನ್ ಕಾಲ್ ಬರುತ್ತಿದೆ. ಅನಾಮಿಕ ವ್ಯಕ್ತಿಗಳು ಕರೆ ಮಾಡುತ್ತಿದ್ದಾರೆ. ಫೋನ್ ಮಾಡಿದವರು ನಿನ್ನ ರೇಟ್ ಎಷ್ಟು? ಎಸ್ಕಾರ್ಟ್ ಸರ್ವಿಸ್ ಬಗ್ಗೆ ಹೇಳಿ ಎಂದು ಕೇಳುತ್ತಿದ್ದಾರೆ. ನಿಜವಾಗಲೂ ಆ ಫೋಟೋದಲ್ಲಿರುವುದು ಬ್ರಿಷ್ಟಿ ರಾಯ್ ಅವರೇನಾ ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ಟ್ರೈನ್ ಮೇಲೆ ಹಾಕಲಾಗಿದ್ದ ಪೋಸ್ಟರ್ ವೊಂದರ ಫೋಟೋ ತೆಗೆದು ನನ್ನ ಫ್ರೆಂಡ್ ಒಬ್ಬರು ನನಗೆ ಕಳುಹಿಸಿದ್ದಾರೆ'' ಎಂದು ತಿಳಿಸಿದ್ದಾರೆ.

ವಕೀಲರೊಬ್ಬರು ಫೋನ್ ಮಾಡಿದ್ದರು
''ಅದೊಂದು ದಿನ ಮುಂಜಾನೆಯೇ ಒಬ್ಬರು ಫೋನ್ ಮಾಡಿ ಬಹಳ ಅಶ್ಲೀಲವಾಗಿ ಮಾತನಾಡಿದರು. ತುಂಬಾ ಕೀಳು ಭಾಷೆಯಲ್ಲಿ ನನ್ನನ್ನು ಹೀಯಾಳಿಸಿದರು. ಬಾರುಪೂರ್ ಕೋರ್ಟ್ ನ ವಕೀಲರೊಬ್ಬರು ಫೋನ್ ಮಾಡಿ ರೇಟ್ ಎಷ್ಟು ಎಂದು ಕೇಳಿದ್ರು, ಸರ್ವಿಸ್ ಎಲ್ಲಿ ಸಿಗುತ್ತೆ ಎಂದು ಕೇಳಿದರು'' ಎಂದು ಆ ನಟಿ ವಿವರಿಸಿದ್ದಾರೆ.

ಫೋನ್ ನಂಬರ್ ಯಾಕೆ ಬದಲಿಸಿಲ್ಲ?
''ನಾನು ಫೋನ್ ನಂಬರ್ ಬದಲಿಸಬೇಕು ಎಂದು ಅಂದುಕೊಂಡೆ. ಆದರೆ ಪೊಲೀಸರಿಗೆ ಈ ನಂಬರ್ ಬೇಕಿತ್ತು. ಯಾಕಂದ್ರೆ ಪೋಸ್ಟರ್ ನಲ್ಲಿ ಈ ನಂಬರ್ ಹಾಕಿದ್ದರು. ಈ ಬಗ್ಗೆ ತನಿಖೆಗೆ ಅಗತ್ಯವಿತ್ತು. ನಾನು ಸಿನಿಮಾ ಇಂಡಸ್ಟ್ರಿಯಲ್ಲಿರುವುದರಿಂದ ಅನೇಕರು ಫೋನ್ ಮಾಡ್ತಾರೆ. ಹಾಗಾಗಿ, ಈ ನಂಬರ್ ಉಳಿಸಿಕೊಂಡಿದ್ದೇನೆ'' ಎಂದು ಹೇಳಿದ್ದಾರೆ.

ನನಗೆ ಪರಿಚಯದವರು ಹೀಗೆ ಮಾಡಿರಬೇಕು
''ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೋಟೋ ತೆಗೆದುಕೊಂಡಿದ್ದಾರೆ. ಇದು ನನ್ನ ಫೇಸ್ ಬುಕ್, ವಾಟ್ಸಾಪ್ ಫೋಟೋ. ಇದನ್ನ ಯಾರೂ ಯಾಕೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನನ್ನ ಬಗ್ಗೆ ತಿಳಿದುಕೊಂಡಿರುವ ವ್ಯಕ್ತಿಗಳೇ ಹೀಗೆ ಮಾಡುತ್ತಿರಬಹುದು. ಇದನ್ನ ನಾನು ಸುಮ್ಮನೆ ಬಿಡುವುದಿಲ್ಲ'' ಎಂದಿದ್ದಾರೆ.

ಇಂದು ನನಗೆ, ನಾಳೆ ಇನ್ನೊಬ್ಬರಿಗೆ
''ನಾನೊಬ್ಬ ಸಾಮಾನ್ಯ ನಟಿ. ಕೇವಲ ಧಾರಾವಾಹಿ ಮತ್ತು ಒಂದೆರಡು ಚಿತ್ರದಲ್ಲಿ ನಟಿಸಿರುವ ನಟಿ. ನನ್ನ ಯಶಸ್ಸು ಸಹಿಸಿದೆ ಈ ರೀತಿ ಮಾಡಿರಬಹುದಾ ಎಂದು ಭಾವಿಸುತ್ತೇನೆ. ಇಂದು ನನಗೆ ಆಗಿದ್ದು, ನಾಳೆ ನನಗೆ ಆಗಬಹುದು. ಒಂದು ಹೆಣ್ಣಿಗೆ ಈ ರೀತಿ ಮಾಡುವುದನ್ನ ನಾನು ಸಹಿಸುವುದಿಲ್ಲ. ಆ ದುಷ್ಟರನ್ನ ಹಿಡಿಯುವರೆಗೂ ನಾನು ಹೋರಾಡುತ್ತೇನೆ'' ಎಂದು ಬ್ರಿಷ್ಟಿ ತಿಳಿಸಿದ್ದಾರೆ.


Click it and Unblock the Notifications











