For Quick Alerts
  ALLOW NOTIFICATIONS  
  For Daily Alerts

  ಎರಡು ಪ್ರಶಸ್ತಿ ಬಾಚಿಕೊಂಡ ದರ್ಶನ್ ಚಿತ್ರ, ಬೆಲ್ ಬಾಟಂ ಗೆ ಎರಡನೇ ಸ್ಥಾನ

  |

  12ನೇ ಬೆಂಗಳೂರು ಚಲನಚಿತ್ರೋತ್ಸವ ಇಂದಿಗೆ ಮುಕ್ತಾಯವಾಗಿದ್ದು, ಕೊನೆಯ ದಿನ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಟ್ಟಿಯನ್ನು ಘೋಷಿಸಲಾಗಿದೆ. ನಟ ದರ್ಶನ್ ಅವರ ಎರಡು ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ.

  ವರ್ಷದ ಅತ್ಯುತ್ತಮ ಜನಪ್ರಿಯ ಸಿನಿಮಾಗಳ ವಿಭಾಗದಲ್ಲಿ ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರ ಮೊದಲ ಪ್ರಶಸ್ತಿ ಬಾಚಿಕೊಂಡಿದೆ. ಎರಡನೇ ಸ್ಥಾನ 'ಬೆಲ್ ಬಾಟಂ' ಗೆ ದೊರೆತಿದೆ. ಮೂರನೇ ಬಹುಮಾನ 'ಯಜಮಾನ' ಪಾಲಾಗಿದೆ.

  ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಲ್ಲಿ ಹೇಮಂತ್ ರಾವ್ ನಿರ್ದೇಶನದ 'ಕವಲುದಾರಿ' ಚಿತ್ರಕ್ಕೆ ಮೊದಲ ಸ್ಥಾನ, ಸಚಿನ್ ಶೆಟ್ಟಿ ನಿರ್ದೇಶನದ 'ಒಂದು ಶಿಕಾರಿಯ ಕತೆ', ಮೂರನೇ ಸ್ಥಾನ ದಯಾಳ್ ಪದ್ಮನಾಭ್ ನಿರ್ದೇಶನದ 'ರಂಗನಾಯಕಿ' ಚಿತ್ರಕ್ಕೆ ಲಭಿಸಿದೆ. 'ಸೆಲ್ಫಿ ಮಮ್ಮಿ, ಗೂಗಮ್ ಡ್ಯಾಡಿ' ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ದೊರೆತಿದೆ.

  ಥಾಯ್ಲಂಡ್‌ನ 'ಹ್ಯಾಪಿ ಓಲ್ಡ್ ಡೇಸ್‌' ಗೆ ಪ್ರಶಸ್ತಿ

  ಥಾಯ್ಲಂಡ್‌ನ 'ಹ್ಯಾಪಿ ಓಲ್ಡ್ ಡೇಸ್‌' ಗೆ ಪ್ರಶಸ್ತಿ

  ಏಷ್ಯನ್ ಸಿನಿಮಾ ವಿಭಾಗದಲ್ಲಿ ಥಾಯ್‌ಲ್ಯಾಂಡ್‌ನ 'ಹ್ಯಾಪಿ ಓಲ್ಡ್ ಡೇಸ್' ಚಿತ್ರ ಮೊದಲ ಪ್ರಶಸ್ತಿಗೆ ಭಾಜನವಾಗಿದೆ. ಭಾರತೀಯ ಸಿನಿಮಾ ವಿಭಾಗದಲ್ಲಿ 'ಪನ್‌ಗ್ರನ್' ಚಿತ್ರ ಪ್ರಶಸ್ತಿ ಬಾಚಿಕೊಂಡಿದೆ. ತೀರ್ಪುಗಾರರ ವಿಶೇಷ ಪ್ರಶಸ್ತಿ 'ಬಿರಿಯಾನಿ' ಮತ್ತು 'ದಿ ಸೀಡ್' ಸಿನಿಮಾಕ್ಕೆ ದೊರೆತಿದೆ.

  'ಬಿರ್ಯಾನಿ' ಚಿತ್ರಕ್ಕೆ ವಿಶೇಷ ಪ್ರಶಸ್ತಿ

  'ಬಿರ್ಯಾನಿ' ಚಿತ್ರಕ್ಕೆ ವಿಶೇಷ ಪ್ರಶಸ್ತಿ

  ಚಿತ್ರಭಾರತಿ ಅತ್ಯುತ್ತಮ ಭಾರತೀಯ ಸಿನಿಮಾ ಪ್ರಶಸ್ತಿಗೆ ‘ಪಂಗ್ರುನ್'(ನಿರ್ದೇಶನ: ಮಹೇಶ್‌ ವಾಮನ್ ಮಂಜ್ರೇಕರ್‌) ಭಾಜನವಾಗಿದೆ. ತೀರ್ಪುಗಾರರ ವಿಶೇಷ ಭಾರತೀಯ ಸಿನಿಮಾ ಪ್ರಶಸ್ತಿಗೆ ‘ಬಿರ್ಯಾನಿ(ನಿರ್ದೇಶನ: ಸಜಿನ್ ಬಾಬು) ಮತ್ತು ‘ಜ್ವಾಲ್ವಿ(ದಿ ಸೀಡ್)(ನಿರ್ದೇಶನ: ರಜನಿ ಬಸುಮತ್ರೆ)' ಚಿತ್ರಗಳು ಆಯ್ಕೆಯಾಗಿವೆ.

  ಅತ್ಯುತ್ತಮ ವಿಮರ್ಶಕ ಚಿತ್ರ 'ದಿ ಡಾಗ್ ಆಂಡ್ ಹಿಸ್ ಮ್ಯಾನ್'

  ಅತ್ಯುತ್ತಮ ವಿಮರ್ಶಕ ಚಿತ್ರ 'ದಿ ಡಾಗ್ ಆಂಡ್ ಹಿಸ್ ಮ್ಯಾನ್'

  ಚಲನಚಿತ್ರವು ಸಿನಿಮಾ ವಿಮರ್ಶಕರ ಅಂತರರಾಷ್ಟ್ರೀಯ ಒಕ್ಕೂಟ (ಎಫ್‌ಐಪಿಆರ್‌ಎಎಸ್‌ಸಿಐ) ನೀಡುವ ಅತ್ಯುತ್ತಮ ವಿಮರ್ಶಕ ಚಿತ್ರಕ್ಕೆ ‘ದಿ ಡಾಗ್ ಅ್ಯಂಡ್ ಹಿಸ್ ಮ್ಯಾನ್'(ನಿರ್ದೇಶನ: ಸಿದ್ಧಾರ್ಥ ತ್ರಿಪಾಠಿ) ಆಯ್ಕೆಯಾಗಿದೆ.

  ರಾಜ್ಯಪಾಲರಿಂದ ಪ್ರಶಸ್ತಿ

  ರಾಜ್ಯಪಾಲರಿಂದ ಪ್ರಶಸ್ತಿ

  ಏಪ್ರಿಲ್ 24 ಕ್ಕೆ ಆರಂಭವಾದ 12 ನೇ ಬೆಂಗಳೂರು ಚಲನಚಿತ್ರೋತ್ಸವ ನವೆಂಬರ್ 4 ಕ್ಕೆ ಮುಗಿದಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಶಸ್ತಿಗೆ ಆಯ್ಕೆ ಆದ ಚಿತ್ರತಂಡಗಳಿಗೆ ನಿನ್ನೆ ಬಹುಮಾನ ನೀಡಿದ್ದಾರೆ.

  English summary
  12th Bengaluru film fest award list announced. Darsha's two movies got award, second place to Bel Bottom.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X