For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಸಿಸಿಬಿ ಕಾರ್ಯಾಚರಣೆ ಬಗ್ಗೆ ಕಮಲ್ ಪಂಥ್ ಮೆಚ್ಚುಗೆ

  |

  ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸ್ಯಾಂಡಲ್‌ವುಡ್ ತಾರೆಯರು ಸೇರಿದಂತೆ ಇತರೆ ಎಲ್ಲ ಆರೋಪಿಗಳು ಡ್ರಗ್ಸ್ ಸೇವಿಸಿದ್ದರು ಎಂಬುದು ಇಂದು ಬಂದಿರುವ ಎಫ್‌ಎಸ್‌ಎಲ್‌ ವರದಿಯಿಂದ ಖಾತ್ರಿಯಾಗಿದೆ. ಆ ಮೂಲಕ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯವೊಂದನ್ನು ನೀಡಲು ಸಿಸಿಬಿ ಪೊಲೀಸರು ಸಫಲರಾಗಿದ್ದಾರೆ.

  ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್‌ನಲ್ಲಿ ಆರಂಭವಾದ ಸಿನಿಮಾರಂಗ ಮತ್ತು ಡ್ರಗ್ಸ್ ಪ್ರಕರಣದ ನಂಟು ಸ್ಯಾಂಡಲ್‌ವುಡ್‌ಗೂ ಚಾಚಿ ಇಲ್ಲಿಯೂ ಅಭಿಮಾನಿಗಳ ಆರಾಧ್ಯ ನಟಿಯರು ಡ್ರಗ್ಸ್‌ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡರು. ಸುಶಾಂತ್ ಸಿಂಗ್ ಪ್ರಕರಣದ ಜೊತೆಗೆ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣವನ್ನೂ ದೇಶದ ಸುದ್ದಿ ಮಾಧ್ಯಮಗಳು ಹತ್ತರಿದಿಂದ ಗಮನಿಸಲು ಆರಂಭಿಸಿದ್ದವು.

  ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ಒತ್ತಡ ಎಲ್ಲವನ್ನೂ ಒಳಗೊಂಡ ಈ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಸಾಲು-ಸಾಲು ಬಂಧನಗಳನ್ನು ಮಾಡಿದರು. ಹಲವು ಸೆಲೆಬ್ರಿಟಿಗಳನ್ನು ವಿಚಾರಣೆ ನಡೆಸಿದರು. ಅಂತಿಮವಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯವೊಂದನ್ನು ನೀಡಲು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತ ಕಮಲ್ ಪಂಥ್ ಹೊಗಳಿದ್ದಾರೆ.

  ಎಲ್ಲ ಆರೋಪಿಗಳ ವರದಿ ಪಾಸಿಟಿವ್ ಬಂದಿದೆ: ಕಮಲ್ ಪಂಥ್

  ಎಲ್ಲ ಆರೋಪಿಗಳ ವರದಿ ಪಾಸಿಟಿವ್ ಬಂದಿದೆ: ಕಮಲ್ ಪಂಥ್

  ಇದೀಗ ಬಂದಿರುವ ಎಫ್‌ಎಸ್‌ಎಲ್ ವರದಿ ಪ್ರಕಾರ ಪ್ರಕರಣದಲ್ಲಿ ಆರೋಪಿತರಾಗಿ ಸಿಸಿಬಿ ಪೊಲೀಸರು ಬಂಧಿಸಿದ್ದ ಎಲ್ಲರೂ ಡ್ರಗ್ಸ್ ಸೇವಿಸಿದ್ದರು ಎಂಬುದು ಖಾತ್ರಿಯಾಗಿದೆ ಇದು ಸಿಸಿಬಿಗೆ ಸಕಾರಾತ್ಮಕ ಫಲಿತಾಂಶವಾಗಿದ್ದು, ಸಿಸಿಬಿಯು ಈ ಪ್ರಕರಣವನ್ನು ಸರಿಯಾದ ದಾರಿಯಲ್ಲಿಯೇ ತನಿಖೆ ನಡೆಸಿದೆ ಎಂಬುದಕ್ಕೆ ಸಾಕ್ಷ್ಯ ಇಂದು ಬಂದಿರುವ ಎಫ್‌ಎಸ್‌ಎಲ್ ವರದಿ ಎಂದಿದ್ದಾರೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್.

  ಸಾಕಷ್ಟು ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ: ಕಮಲ್ ಪಂಥ್

  ಸಾಕಷ್ಟು ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ: ಕಮಲ್ ಪಂಥ್

  ''ಈ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ಬಹಳ ಚೆನ್ನಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲರ ವರದಿಗಳು ಪಾಸಿಟಿವ್ ಬಂದಿವೆ. ಡ್ರಗ್ಸ್ ಸೇವಿಸಿರುವುದು ಧೃಡವಾಗುವ ಜೊತೆಗೆ ಆರೋಪಿಗಳು ಡ್ರಗ್ಸ್ ತರಿಸಿಕೊಂಡಿರುವುದಕ್ಕೆಯೂ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ವಾಟ್ಸ್‌ಆಪ್ ಕಾಲ್, ವಿಡಿಯೋ ಕಾಲ್, ಚಾಟ್‌ಗಳು ಇನ್ನಿತರೆ ದಾಖಲೆಗಳನ್ನು ಪೊಲೀಸರು ಈ ಪ್ರಕರಣದಲ್ಲಿ ಕಲೆ ಹಾಕಿದ್ದಾರೆ. ಎಲ್ಲ ದಾಖಲೆಗಳನ್ನು ನ್ಯಾಯಾಲಯದ ವಿಚಾರಣೆ ವೇಳೆ ನೀಡಲಾಗುತ್ತದೆ. ತೀರ್ಪು ನೀಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ'' ಎಂದಿದ್ದಾರೆ ಪಂಥ್.

  ಪ್ರಭಾವಿಗಳೊಟ್ಟಿಗೆ ಸಂಪರ್ಕ ಹೊಂದಿದ್ದವರ ಬಂಧನ

  ಪ್ರಭಾವಿಗಳೊಟ್ಟಿಗೆ ಸಂಪರ್ಕ ಹೊಂದಿದ್ದವರ ಬಂಧನ

  ಸಂಜನಾ ಗಲ್ರಾಣಿ, ರಾಗಿಣಿ ದ್ವಿವೇದಿ ಸೇರಿದಂತೆ ಹಲವು ಪ್ರಭಾವಿಗಳನ್ನು, ಪ್ರಭಾವಿಗಳೊಟ್ಟಿಗೆ ಸಂಪರ್ಕ ಇದ್ದವರನ್ನು ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. ಅಷ್ಟು ಮಾತ್ರವೇ ಅಲ್ಲದೆ, ಲೂಸ್ ಮಾದ ಯೋಗಿ, ದಿಗಂತ್, ಐಂದ್ರಿತಾ ರೇ, ಸೌಂದರ್ಯ ಜಗದೀಶ್, ಅಕುಲ್ ಬಾಲಾಜಿ ಇನ್ನೂ ಹಲವಾರು ನಟ-ನಟಿಯರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮಾಡಿದ್ದಾರೆ. ಸಾಕಷ್ಟು ರಾಜಕೀಯ ಒತ್ತಡದ ನಡುವೆಯೂ ಸಿಸಿಬಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ದಾಖಲೆಗಳನ್ನು, ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.

  ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು

  ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು

  ಸಂಜನಾ ಗಲ್ರಾನಿ, ರಾಗಿಣಿ ಸೇರಿದಂತೆ ಹಲವು ಆರೋಪಿಗಳು ಸಿಸಿಬಿ ಪೊಲೀಸರ ತನಿಖೆ ಮೇಲೆ ಅನುಮಾನವನ್ನು ವ್ಯಕ್ತಪಡಿಸಿದ್ದರು. ಉದ್ದೇಶಪೂರ್ವಕವಾಗಿ ನಮ್ಮನ್ನು ಸಿಕ್ಕಿ ಹಾಕಿಸುವ ಕಾರ್ಯ ಮಾಡಲಾಗಿದೆ ಎಂದಿದ್ದರು. ಆದಿತ್ಯ ಆಳ್ವಾ ಸೇರಿದಂತೆ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅವರನ್ನೆಲ್ಲ ಬಂಧಿಸುವುದು ಪೊಲೀಸರಿಗೆ ಸವಾಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 20 ಕ್ಕೂ ಹೆಚ್ಚು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಶಿವಪ್ರಕಾಶ್, ವೀರೇನ್ ಖನ್ನಾ, ಆದಿತ್ಯ ಆಳ್ವಾ, ವೈಭವ್ ಜೈನ್, ವಿನಯ್ ಕುಮಾರ್, ರಾಹುಲ್ ಟೊನ್ಸೆ, ಲೂಮ್ ಪೆಪ್ಪರ್, ಪ್ರಶಾಂತ್ ರಾಜ್, ಅಭಿಸ್ವಾಮಿ, ಮೊಹಮ್ಮದ್ ಮೆಸ್ಸಿ, ಎ ವಿನೋದ್ ಹಾಗೂ ಕೆಲವು ವಿದೇಶಿ ಪ್ರಜೆಗಳನ್ನು ಸಹ ಸಿಸಿಬಿ ಪೊಲೀಸರು ಬಂಧಿಸಿದ್ದರು.

  English summary
  Bengaluru Police Commissioner Kamal Pant praised CCB police For investigating Sandalwood Drug case very well. All accused FSL report came positive.
  Tuesday, August 24, 2021, 17:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X