ಹಿಂದೆ ಸರಿದ ಹಿರಿಯ ವಕೀಲರು? A 2 ಬದಲು A 1 ಮಾಡಲು ಮುಂದಾದ್ರಾ ಪೊಲೀಸ್?
ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿ 62 ದಿನಗಳ ಮೇಲಾಗಿದೆ. ಇನ್ನೂ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಇನ್ನೊಂದು ಕಡೆ ಈ ಕೇಸ್‌ನಲ್ಲಿ ಆರೋಪಿ ನಂ 1 ಆಗಿರುವ ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದೇ ವೇಳೆ ಈ ಕೇಸ್‌ನಲ್ಲಿ ಶಾಕಿಂಗ್ ವಿಷಯವೊಂದು ಹೊರಬಿದ್ದಿದೆ.
ಈ ಕೇಸ್‌ನಲ್ಲಿ ಪೊಲೀಸರು ಈಗಾಗಲೇ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಆದಷ್ಟು ಬೇಗ ದರ್ಶನ್ ಹಾಗೂ ಅವರ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡುಕೊಳ್ಳುತ್ತಿದ್ದಾರೆ. ಈ ವೇಳೆ ದರ್ಶನ್‌ಗೆ ಅತೀ ದೊಡ್ಡ ಕಂಟಕ ಎದುರಾಗಿದೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೆ ಪೊಲೀಸರು ಜಾರ್ಜ್ ಶೀಟ್‌ನಲ್ಲಿ ದರ್ಶನ್‌ರನ್ನು ಆರೋಪಿ ನಂ 1 ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಪೊಲೀಸರು ರೇಣುಕಾಸ್ವಾಮಿ ಮರ್ಡರ್ ಕೇಸ್ ತನಿಖೆ ವೇಳೆ ಆರೋಪಿಗಳ ಮೊಬೈಲ್ ರಿಟ್ರೀವ್‌ಗೆ ಮುಂದಾಗಿದ್ದರು. ಈ ವೇಳೆ ಇದೇ ಕೇಸ್‌ನಲ್ಲಿ ಆರೋಪಿಯಾಗಿರುವ ಪ್ರದೂಷ್ ರೇಣುಕಾಸ್ವಾಮಿಯ ಕೆಲವು ಫೋಟೊಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಹತ್ಯೆ ಬಳಿಕ ಆ ಫೋಟೊಗಳನ್ನು ಡಿಲೀಟ್ ಕೂಡ ಮಾಡಿದ್ದ. ಆತನ ಮೊಬೈಲ್ ರಿಟ್ರೀವ್ ಮಾಡುವ ವೇಳೆ ರೇಣುಕಾಸ್ವಾಮಿಯ ರಕ್ತ ಸಿಕ್ತ ಫೋಟೊಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಬೇಡಿಕೊಂಡರೂ ಬಿಡಲಿಲ್ಲ
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ರೇಣುಸ್ವಾಮಿ ಸಾಯುವುದಕ್ಕೂ ಮುನ್ನ ದರ್ಶನ್ ಗ್ಯಾಂಗ್ ಬಳಿ ಪರಿ ಪರಿಯಾಗಿ ಬೇಡಿಕೊಂಡಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಕೂಡ ಸಿಕ್ಕಿದೆ ಎಂದು ಹೇಳಾಗಿದೆ. ಇದು ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಆರೋಪಿ ನಂ 1 ದರ್ಶನ್?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ರನ್ನು ಬಂಧಿಸುವ ವೇಳೆ ಆರೋಪಿ ನಂ 2 ಆಗಿ ಮಾಡಲಾಗಿತ್ತು. ಹಾಗೇ ಪವಿತ್ರಾ ಗೌಡ ಆರೋಪಿ ನಂ 1 ಎಂದು ಹೇಳಲಾಗಿತ್ತು. ಈಗ ತನಿಖೆ ಮುಗಿದ ಬೆನ್ನಲ್ಲೇ ಪೊಲೀಸರಿಗೆ ಸಿಕ್ಕಿರುವ ಸಾಕ್ಷ್ಯಗಳನ್ನು ಆಧರಿಸಿ ಚಾರ್ಜ್ ಶೀಟ್‌ನಲ್ಲಿ ದರ್ಶನ್‌ರನ್ನು ಆರೋಪಿ ನಂ 1 ಎಂದು ಪರಿಗಣಿಸಲು ಪೊಲೀಸರು ನಿರ್ಧರಿಸಿದ್ದಾರೆಂದು ವರದಿಯಾಗಿದೆ. ಒಂದು ವೇಳೆ ಹಾಗೇನಾದರೂ ದರ್ಶನ್ ಈ ಕೊಲೆ ಪ್ರಕರಣದ ಪ್ರಮುಖ ರೂವಾರಿಯಾಗುತ್ತಾರೆ.
ದರ್ಶನ್ ವಿರುದ್ಧ ಸಾಕ್ಷ್ಯಗಳು
ಎಫ್‌ಎಸ್‌ಎಲ್ ವರದಿಯಲ್ಲಿ ದರ್ಶನ್ ವಿರುದ್ಧ ಹಲವು ಸಾಕ್ಷ್ಯಗಳು ಸಿಕ್ಕಿದೆ ಎನ್ನಲಾಗಿದೆ. ದರ್ಶನ್ ಅಂದು ಧರಿಸಿದ್ದ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಆ ಬಟ್ಟೆಗಳನ್ನು ಆರ್‌ಆರ್ ನಗರದ ನಿವಾಸದಲ್ಲಿ ವಶಕ್ಕೆ ಪಡೆಯಲಾಗಿತ್ತು. ಹಾಗೇ ಹತ್ಯೆ ಬಳಸಿದ ವಸ್ತುಗಳ ಸಾಕ್ಷ್ಯ ಲಾಠಿ ದೊಣ್ಣೆ ಬೆಲ್ಟ್‌ನಲ್ಲಿ ರಕ್ತದ ಮಾದರಿ ಕೂಡ ಮ್ಯಾಚ್ ಆಗಿದೆ. ಸಿಸಿಟಿವಿ ಫೂಟೇಜ್ ಅನ್ನು ಡಿಲೀಟ್ ಮಾಡಲಾಗಿದ್ದು, ಅದನ್ನು ರಿಟ್ರೀವ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ದರ್ಶನ್ ಪರ ವಾದಿಸಲು ಹಿಂದೇಟು
ಇದೇ ವೇಳೆ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೆಲವು ದಿನಗಳ ಹಿಂದೆ ಹಿರಿಯ ವಕೀಲ ಸಿ ವಿ ನಾಗೇಶ್ ಅವರನ್ನು ಭೇಟಿ ಮಾಡಿ ದರ್ಶನ್ ಕೇಸ್ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆದ್ರೀಗ ಸಿ ವಿ ನಾಗೇಶ್ ಅವರು ಹಿಂದೇಟು ಹಾಕಿದ್ದಾರೆ ಅಂತಾನೂ ಮಾಧ್ಯಮಗಳು ವರದಿ ಮಾಡಿವೆ. ಒಟ್ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್‌ಗೆ ದಿನದಿಂದ ದಿನಕ್ಕೆ ಕಂಟಕ ಆಗುತ್ತಲೇ ಇದೆ.


Click it and Unblock the Notifications










