twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಚಿತ್ರೋತ್ಸವ:ಮೂಕಜ್ಜಿಯ ಕನಸು, ಕೆಜಿಎಫ್‌ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

    |

    Recommended Video

    ಸರಳ ಜೀವನದಲ್ಲಿ ನಟ ಯಶ್ ಅಭಿನಯದ ಶಿವ ಧಾರವಾಹಿ | FILMIBEAT KANNADA

    ಬೆಂಗಳೂರು, ಫೆಬ್ರವರಿ 28: ಬೆಂಗಳೂರು 11ನೇ ಚಿತ್ರೋತ್ಸವದಲ್ಲಿ ಮೂಕಜ್ಜಿಯ ಕನಸು ಚಿತ್ರವು ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದ ಪ್ರಶಸ್ತಿಗೆ ಭಾಜನವಾಗಿದೆ. ಕೆಜಿಎಫ್ ಚಿತ್ರವು ಮನೋರಂಜನಾತ್ಮಕ ಚಿತ್ರ ವಿಭಾಗದ ಉತ್ತಮ ಚಿತ್ರ ಪ್ರಶಸ್ತಿ ಬಾಚಿಕೊಂಡಿದೆ.

    ಕನ್ನಡ ಚಿತ್ರ ವಿಭಾಗದ ಎರಡನೇ ಉತ್ತಮ ಚಿತ್ರ ಪ್ರಶಸ್ತಿಗೆ ಸಾವಿತ್ರಬಾ ಫುಲೆ, ಮೂರನೇ ಪ್ರಶಸ್ತಿಗೆ ರಾಮನ ಸವಾರಿ ಚಿತ್ರವು ಭಾಜನವಾಗಿದೆ.

    ಮನೊರಂಜನಾತ್ಮಕ ಚಿತ್ರ ವಿಭಾಗದಲ್ಲಿ ಕೆಜಿಎಫ್ ಮೊದಲ ಸ್ಥಾನ ಪಡೆದರೆ, ಎರಡನೇ ಪ್ರಶಸ್ತಿಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಚಿತ್ರ ಪಡೆದುಕೊಂಡಿದೆ. ಶಿವಣ್ಣ ಅಭಿನಯದ ಟಗರು ಸಿನಿಮಾ ಮೂರನೇ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

    Bengaluru Film Fest: best movie award to KGF and Mukajji Kanasugalu

    'ನಾತಿಚಾರಮಿ' ಚಿತ್ರವು ಕನ್ನಡ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಆಯ್ಕೆ ಆಗಿದೆ. ಭಾರತೀಯ ಸಿನಿಮಾ ವಿಭಾಗದಲ್ಲಿ 'ಗೋಡೆಕೋ ಜಿಲೇಬಿ ಕಿಲಾನೆ ಲೇ ಜಾ ರಹಾ ಹೂಂ' ಚಿತ್ರವು ಉತ್ತಮ ಚಿತ್ರವಾಗಿ ಆಯ್ಕೆ ಆಗಿದೆ.

    ತೀರ್ಪುಗಾರರ ವಿಶೇಷ ಪ್ರಶಸ್ತಿಗೆ 'ಆಮೃತ್ಯು' ಸಿನಿಮಾ ಭಾಜನವಾಗಿದೆ. ವಿಮರ್ಶಕರ ಉತ್ತಮ ಚಿತ್ರ ಪ್ರಶಸ್ತಿ ಸಹ 'ಗೋಡೆಕೋ ಜಿಲೇಬಿ ಕಿಲಾನೆ ಲೇ ಜಾ ರಹಾ ಹೂಂ' ಗೆ ಸೇರಿದೆ.

    ಏಷ್ಯನ್ ಸಿನಿಮಾ ವಿಭಾಗದಲ್ಲಿ ತಮಿಳಿನ ಶಿವರಂಜನಿಯುಂ ಇನ್ನುಂ ಸಿಲ ಪೆಂಗಳುಂ' ಚಿತ್ರ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.

    English summary
    KGF and Mukajji Kanasugalu grab best kannada movie award in 11th Bengaluru International film fest.
    Thursday, February 28, 2019, 21:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X