ಮೊದಲ ಬೆಂಗಳೂರು ಕಂಬಳಕ್ಕೆ ತಾರಾ ಮೆರಗು: ಕರಾವಳಿ ಚೆಲುವೆಯರಾದ ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ ಭಾಗಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮೊಟ್ಟಮೊದಲ ಬೆಂಗಳೂರು ಕಂಬಳ ಭಾರೀ ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಸ್ಯಾಂಡಲ್‌ವುಡ್, ಬಾಲಿವುಡ್‌ ನಟ, ನಟಿಯರ ಸಮ್ಮಿಲನವಾಗಲಿದ್ದು, ಕಂಬಳಕ್ಕೆ ತಾರಾ ಮೆರುಗು ಬರಲಿದೆ. ನವೆಂಬರ್ 25 ಮತ್ತು 26 ರಂದು ಬೆಂಗಳೂರು ಕಂಬಳ ನಡೆಯಲಿದೆ.

ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದಲ್ಲಿ ತುಳುನಾಡಿನ ಕಂಬಳದ ಇತಿಹಾಸದಲ್ಲಿಯೇ ಅತಿ ಉದ್ದದ ಟ್ರ್ಯಾಕ್ ಅನ್ನು ಮಾಡಲಾಗುತ್ತದೆ. ನಟಿ ಅನುಷ್ಕಾ ಶೆಟ್ಟಿ ಬೆಂಗಳೂರು ಕಂಬಳವನ್ನು ಉದ್ಘಾಟಿಸಲಿದ್ದಾರೆ. ಇನ್ನು, ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ರೈ ಬಚ್ಚನ್ ಕೂಡ ಕಾರ್ಯಕ್ರಮಕ್ಕೆ ಹಾಜರಿರಲಿದ್ದಾರೆ.

aishwarya-rai-and-anushka-shetty

ಕಂಬಳಕ್ಕೆ ಬರಲಿದ್ದಾರೆ ಐಶ್ವರ್ಯಾ ರೈ ಮತ್ತು ಅನುಷ್ಕಾ ಶೆಟ್ಟಿ

ಬೆಂಗಳೂರಿನ ಮೊದಲ ಕಂಬಳದಲ್ಲಿ 150ಕ್ಕೂ ಹೆಚ್ಚು ಕೋಣಗಳು ಭಾಗವಹಿಸಲಿದ್ದು, ಇದರಲ್ಲಿ ಜನಪ್ರಿಯ ಚಲನಚಿತ್ರ ತಾರೆಯರಾದ ಐಶ್ವರ್ಯಾ ರೈ ಮತ್ತು ಅನುಷ್ಕಾ ಶೆಟ್ಟಿ ಕೂಡ ಭಾಗಿಯಾಗಲಿದ್ದಾರೆ. ಜೊತೆಗೆ ಸ್ಯಾಂಡಲ್‌ವುಡ್, ಬಾಲಿವುಡ್‌ ನಟ, ನಟಿಯರು ಕಂಬಳಕ್ಕೆ ಮೆರುಗು ತೆರಲಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ತಿಳಿಸಿದ್ದಾರೆ.

ಬೆಂಗಳೂರು ಕಂಬಳ ವೀಕ್ಷಿಸಲು ಐಶ್ವರ್ಯ ರೈ, ಅನುಷ್ಕಾ ಶೆಟ್ಟಿ ಸೇರಿದಂತೆ ಕರಾವಳಿ ಭಾಗದ ಚಲನಚಿತ್ರ ತಾರೆಯರು ಆಗಮಿಸಲಿದ್ದಾರೆ ಎಂದು ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಕಂಬಳ ಉದ್ಘಾಟಿಸಲಿದ್ದಾರೆ. ಇವರ ಜೊತೆಗೆ ನಟರಾದ ಸುನೀಲ್ ಶೆಟ್ಟಿ, ಶಿಲ್ಪಾ ಶೆಟ್ಟಿ ಮತ್ತು ಯಶ್, ದರ್ಶನ್ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು ಭಾಗವಹಿಸಲಿದ್ದಾರೆ.

ಬೆಂಗಳೂರು ಕಂಬಳಕ್ಕೆ ರಾಜ್ಯ ಸರ್ಕಾರದಿಂದ 1 ಕೋಟಿ ಅನುದಾನ

ಕಂಬಳದ ಎರಡು ದಿನಗಳಲ್ಲಿ ಮೂರರಿಂದ ಐದು ಲಕ್ಷ ಮಂದಿ ಪ್ರೇಕ್ಷಕರು ಬರಲಿದ್ದಾರೆ ಎಂದು ಆಯೋಜಕರು ಅಂದಾಜಿಸಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ 1 ಕೋಟಿ ರೂಪಾಯಿ ಅನುದಾನ ಘೋಷಿಸಿದೆ. ಇನ್ನು, ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ನವೆಂಬರ್ 23 ರಂದು ಉಪ್ಪಿನಂಗಡಿಯಿಂದ ಆತ್ಮೀಯವಾಗಿ ಕಳುಹಿಸಲಾಗುವುದು. ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಹಾಸನ ಮತ್ತು ನೆಲಮಂಗಲದಲ್ಲಿ ಕೋಣಗಳನ್ನು ಸ್ವಾಗತಿಸಲು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ಅಶೋಕ್ ರೈ ಹೇಳಿದ್ದಾರೆ.

aishwarya-rai-and-anushka-shetty

ಬೆಂಗಳೂರು ಕಂಬಳದ ಸಿದ್ಧತೆಯ ಭಾಗವಾಗಿ, ಕರಾವಳಿ ಜಿಲ್ಲೆಗಳ 50 ಕ್ಕೂ ಹೆಚ್ಚು ಸಮುದಾಯಗಳ ಪ್ರತಿನಿಧಿಗಳು ಸಭೆ ನಡೆಸಿದೆ. ಕರಾವಳಿ ಜಿಲ್ಲೆಗಳ ಎಲ್ಲ ಸಮುದಾಯದವರನ್ನು ಒಟ್ಟಿಗೆ ಕರೆತರಲು ಬೆಂಗಳೂರು ಕಂಬಳ ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಕೆ.ಪ್ರಕಾಶ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯುವ ಕಂಬಳ ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವವರಿಗೆ ರೂ 1.50 ಲಕ್ಷ ನಗದು ಮತ್ತು ಎರಡು ಪವನ್ ಚಿನ್ನ ಸಿಗುತ್ತದೆ. ಭಾಗವಹಿಸುವ ಜೋಡಿ ಕೋಣಗಳಿಗೆ ಶೀಲ್ಡ್ ಮತ್ತು ವಿಜೇತ ಜಾಕಿ ಚಿನ್ನದ ಪದಕ ನೀಡಲಾಗುತ್ತದೆ. ಕೋಣಗಳ ಸಾಗಣೆಯ ವೆಚ್ಚಕ್ಕಾಗಿ ಕಂಬಳ ಮಾಲೀಕರಿಗೆ 50,000 ರೂಪಾಯಿಗಳನ್ನು ನೀಡಲಾಗುತ್ತದೆ.

ಕಂಬಳ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅದರ ಪಾಕಪದ್ಧತಿಯೊಂದಿಗೆ ಎತ್ತಿ ಹಿಡಿಯುವ ಗುರಿಯನ್ನು ಹೊಂದಿದೆ. 250 ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಉತ್ತರ ಕನ್ನಡದ ಹಲಸಿನ ಖಾದ್ಯಗಳು, ಉಪ್ಪಿನಕಾಯಿ, ಕಲಾಕೃತಿಗಳು ಮತ್ತು ಇತರ ತಿಂಡಿಗಳನ್ನು ಮಾರಾಟ ಮಾಡಲಾಗುತ್ತದೆ.

More from Filmibeat

English summary
Actress Aishwarya Rai and Anushka Shetty to attend bengaluru kambala.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X