For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 21ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ

  |

  11ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 21ರಿಂದ ಆರಂಭವಾಗುತ್ತಿದೆ. ಗುರುವಾರ ಸಂಜೆ 6 ಗಂಟೆಗೆ ವಿಧಾನಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ ಉದ್ಟಾಟನೆ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

  ಈ ಬಾರಿಯ ಚಲನಚಿತ್ರೋತ್ಸದ ಮುಖ್ಯ ಅತಿಥಿಗಳಾಗಿ ಕನ್ನಡದ ಹಿರಿಯ ನಟ ಅನಂತ್ ನಾಗ್ ಮತ್ತು ಬಾಲಿವುಡ್ ನಿರ್ದೇಶಕ ರಾಹುಲ್ ರವೈಲ್ ಆಗಮಿಸಲಿದ್ದಾರೆ.

  ಪ್ರತಿವರ್ಷದಂತೆ ಈ ವರ್ಷವೂ ದೇಶ-ವಿದೇಶಗಳ ನೂರಾರು ಚಿತ್ರಗಳು ಚಲನಚಿತ್ರೋತ್ಸದಲ್ಲಿ ಭಾಗವಹಿಸುತ್ತಿದೆ. 60 ದೇಶದ 225 ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರೆಯಾನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.

  ಫಿಲಂ ಫೆಸ್ಟಿವಲ್ನ ಆರಂಭದ ಚಿತ್ರವಾಗಿ ಇರಾನ್ ದೇಶದ 'ಬಾಂಬ್ ಎ ಲವ್ ಸ್ಟೋರಿ' ಸಿನಿಮಾ ಪ್ರದರ್ಶನವಾಗಲಿದೆ. ವಿಶೇಷ ಅಂದ್ರೆ ಮುಕ್ತಾಯದ ಚಿತ್ರವೂ ಇರಾನ್ ದೇಶದ 'ಟೇಲ್ ಆಪ್ ದಿ ಸಿ' ಸಿನಿಮಾ ಪ್ರದರ್ಶನವಾಗಲಿದೆ.

  ಕಳೆದ ವರ್ಷ ನಮ್ಮನ್ನಗಲಿದ ರೆಬೆಲ್ ಸ್ಟಾರ್ ಅಂಬರೀಶ್, ಹಿರಿಯ ನಟ ಲೋಕನಾಥ್, ಎಂ ಎನ್ ವ್ಯಾಸರಾವ್ ಹಾಗೂ ಬಂಗಾಳಿ ಚಿತ್ರರಂಗದ ಮೃಣಾಲ್ ಸೇನ್ ಅವರ ನೆನಪಿನಾರ್ಥ ಅವರುಗಳ ಚಿತ್ರಗಳನ್ನ ಪ್ರದರ್ಶನ ಮಾಡಲಾಗುತ್ತೆ. ಚಿತ್ರೋತ್ಸವದಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ಹಾಗೂ ಸಾವಯವ ಕೃಷಿಕ ನಾರಾಯಣ ರೆಡ್ಡಿ ಅವರ ಕುರಿತ ಕಿರುಚಿತ್ರ ಪ್ರದರ್ಶನವಾಗಲಿವೆ. ವಿಶೇಷವಾಗಿ ಗಾಂಧಿ 150 ಶೀರ್ಷಿಕೆ ಅಡಿಯಲ್ಲಿ ನಾಲ್ಕು ವಿಶೇಷ ಸಿನಿಮಾಗಳ ಪ್ರದರ್ಶನ ಕಾಣಲಿವೆ

  ಅಂತಿಮವಾಗಿ ಫೆಬ್ರವರಿ 28 ರಂದು ವಿಧಾನಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು, ಸ್ಪರ್ಧೆಯಲ್ಲಿ ಗೆದ್ದ ಚಿತ್ರಗಳಿಗೆ ರಾಜ್ಯಪಾಲ ವಜುಬಾಯ್ ವಾಲಾ ಬಹುಮಾನ ವಿತರಿಸಲಿದ್ದಾರೆ.

  ಚಿತ್ರೋತ್ಸವದಲ್ಲಿ ನೂರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಸಾರ್ವಜನಿಕರಿಗೆ 800 ರೂಪಾಯಿ ಹಾಗೂ ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ, ಚಿತ್ರೋದ್ಯಮದ ಸದಸ್ಯರಿಗೆ 400 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

  English summary
  The 11th edition of Bengaluru International Film Festival (BIFFes) will be held during February 21 – 28, 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X