For Quick Alerts
  ALLOW NOTIFICATIONS  
  For Daily Alerts

  ಕಾಂತಾರ ಟಿಕೆಟ್ ಕೇಳಿದ ಬೆಂಗಳೂರು ಬುಲ್ಸ್ ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

  |

  ಕಾಂತಾರ ಚಿತ್ರ ಒಂದೊಳ್ಳೆ ಕತೆಯನ್ನು ಹೊಂದಿದ್ದು ಕರಾವಳಿಯ ಭೂತಾರಾಧನೆ ಮತ್ತು ದೈವ ನರ್ತನದ ಮಾಹಿತಿ ಮತ್ತು ಮಹತ್ವವನ್ನು ಜನರಿಗೆ ತಿಳಿಸಿ ಕೊಟ್ಟಿದೆ.ಅದರಲ್ಲಿಯೂ ಚಿತ್ರದಲ್ಲಿನ ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದಾನೆ. ಕೊನೆಯ ಇಪ್ಪತ್ತು ನಿಮಿಷಗಳ ಕಾಲ ರಿಷಬ್ ಶೆಟ್ಟಿ ನಟನೆಯನ್ನು ಕಂಡ ಪ್ರೇಕ್ಷಕರು ರಿಷಬ್ ಶೆಟ್ಟಿ ಅವರಿಗೆ ಈ ಬಾರಿ ನ್ಯಾಷನಲ್ ಅವಾರ್ಡ್ ಮತ್ತೊಮ್ಮೆ ದಕ್ಕಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  ಕತೆ, ಚಿತ್ರಕತೆ, ಕ್ಯಾಮೆರಾ, ಸಂಗೀತ ಹೀಗೆ ಎಲ್ಲದರಲ್ಲಿಯೂ ಗೆದ್ದಿರುವ ಕಾಂತಾರ ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ದೊಡ್ಡ ಸಂಖ್ಯೆಯಲ್ಲಿ ಟ್ವೀಟ್ ಹಾಗೂ ಪೋಸ್ಟ್ ಮಾಡುತ್ತಿದ್ದಾರೆ ಸಿನಿಪ್ರೇಕ್ಷಕರು. ಅದೇ ರೀತಿ ಕಾಂತಾರ ಕುರಿತು ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಅಧಿಕೃತ ಖಾತೆಯಲ್ಲಿಯೂ ಕೂಡ ಟ್ವೀಟ್ ಮಾಡಿದ್ದಾರೆ. ಕುಂದಾಪುರ ಕನ್ನಡ ಶೈಲಿಯಲ್ಲಿಯೇ ರಿಷಬ್ ಶೆಟ್ಟಿ ಅವರನ್ನು ಉಲ್ಲೇಖಿಸಿ 'ಕಾಂತಾರ ಚಿತ್ರ ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ ರಿಷಬ್ ಶೆಟ್ಟಿ ಅವರೇ ಟಿಕೆಟ್ ಏನಾದರೂ ಸಿಕ್ತಾ' ಎಂದು ಬೆಂಗಳೂರು ಬುಲ್ಸ್ ಟ್ವೀಟ್ ಮಾಡಿದೆ.

  ಈ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ರಿಷಬ್ ಶೆಟ್ಟಿ 'ಟಿಕೆಟ್ ಸಿಗುವುದು ಕಷ್ಟ ಇದೆ ಟ್ರೈ ಮಾಡಿ, ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

  ಮೊದಲ ದಿನಕ್ಕಿಂತ ಎರಡನೇ ದಿನ ಕಾಂತಾರ ಅಬ್ಬರ ಬಲು ಜೋರು

  ಮೊದಲ ದಿನಕ್ಕಿಂತ ಎರಡನೇ ದಿನ ಕಾಂತಾರ ಅಬ್ಬರ ಬಲು ಜೋರು

  ಇನ್ನು ಕಾಂತಾರ ಚಿತ್ರ ಮೊದಲ ದಿನಕ್ಕಿಂತ ಎರಡನೇ ದಿನ ಒಳ್ಳೆಯ ಪ್ರದರ್ಶನ ಕಂಡಿದೆ. ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ನಿಖರವಾದ ಕಲೆಕ್ಷನ್ ಲೆಕ್ಕಾಚಾರವನ್ನು ನೀಡದಿದ್ದರೂ ಸಹ ಬಾಕ್ಸ್ ಆಫೀಸ್ ಪರಿಣಿತರು ಕಾಂತಾರ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಪ್ರೆಡಿಕ್ಷನ್ ಪ್ರಕಟಿಸಿದ್ದಾರೆ. ಈ ಬಾಕ್ಸ್ ಆಫೀಸ್ ಪರಿಣಿತರ ಪ್ರಕಾರ ಕಾಂತಾರ ಸಿನಿಮಾ ಮೊದಲ ದಿನ 4 ಕೋಟಿ ಹಾಗೂ ಎರಡನೇ ದಿನ 6.50 ಕೋಟಿ ಕಲೆಕ್ಷನ್ ಗಳಿಸಿದೆ. ಈ ಮೂಲಕ ಕಾಂತಾರ ಮೊದಲ ಎರಡು ದಿನಗಳ ಪೈಕಿ 10.50 ಕೋಟಿ ಬಾಚಿದೆ. ಇದು ರಿಷಬ್ ಶೆಟ್ಟಿ ಸಿನಿ ಜೀವನದಲ್ಲೇ ಅತಿದೊಡ್ಡ ಓಪನಿಂಗ್ ಆಗಿದೆ.

  ಮೂರನೇ ದಿನ ಕಲೆಕ್ಷನ್ ಹೆಚ್ಚು!

  ಮೂರನೇ ದಿನ ಕಲೆಕ್ಷನ್ ಹೆಚ್ಚು!

  ಇನ್ನು ಬೆಂಗಳೂರು ಬುಲ್ಸ್ ಟ್ವೀಟ್ ಮಾಡಿರುವ ಹಾಗೆ ಕಾಂತಾರ ಟಿಕೆಟ್ಸ್ ದೊರಕುವುದು ಕಷ್ಟವೇ ಸರಿ. ಏಕೆಂದರೆ ದಿನಕ್ಕೂ ಮುಂಚಿತವಾಗಿಯೇ ಪ್ರಮುಖ ನಗರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಮೊದಲೆರಡು ದಿನಗಳಿಗಿಂತ ಮೂರನೇ ದಿನ ಟಿಕೆಟ್ ಮಾರಾಟ ದೊಡ್ಡ ಮಟ್ಟದಲ್ಲಿದೆ. ಭಾನುವಾರವೂ ಸಹ ಆಗಿರುವ ಕಾರಣ ಕಾಂತಾರ ಮೂರನೇ ದಿನದ ಬುಕಿಂಗ್ಸ್ ಬಹುತೇಕ ಹೌಸ್‌ಫುಲ್ ಇದ್ದು ಭಾನುವಾರದ ಕಲೆಕ್ಷನ್ ಎಂಟು ಕೋಟಿ ದಾಟಿದರೂ ಆಶ್ಚರ್ಯವಿಲ್ಲ.

  ಕಾಂತಾರ ಮೆಚ್ಚಿದ ದೊಡ್ಮನೆ, ಪ್ರಭಾಸ್

  ಕಾಂತಾರ ಮೆಚ್ಚಿದ ದೊಡ್ಮನೆ, ಪ್ರಭಾಸ್

  ಕಾಂತಾರ ಚಿತ್ರವನ್ನು ವೀಕ್ಷಿಸಿದ ತೆಲುಗು ನಟ ಪ್ರಭಾಸ್ ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಚಿತ್ರ ವೀಕ್ಷಿಸಿ ಎಂಜಾಯ್ ಮಾಡಿದೆ, ಅದರಲ್ಲಿಯೂ ಚಿತ್ರದ ಕ್ಲೈಮ್ಯಾಕ್ಸ್ ಸಖತ್ ಇಷ್ಟವಾಯಿತು ಇಡೀ ತಂಡಕ್ಕೆ ಶುಭವಾಗಲಿ ಎಂದು ಬರೆದುಕೊಂಡಿದ್ದರು. ಇತ್ತ ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಕಾಂತಾರ ಚಿತ್ರದ ಪ್ರೀಮಿಯರ್ ಪ್ರದರ್ಶನವನ್ನು ವೀಕ್ಷಿಸಿ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

  English summary
  Bengaluru Bulls and Rishab Shetty twitter conversation about Kantara. Read on
  Sunday, October 2, 2022, 7:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X