ಅನುಮಾನಾಸ್ಪದವಾಗಿ ಸಾವಿಗೀಡಾದ ಕಿರುತೆರೆ ನಟಿ.!
ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟಿಯರು ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿರುವುದು ಹೆಚ್ಚಾಗುತ್ತಿದೆ. ಕಳೆದ ವರ್ಷ ಅಸ್ಸಾಂ ಮೂಲದ ನಟಿ ಹಾಗೂ ಗಾಯಕಿ 'ಬಿದಿಶಾ' ದೆಹಲಿಯ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದರು. ಅದಾದ ಕೆಲವೆ ದಿನಗಳಲ್ಲಿ ಮುಂಬೈನ ಮಾಡೆಲ್ ಕಮ್ ನಟಿ ಕೃತಿಕಾ ಚೌಧರಿ ಕೂಡ ತಮ್ಮ ಮನೆಯಲ್ಲೇ ನಿಧನರಾಗಿದ್ದರು. ಈಗ ಬೆಂಗಾಳಿ ನಟಿ ಮೌಮಿತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಇದು ಮೇಲ್ನೋಟಕ್ಕೆ ಆತ್ಮಹತ್ಯೆಯಾಗಿದ್ದರೂ, ಯಾರಾದರೂ ಕೊಲೆ ಮಾಡಿರಬಹುದಾ ಎಂಬ ಶಂಕೆ ಮೂಡಿದೆ. 23 ವರ್ಷದ ಮೌಮಿತ ದೊಡ್ಡ ನಟಿಯಾಗುವ ಕನಸು ಕಂಡಿದ್ದರು. ಆದ್ರೆ, ಎಷ್ಟೇ ಪ್ರಯತ್ನ ಪಟ್ಟರು ಯಾವುದೇ ಅವಕಾಶಗಳು ಸಿಗಲಿಲ್ಲ. ಇದರಿಂದ ಮನನೊಂದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮೌಮಿತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚೆ ಡೆತ್ ನೋಟ್ ಬರೆದಿಟ್ಟಿದ್ದು, ಇದನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎರಡು ದಿನಗಳಿಂದ ಮನೆಯ ಬಾಗಿಲು ಮುಚ್ಚಿತ್ತು. ಇದನ್ನ ಗಮನಿಸಿದ ಮನೆ ಮಾಲೀಕ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂಲತಃ ಪಶ್ಚಿಮ ಬಂಗಾಳದವರಾಗಿದ್ದ ಮೌಮಿತ ಒಬ್ಬಂಟಿಯಾಗಿ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದಳು. ವೃತ್ತಿಯಲ್ಲಿ ಯಶಸ್ಸು ಕಾಣದ ಹಿನ್ನೆಲೆ ಮಾನಸಿಕವಾಗಿ ಖಿನ್ನತೆಗೆ ಒಳಗಾದ ನಟಿ ಸಾವಿಗೆ ಶರಣಾಗಿದ್ದಾಳೆ.


Click it and Unblock the Notifications











