ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ: ಮಾರ್ಚ್ 3ರಂದು ಪ್ರದರ್ಶನವಾಗುವ ಸಿನಿಮಾಗಳ ಪಟ್ಟಿ
ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಸಿನಿಮೋತ್ಸವ ಕಳೆಕಟ್ಟಿದೆ. ದೇಶ ವಿದೇಶದ ನೂರಾರು ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕನ್ನಡದ ಹಲವು ಸಿನಿಮಾಗಳು ಈ ಪಟ್ಟಿಯಲ್ಲಿವೆ. 200ಕ್ಕೂ ಅಧಿಕ ಸಿನಿಮಾಗಳ 400ಕ್ಕೂ ಅಧಿಕ ಪ್ರದರ್ಶನಗಳು ಏರ್ಪಡಿಸಲಾಗುತ್ತಿದೆ.
ನಗರದ ಒರಾಯನ್ ಮಾಲ್‌ನಲ್ಲಿರುವ 11 ಸ್ಕ್ರೀನಗಳ ಜೊತೆಗೆ ಚಾಮರಾಜಪೇಟೆಯ ಡಾ. ರಾಜ್‌ಕುಮಾರ್ ಭವನ ಹಾಗೂ ಬನಶಂಕರಿಯ ಸುಚಿತ್ರಾ ಪರದೆಗಳಲ್ಲಿ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ. ಇತ್ತೀಚೆಗೆ ಸಿಎಂ ಸಿದ್ಧರಾಮಯ್ಯ 15ನೇ ಅಂತರಾಷ್ಟ್ರೀಯ ಚಿತ್ರೋತ್ಸವ ಉದ್ಘಾಟಿಸಿ ಶುಭ ಕೋರಿದ್ದರು. ವೀಕೆಂಡ್‌ನಲ್ಲಿ ಸಿನಿಪ್ರೇಮಿಗಳು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಅಷ್ಟು ಸುಲಭಕ್ಕೆ ನೋಡಲು ಸಿಗದ ವಿದೇಶದ ಸಿನಿಮಾಗಳನ್ನು ಚಿತ್ರೋತ್ಸವದಲ್ಲಿ ನೋಡುವ ಅವಕಾಶ ಸಿಗುತ್ತಿದೆ. ಹಲವು ವರ್ಷಗಳಿಂದ ಬೆಂಗಳೂರು ಸಿನಿಮೋತ್ಸವಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇಡೀ ಚಿತ್ರೋತ್ಸವದ ಪಾಸ್‌ಗಳನ್ನು ಪಡೆದು ಅಥವಾ ಪ್ರತಿದಿನ ಪಾಸ್ ಪಡೆದು ಸಿನಿಮಾಗಳನ್ನು ನೋಡುವ ಅವಕಾಶ ಕಲ್ಪಿಸಲಾಗುತ್ತಿದೆ.
ಇವತ್ತು(ಮಾರ್ಚ್ 2) ನಿರ್ವಾಣ, ಟಗರು ಪಲ್ಯ, ಹೋಲಿ ರೈಟ್ಸ್, ಭಕ್ತ ಕನಕದಾಸ, ಖರೀಜ್, ಫೋರ್‌ಮೋಸ್ಟ್ ಬೈ ನೈಟ್, ಎಂಟಿ ನೆಸ್ಟ್, ಸನ್ ಅಂಡ್ ಕಾಂಕ್ರೀಟ್, ಗರುಡ ಪುರಾಣ, ಆಲ್ ಇಂಡಿಯಾ ರೇಡಿಯೋ, ಮುನ್ನುಡಿ, ಅಮರ ಶಿಲ್ಪಿ ಜಕಣಾಚಾರಿ ಸೇರಿದಂತೆ ಹಲವು ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ನಾಳೆ (ಮಾರ್ಚ್ 3) ಯಾವೆಲ್ಲಾ ಸಿನಿಮಾಗಳು ನೋಡಬಹುದು ಎನ್ನುವ ಲಿಸ್ಟ್ ಮುಂದೆ ಇದೆ ಓದಿ.

ಒರಾಯನ್ ಮಾಲ್
ಸ್ಕ್ರೀನ್ 1: ದಿ ಆರ್ಗಾನಿಕ್ ಸೀಡ್, ಫೇಸ್ ಕವರ್
ಸ್ಕ್ರೀನ್ 2: ದಿ ಮಿಸ್ಸಿಂಗ್ ಬಾಯ್, ದೇವೀರಿ
ಸ್ಕ್ರೀನ್ 3: ಬರ್ಡ್ ಥೀಫ್, ಗೋರೈ ಫಕ್ರೀ
ಸ್ಕ್ರೀನ್ 4: ದಿ ಆರ್ಡಿನರೀಸ್, ದಿ ಬ್ಯಾಟಲ್, ಅಫೈರ್, 20,000 ಸ್ಪೀಚೀಸ್ ಆಫ್ ಬೀಸ್, ಫೋರ್ ಡಾಟರ್ಸ್
ಸ್ಕ್ರೀನ್ 5: ಹೇರ್, ಶಿವಮ್ಮ, ಥೆರೆಸ್ಟ್ರಿಲ್ ವರ್ಸಸ್, ಫಾಲೆನ್ ಲೀವ್ಸ್, ಯಾನಿಕ್, ದಿ ಝೋನ್ ಆಫ್ ಇನ್ಟ್‌ರೆಸ್ಟ್
ಸ್ಕ್ರೀನ್ 6: ಒನ್ಸ್ಅಪಾನ್ ಎ ವಿಲೇಜ್, ತತ್ಸಮ ತದ್ಬವ, ಘೋಸ್ಟ್, ಚೌ ಚೌ ಬಾತ್, ಕ್ಷೇತ್ರಪತಿ
ಸ್ಕ್ರೀನ್ 7: ಫ್ರೆಮೊಂಟ್, ಇಫ್ ಒನ್ಲಿ ಐ ಕುಡ್ ಹಿಬೆಲ್‌ನೆಟ್, ಸ್ಲೋ, ಡೋರ್‌ಮಿಟರಿ, ದೇರ್ ಈಸ್ ಸ್ಟಿಲ್ ಟುಮಾರೊ
ಸ್ಕ್ರೀನ್ 8: ಎಕ್ಸೊಡಸ್, ಸ್ಥಾಲ್, ಅನ್ಡ್ರಾಗೊಗಿ, ಮಿಥ್ಯ, ಕ್ಲೋಸ್ ಯುವರ್ ಐಸ್
ಸ್ಕ್ರೀನ್ 9: ಸಿಕ್ಸ್ ಫೀಟ್ ಓವರ್, ರಾಸ್ತಾ, ಗೋಲ್ಡಾ, ಪೂಕ್ಕಾಲಂ, ಬಂಪರ್
ಸ್ಕ್ರೀನ್ 10: ಬನೆಲ್ & ಅಡಮ, ಡಾಲಿ, ಎ ಓಲ್ ಲೈಫ್, ಬ್ಲಾಕ್‌ಬರ್ಡ್ ಬ್ಲಾಕ್‌ಬರ್ಡ್ ಬ್ಲಾಕ್‌ಬರಿ, ಲಾ ಚಿಮೆರಾ
ಸ್ಕ್ರೀನ್ 11: ಹೋಂ ಅಡ್ರೆಸ್, ದುನಿಯಾ, ಥೊಥೆಂ, ಥ್ರೂ ದಿ ಒಲಿವ್ ಟ್ರೀಸ್
ಸುಚಿತ್ರಾ- ಬನಶಂಕರಿ
ಮಯೂರ, ಅಮೃತಧಾರೆ, ಚಿಗುರಿದ ಕನಸು
ಡಾ. ರಾಜ್‌ಕುಮಾರ್ ಭವನ ಚಾಮರಾಜಪೇಟೆ
ರವಿಕೆ ಪ್ರಸಂಗ, ತಾರಿಣಿ, ಕಂದೀಲು- ದಿ ರೇ ಆಫ್ ಹೋಪ್


Click it and Unblock the Notifications











