ಬೆಂಗಳೂರಿನ ಹೆಬ್ಬಾಳದ ಸಿಂಧಿ ಶಾಲೆಯ ಪಠ್ಯದಲ್ಲಿ ನಟಿ ತಮನ್ನಾ; ಪೋಷಕರ ಆಕ್ರೋಶ.. ಯಾಕೀ ವಿವಾದ?

By ಫಿಲ್ಮಿಬೀಟ್ ಡೆಸ್ಕ್

ಬಹುಭಾಷಾ ನಟಿ ತಮನ್ನಾ ಭಾಟಿಯಾಗೆ ವಿಶ್ವದ ಮೂಲೆ ಮೂಲೆಯಲ್ಲಿ ಅಭಿಮಾನಿಗಳಿದ್ದಾರೆ. ಈ ನಟಿಯ ಸೌಂದರ್ಯಕ್ಕೆ, ಅಭಿನಯಕ್ಕೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಈ ನಟಿಗೆ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಫ್ಯಾನ್ಸ್ ಇದ್ದಾರೆ. ದಕ್ಷಿಣ ಭಾರತದಲ್ಲಿ ಇದ್ದಾಗ ಟ್ರೆಡಿಷನಲ್ ಲುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ತಮನ್ನಾ ಬಾಲಿವುಡ್‌ಗೆ ಹೋದ ಬಳಿಕ ಅವರ ದಾಟಿ ಬದಲಾಗಿದೆ.

ತಮನ್ನಾ ಸೌಂದರ್ಯಕ್ಕೆ ಮರುಳಾಗಿರುವ ಅಭಿಮಾನಿಗಳು ಪ್ರೀತಿಯಿಂದ ಮಿಲ್ಕಿ ಬ್ಯೂಟಿ ಅನ್ನೋ ಪಟ್ಟ ಕೊಟ್ಟಿದ್ದಾರೆ. ನಟನೆಯಿಂದ ಸದ್ದು ಮಾಡಿರುವ ತಮನ್ನಾ ವಿವಾದಗಳಿಂದಲೂ ಸದ್ದು ಮಾಡುತ್ತಿದ್ದಾರೆ. ಸದ್ಯ ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಶಾಲೆಯೊಂದು ತನ್ನ ಪಠ್ಯ ಪುಸ್ತಕದಲ್ಲಿ ತಮನ್ನಾ ಭಾಟಿಯಾ ಕುರಿತ ಪಠ್ಯವನ್ನು ಸೇರಿಸಿದೆ. ಈ ಕುರಿತು ಪೋಷಕರು ಶಾಲೆಯ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ.

Bengaluru Hebbal based Sindi school is in trouble with Tamannaah Bhatia in the text book

ದೇಶದಲ್ಲಿರುವ ಸಿಂಧಿ ಸಮುದಾಯದ ಬಗ್ಗೆ ತಿಳಿಸುವ ಸಲುವಾಗಿ ಹೆಬ್ಬಾಳದ ಸಿಂಧಿ ಶಾಲೆ ತಮನ್ನಾ ಭಾಟಿಯಾ ಬಗ್ಗೆ ಪಠ್ಯವನ್ನು ಅಳವಡಿಸಿದೆ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ಇದೇ ವಿಷಯದ ಬಗ್ಗೆ ಚರ್ಚೆಯಾಗುತ್ತಿದೆ. ಸದ್ಯ ಈ ವಿಷಯವೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಮಕ್ಕಳ ರಕ್ಷಣಾ ಆಯೋಗದ ಮೊರೆ ಹೋಗಿದ್ದಾರೆ.

ಹೆಬ್ಬಾಳದ ಸಿಂಧಿ ಶಾಲೆ ತನ್ನ 7ನೇ ತರಗತಿಯ ಪಠ್ಯಪುಸ್ತಕದ ಒಂದು ಅಧ್ಯಾಯದಲ್ಲಿ ನಟಿ ತಮನ್ನಾ ಭಾಟಿಯಾ ಕುರಿತು ಉಲ್ಲೇಖ ಮಾಡಿದೆ. ಅಸಲಿಗೆ ದೇಶದ ವಿಭಜನೆಯ ಬಳಿಕ ಸಿಂಧಿ ಸಮುದಾಯದ ಸ್ಥಿತಿಗತಿಗಳು, ಅವರ ವಲಸೆಗೆ ಸಂಬಂಧಿಸಿದಂತೆ ವಿವರಿಸಿದೆ. 1947 ರಿಂದ 1962ರವರೆಗಿನ ಈ ಸಿಂಧಿ ಸಮುದಾಯದ ಪರಿಸ್ಥಿತಿಯನ್ನು ಇಲ್ಲಿ ವಿವರಿಸಲಾಗಿತ್ತು.

Bengaluru Hebbal based Sindi school is in trouble with Tamannaah Bhatia in the text book

ಈ ವೇಳೆ ಈ ಸಮುದಾಯದಿಂದ ಜನಪ್ರಿಯರಾದವರನ್ನು ಉಲ್ಲೇಖ ಮಾಡಲಾಗಿತ್ತು. ಇದರಲ್ಲಿ ಕೇವಲ ತಮನ್ನಾ ಭಾಟಿಯಾ ಅಷ್ಟೇ ಅಲ್ಲ ನಟ ರಣವೀರ್ ಸಿಂಗ್ ಸೇರಿದಂತೆ ಸಿಂಧಿ ಸಮುದಾಯದ ಪ್ರಮುಖ ವ್ಯಕ್ತಿಗಳ ಕುರಿತು ಮಾಹಿತಿಯನ್ನು ನೀಡಲಾಗಿತ್ತು. ಆದರೆ, ಪೋಷಕರಿಗೆ ಮಿಲ್ಕಿ ಬ್ಯೂಟಿ ತಮನ್ನಾ ಹೆಸರು ಹಿಡಿಸಿಲ್ಲ. ಹೀಗಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲೆಯ ವಿರುದ್ಧ ದೂರು ಸಲ್ಲಿಸಿದ್ದಾರೆ.

ಅಸಲಿಗೆ ಪಠ್ಯ ಪುಸ್ತಕದಲ್ಲಿ ತಮನ್ನಾ ಭಾಟಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ. ತಮನ್ನಾ ಇತ್ತೀಚೆಗೆ ಬೋಲ್ಡ್ ದೃಶ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ತಮನ್ನಾ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ, ಮಕ್ಕಳಿಗೆ ಬೇಡ ವಿಷಯಗಳೇ ಬರುತ್ತವೆ. ಹೀಗಾಗಿ ಪಠ್ಯ ಪುಸ್ತಕದಲ್ಲಿ ಅವರ ವಿಷಯ ಯಾಕೆ? ಅಂತ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಕಳೆದ ಎರಡು ದಿನಗಳಿಂದ ಇದೇ ಚರ್ಚೆಯಲ್ಲಿದೆ.

ಇತ್ತ ಸಿಂಧಿ ಶಾಲೆ ಪಠ್ಯದಲ್ಲಿ ತಮನ್ನಾ ಹೆಸರು ಸೇರಿಸಿದ್ದನ್ನು ಸಮರ್ಥಿಸಿಕೊಂಡಿದ್ದರೆ, ಪೋಷಕರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ವಾದ ವಿವಾದಗಳು ನಡೆಯುತ್ತಿದೆ. ಇದು ದೇಶಾದಾದ್ಯಂತ ಸುದ್ದಿಯಾಗಿದ್ದರೂ, ನಟಿ ತಮನ್ನಾ ಕಡೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ತಮನ್ನಾ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Lesson about Tamannaah Bhatia in Bengaluru based Sindi school facing controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X