For Quick Alerts
  ALLOW NOTIFICATIONS  
  For Daily Alerts

  ಅಪ್ಪು ಫೇವರಿಟ್ ಚಿತ್ರಮಂದಿರ ನರ್ತಕಿ ರೀ-ಓಪನ್: ಪುನೀತ್ ಫೋಟೊ ಇಟ್ಟು ಪೂಜೆ!

  |

  ಬೆಂಗಳೂರಿನ ಕೆಜಿ ರಸ್ತೆಯಲ್ಲಿರೋ ಪ್ರಮುಖ ಹಲವು ಚಿತ್ರಮಂದಿರಗಳಿವೆ. ಇವುಗಳಲ್ಲಿ ನರ್ತಕಿ ಥಿಯೇಟರ್ ಕೂಡ ಒಂದು. ಈಗಾಗಲೇ ಇದೇ ಚಿತ್ರಮಂದಿರಲ್ಲಿ ಹಲವು ಸಿನಿಮಾ ಪ್ರದರ್ಶನ ಕಂಡಿವೆ. ಕೆಲವು ಸಿನಿಮಾಗಳು ಶತ ದಿನಗಳನ್ನೂ ಪೂರೈಸಿವೆ. ಮತ್ತೆ ಕೆಲವು ಸಿನಿಮಾ 25 ವಾರ ಭರ್ಜರಿ ಪ್ರದರ್ಶನ ಕಂಡಿದೆ.

  ಆದರೆ, ಕಳೆದ ಕೆಲವು ದಿನಗಳಿಂದ ನರ್ತಕಿ ಚಿತ್ರಮಂದಿರವನ್ನು ಮುಚ್ಚಲಾಗಿತ್ತು. ಕಳೆದ 10 ತಿಂಗಳಿನಿಂದ ಪ್ರದರ್ಶನ ನಿಲ್ಲಿಸಿದ್ದ ಕೆ. ಜಿ ರಸ್ತೆಯ ಎರಡು ಪ್ರಮುಖ ಚಿತ್ರಮಂದಿರಗಳಲ್ಲಿ ಒಂದು ಸಂತೋಷ್ ಕೆಲವು ದಿನಗಳ ಹಿಂದಷ್ಟೇ ಮತ್ತೆ ಕಾರ್ಯಾರಂಭ ಮಾಡಿದೆ. ಧೀರೇನ್ ರಾಮ್‌ ಕುಮಾರ್ ಅಭಿನಯದ 'ಶಿವ 143' ಸಿನಿಮಾ ಇಲ್ಲಿಯೇ ರಿಲೀಸ್ ಆಗಿದೆ. ಈಗ ನರ್ತಕಿ ಸಿನಿಮಾ ಕಾರ್ಯಾರಂಭ ಮಾಡಲು ಸಜ್ಜಾಗಿದೆ.

  ಅಪ್ಪು ಲಕ್ಕಿ ಥಿಯೇಟರ್‌ನಲ್ಲಿ 'ಲಕ್ಕಿಮ್ಯಾನ್' ದರ್ಶನ: ಒಟ್ಟು ಎಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಗೊತ್ತಾ?ಅಪ್ಪು ಲಕ್ಕಿ ಥಿಯೇಟರ್‌ನಲ್ಲಿ 'ಲಕ್ಕಿಮ್ಯಾನ್' ದರ್ಶನ: ಒಟ್ಟು ಎಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಗೊತ್ತಾ?

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ 'ಲಕ್ಕಿ ಮ್ಯಾನ್' ಸಿನಿಮಾ ಬಿಡುಗಡೆ ಮಾಡುವ ಮೂಲಕ ರೀ-ಓಪನ್ ಆಗುತ್ತಿದೆ. ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅದಕ್ಕಾಗಿಯೇ ನರ್ತಕಿ ಚಿತ್ರಮಂದಿರಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ.

   ಪುನೀತ್ ಫೋಟೊಗೆ ಪೂಜೆ

  ಪುನೀತ್ ಫೋಟೊಗೆ ಪೂಜೆ

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಯಾಂಡಲ್‌ವುಡ್ ಮಂದಿಗೆ ಬಲು ಪ್ರೀತಿ. ಸದಾ ನಗುಮುಖ ಸರದಾರನಂತಿದ್ದ ಅಪ್ಪು ಅಕಾಲಿಕ ಅಗಲಿಕೆ ಎಲ್ಲರನ್ನೂ ನೋವುಂಟು ಮಾಡಿತ್ತು. ಪ್ರದರ್ಶಕರ ವಲಯ ಕೂಡ ಅಪ್ಪು ಅಗಲಿಕೆಯಿಂದ ನೊಂದಿತ್ತು. ಹೀಗಾಗಿ ನರ್ತಿಕಿ ಚಿತ್ರಮಂದಿರವನ್ನು ಮತ್ತೆ ಕಾರ್ಯಾರಂಭ ಮಾಡುವ ಮುನ್ನ ಪುನೀತ್ ರಾಜ್‌ಕುಮಾರ್ ಫೋಟೊವನ್ನು ಇಟ್ಟು ಚಿತ್ರಮಂದಿರದ ಸಿಬ್ಬಂದಿಗಳು ಪೂಜೆಯನ್ನು ಸಲ್ಲಿಸಿದ್ದಾರೆ.

  ಅಪ್ಪು ಮತ್ತು ನಾನು ಈ ಚಿತ್ರ ಮಾಡುವ ಯೋಜನೆ ಹಾಕಿದ್ವಿ ಎಂದ ರಮ್ಯಾ; ಮಿಸ್ ಆಯ್ತು ದೊಡ್ಡ ಸಿನಿಮಾ!ಅಪ್ಪು ಮತ್ತು ನಾನು ಈ ಚಿತ್ರ ಮಾಡುವ ಯೋಜನೆ ಹಾಕಿದ್ವಿ ಎಂದ ರಮ್ಯಾ; ಮಿಸ್ ಆಯ್ತು ದೊಡ್ಡ ಸಿನಿಮಾ!

   ನರ್ತಕಿಯಲ್ಲಿ ದೇವರಾದ ಅಪ್ಪು

  ನರ್ತಕಿಯಲ್ಲಿ ದೇವರಾದ ಅಪ್ಪು

  ನರ್ತಕಿ ಚಿತ್ರಮಂದಿರ ರೀ ಓಪನ್ ಆಗುವ ಮುನ್ನ ಪೂಜೆ ಕಾರ್ಯವನ್ನು ನರ್ತಕಿ ಥ್ರಿಯೇಟರ್ ಸಿಬ್ಬಂದಿ ಹಮ್ಮಿಕೊಂಡಿತ್ತು. ಈ ವೇಳೆ ಅಪ್ಪು ಫೋಟೊಗೆ ಪೂಜೆ ಸಲ್ಲಿಸಿದ್ದ ಫೋಟೊಗಳು ವೈರಲ್ ಆಗಿದ್ದು, ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. " ನರ್ತಕಿ ಚಿತ್ರಮಂದಿರ ಮತ್ತೆ ರೀ-ಓಪನ್ ಆಗಿದೆ. ಇದರ ಪೂಜೆಗೆ ಮುಕ್ಕೋಟಿ ದೇವರು ಇದ್ದರೂ, ಪೂಜೆಗೆ ಅಂತ ದೇವರ ಬದಲೂ ಪುನೀತ್ ಪೋಟೊ ಇರಿಸಿದ್ದಾರೆ. ಇವರ ಶಕ್ತಿ ಇನ್ನಷ್ಟು ಇರಬಹುದು. ನಾಮ ಹಲವು ಆದರೆ ದೇವರೊಬ್ಬರೆ." ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

   ಲಕ್ಕಿ ಥಿಯೇಟರ್‌ನಲ್ಲಿ 'ಲಕ್ಕಿ ಮ್ಯಾನ್'

  ಲಕ್ಕಿ ಥಿಯೇಟರ್‌ನಲ್ಲಿ 'ಲಕ್ಕಿ ಮ್ಯಾನ್'

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಷ್ಟ ಥಿಯೇಟರ್‌ ಅಂದರೆ, ಅದು ನರ್ತಿಕಿ. ಅದೆಷ್ಟೇ ಮಲ್ಟಿಪ್ಲೆಕ್ಸ್ ಥಿಯೇಟರ್ ಬಂದರೂ, ಸಿಂಗಲ್ ಸ್ಕ್ರೀನ್ ಕ್ರೇಜ್ ಮಾತ್ರ ಕಮ್ಮಿಯಾಗಿರಲಿಲ್ಲ. ಈ ಕಾರಣಕ್ಕೇನೋ ಪುನೀತ್ ರಾಜ್‌ಕುಮಾರ್‌ಗೆ ನರ್ತಿಕಿ ಥಿಯೇಟರ್ ತುಂಬಾನೇ ಇಷ್ಟ ಆಗಿತ್ತು. ಇಲ್ಲಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೆ ಖುಷಿ ವ್ಯಕ್ತಪಡಿಸುತ್ತಿದ್ದರು. ಈ ಅದೇ ಚಿತ್ರಮಂದಿರ ಅಪ್ಪು ಅಭಿನಯದ ಕೊನೆಯ ಸಿನಿಮಾ 'ಲಕ್ಕಿ ಮ್ಯಾನ್' ಮೂಲಕವೇ ಶುಭಾರಂಭ ಮಾಡುತ್ತಿದೆ.

  'ಲಕ್ಕಿಮ್ಯಾನ್' ಅಡ್ವಾನ್ಸ್ ಬುಕ್ಕಿಂಗ್ ಚಿಂದಿ: ಶುಕ್ರವಾರ ಎಲ್ಲೆಲ್ಲಿ ಫ್ಯಾನ್ಸ್ ಸೆಲೆಬ್ರೇಷನ್ ಹೇಗಿರುತ್ತೆ ಗೊತ್ತಾ?'ಲಕ್ಕಿಮ್ಯಾನ್' ಅಡ್ವಾನ್ಸ್ ಬುಕ್ಕಿಂಗ್ ಚಿಂದಿ: ಶುಕ್ರವಾರ ಎಲ್ಲೆಲ್ಲಿ ಫ್ಯಾನ್ಸ್ ಸೆಲೆಬ್ರೇಷನ್ ಹೇಗಿರುತ್ತೆ ಗೊತ್ತಾ?

   ಕೆ ಜಿ ರಸ್ತೆಯಲ್ಲಿ ಸಂಭ್ರಮ

  ಕೆ ಜಿ ರಸ್ತೆಯಲ್ಲಿ ಸಂಭ್ರಮ

  ನರ್ತಿಕಿ ಹಾಗೂ ಸಂತೋಷ್ ಚಿತ್ರಮಂದಿರ ಪ್ರದರ್ಶನ ನಿಲ್ಲಿಸಿದ್ದರಿಂದ ಕೆಜಿ ರಸ್ತೆಯಲ್ಲಿ ಸಿನಿಮಾ ರಿಲೀಸ್ ಮಾಡೋದನ್ನೇ ಮರೆತು ಹೋಗಿದ್ದರು. ಈಗ ಮತ್ತೆ 'ಲಕ್ಕಿ ಮ್ಯಾನ್' ಸಿನಿಮಾದ ಮೂಲಕ ಕೆಜಿ ರಸ್ತೆಯಲ್ಲಿ ಸಂಭ್ರಮ ಮನೆ ಮಾಡಿದೆ. ಡಾರ್ಲಿಂಗ್ ಕೃಷ್ಣ, ಪುನೀತ್ ರಾಜ್‌ಕುಮಾರ್ ಹಾಗೂ ಪ್ರಭುದೇವರನ್ನು ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

  English summary
  Bengaluru Nartaki Theater Re Open: Pooja For Puneeth Rajkumar Photo Before Showing Lucky Man Movie. Know More.
  Thursday, September 8, 2022, 16:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X