twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ ಜಾಲ: ಹಲವು ಮಾಹಿತಿ ಸಿಕ್ಕಿದೆ, ಎಲ್ಲರ ವಿಚಾರಣೆ ನಡೆಯಲಿದೆ - ಕಮಲ್ ಪಂತ್

    |

    ಬೆಂಗಳೂರು ಡ್ರಗ್ ಜಾಲಕ್ಕೆ ಸಂಬಂಧಪಟ್ಟಂತೆ 'ನಟಿ ರಾಗಿಣಿ ಅವರ ತನಿಖೆ ನಡೆಯುತ್ತಿದೆ, ಸದ್ಯಕ್ಕೆ ಅವರ ಪಾತ್ರ ಏನು ಎಂಬುದನ್ನು ಹೇಳಲು ಸಾಧ್ಯವಿಲ್ಲ' ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

    Recommended Video

    Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ? | Filmibeat Kannada

    ಡ್ರಗ್ ಜಾಲಕ್ಕೆ ಸಂಬಂಧಪಟ್ಟಂತೆ ಇಂದು ಸುದ್ದಿಗೋಷ್ಠಿ ನಡೆಸಿದ ಕಮಲ್ ಪಂತ್ ''ಒಂದು ತಿಂಗಳನಿಂದ ಸಿಸಿಬಿ ಅಧಿಕಾರಿಗಳು ಡ್ರಗ್ ಜಾಲದ ತನಿಖೆ ಮಾಡುತ್ತಿದ್ದಾರೆ. ಸಿಸಿಬಿ ದಾಳಿ ವೇಳೆ ಬಂಧಿಸಲಾಗಿದ್ದ ಅನಿಕಾ ನೀಡಿದ ಮಾಹಿತಿ ಅನ್ವಯ ರವಿಶಂಕರ್ ಮತ್ತು ರಾಹುಲ್ ಎಂಬ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅವರಿಂದ ಹಲವು ಮಾಹಿತಿ ಸಿಕ್ಕಿದೆ. ಅವರ ಜೊತೆ ಸಂಪರ್ಕದಲ್ಲಿದ್ದವರ ವಿಚಾರಣೆಯೂ ನಡೆಸುತ್ತೇವೆ'' ಎಂದು ತಿಳಿಸಿದ್ದಾರೆ.

    ಸಾಕ್ಷ್ಯ ನಾಶಕ್ಕೆ ರಾಗಿಣಿ ಮಾಸ್ಟರ್ ಪ್ಲಾನ್: ವಾಟ್ಸಪ್ ಡಿಲೀಟ್ ಮಾಡಿದ ನಟಿಸಾಕ್ಷ್ಯ ನಾಶಕ್ಕೆ ರಾಗಿಣಿ ಮಾಸ್ಟರ್ ಪ್ಲಾನ್: ವಾಟ್ಸಪ್ ಡಿಲೀಟ್ ಮಾಡಿದ ನಟಿ

    'ರವಿಶಂಕರ್ ಎಂಬ ವ್ಯಕ್ತಿ ಜಯನಗರದ ಆರ್ ಟಿ ಓ ಕಚೇರಿಯಲ್ಲಿ ಕ್ಲರ್ಕ್ ಕೆಲಸ ಮಾಡ್ತಿದ್ದ. ಆತ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ, ಡ್ರಗ್ ಪೆಡ್ಲರ್ ಆಗಿದ್ದ ಎಂಬ ಮಾಹಿತಿ ಸಿಕ್ತು. ಆತನನ್ನು ಬಂಧಿಸಲಾಗಿದೆ. ಮೊಬೈಲ್ ಪರಿಶೀಲಿಸಿದ ವೇಳೆ ಇನ್ನು ಹೆಚ್ಚಿನ ಮಾಹಿತಿ ಸಿಕ್ಕಿದೆ' ಎಂದು ಕಮಿಷನರ್ ಹೇಳಿದ್ದಾರೆ.

    Bengaluru City Police Commissioner Kamal Pant Press Meet on Drug Mafia in Sandalwood

    'ಇನ್ನೊಬ್ಬ ವ್ಯಕ್ತಿ ಹೆಸರು ರಾಹುಲ್. ರಿಯಲ್ ಎಸ್ಟೇಟ್ ಮತ್ತು ಇತರೆ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಈತ ಬೇರೆ ರಾಜ್ಯ ಹಾಗೂ ದೇಶದ ಕಾರ್ಯಕ್ರಮಗಳಲ್ಲಿ, ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ' ಎಂದು ಪೊಲೀಸ್ ಆಯುಕ್ತ ಮಾಹಿತಿ ನೀಡಿದ್ದಾರೆ.

    Bengaluru City Police Commissioner Kamal Pant Press Meet on Drug Mafia in Sandalwood

    ನಟಿ ರಾಗಿಣಿಯನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳುನಟಿ ರಾಗಿಣಿಯನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು

    ರವಿಶಂಕರ್ ಮತ್ತು ರಾಹುಲ್ ಇಬ್ಬರು ಕನ್ನಡ ಚಿತ್ರರಂಗದ ನಟಿಯರ ಜೊತೆ ಸಂಪರ್ಕದಲ್ಲಿದ್ದರು. ರಾಗಿಣಿ ಅವರನ್ನು ಸಹ ಇದೇ ಹಿನ್ನೆಲೆ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಕೆಲವರಿಗೆ ನೋಟಿಸ್ ನೀಡುವ ತಯಾರಿ ನಡೆದಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

    English summary
    Bengaluru city police commissioner kamal pant press meet on drug mafia in sandalwood. Know more.
    Friday, September 4, 2020, 16:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X