ರೇಸ್‌ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು: ಸಿಎಂ ಬೊಮ್ಮಾಯಿ ಘೋಷಣೆ
ಬೆಂಗಳೂರಿನ 100 ಫೀಟ್ ರಿಂಗ್ ರಸ್ತೆಗೆ ಪುನೀತ್ ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ ಅಂಗವಾಗಿ 'ಬಾನದಾರಿಯಲ್ಲಿ ಪುನೀತ ಪಯಣ' ಎಂಬ ಅದ್ಧೂರಿ ಕಾರ್ಯಕ್ರಮವನ್ನು ಬಿಬಿಎಂಪಿ ವತಿಯಿಂದ ಪದ್ಮನಾಭನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಾಮಕರಣ ಕಾರ್ಯ ನೆರವೇರಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಅದೇ ವೇದಿಕೆಯಲ್ಲಿ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡುವುದಾಗಿ ಘೋಷಣೆ ಮಾಡಿದರು.
ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ, ಪ್ರತಿದಿನವೂ ಒಟ್ಟಿಗೆ ಇರುತ್ತಿದ್ದೆವು, ವಾರದ ಏಳು ದಿನವೂ ನಾವು ಒಟ್ಟಿಗೆ ಇದ್ದ ದಿನಗಳೂ ಸಹ ಇವೆ. ಆ ವ್ಯಕ್ತಿಯೂ ಬಂಗಾರದ ಹೃದಯವಿದ್ದ ವ್ಯಕ್ತಿ, ಅಪಾರವಾದ ಜನರನ್ನು, ದೇಶ-ವಿದೇಶಗಳಲ್ಲಿ ಸ್ನೇಹಿತರನ್ನು ಅಂಬರೀಶ್ ಗಳಿಸಿದ್ದರು'' ಎಂದರು ಬೊಮ್ಮಾಯಿ.

ಅವರ ಸ್ಮಾರಕ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ, ಒಂದುವರೆ ವರ್ಷದ ಹಿಂದೆ ಸ್ಮಾರಕ ನಿರ್ಮಾಣ ಕಾರ್ಯ ಆರಂಭ ಮಾಡಿದೆವು. ಮಾರ್ಚ್ ಮೊದಲ ವಾರದಲ್ಲಿ ಅಂಬರೀಶ್ ಸ್ಮಾರಕ ಉದ್ಘಾಟನೆ ಆಗಲಿದೆ ಎಂದರು.
''ರೇಸ್‌ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ಇಡುವುದು ಸೂಕ್ತ ಎನಿಸುತ್ತದೆ' ಎಂದರು ಸಿಎಂ. ಅವರ ಮಾತು ಕೇಳಿ ಸಭಿಕರು ನಕ್ಕಾಗ, 'ನಗಬೇಡಿ, ಅಂಬರೀಶ್ ಬಗ್ಗೆ ಗೊತ್ತಿರುವವರು ಇದು ಸರಿಯಾದ ನಿರ್ಧಾರ ಎಂದು ಗುರುತಿಸುತ್ತಾರೆ. ಅವರು ಹೆಚ್ಚು ಸಮಯವನ್ನು ರೇಸ್‌ಕೋರ್ಸ್‌ನಲ್ಲಿ ಕಳೆಯುತ್ತಿದ್ದರು, ಅವರು ಕುದುರೆಗಳ ಮಾಲೀಕರೂ ಸಹ ಆಗಿದ್ದರು. ರೇಸ್‌ಕೋರ್ಸ್ ರಸ್ತೆಗೆ ಗಾಂಧಿ ನಗರವೂ ಹತ್ತಿರ ಇದೆ'' ಹಾಗಾಗಿ ಅದೇ ರಸ್ತೆಗೆ ಅಂಬರೀಶ್ ಹೆಸರಿಡುವುದು ಸೂಕ್ತ ಎಂದರು ಬೊಮ್ಮಾಯಿ.
''ಅಂಬರೀಶ್ ಜೊತೆ ತಮಗಿದ್ದ ಆತ್ಮೀಯತೆ ನೆನಪು ಮಾಡಿಕೊಂಡ ಅಂಬರೀಶ್, ಮಗನೇ ಸರಿಯಾದ ರಸ್ತೆಗೆ ನನ್ನ ಹೆಸರಿಟ್ಟಿದ್ದೀಯ ಎನ್ನುತ್ತಿದ್ದ ಅಂಬರೀಶ, ನಾನೂ ಸಹ ಹೇಳುತ್ತಿದ್ದೆ, ನಿನ್ನ ಬಗ್ಗೆ ಗೊತ್ತಿದೆಯೋ ಅದಕ್ಕೆ ಇಟ್ಟಿದ್ದೇನೆ ಎನ್ನುತ್ತಿದ್ದೆ'' ಎಂದು ತಮಾಷೆ ಮಾಡಿದರು ಸಿಎಂ.


Click it and Unblock the Notifications











