ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಪ್ರೇಕ್ಷಕರಿಗೆ ಸಿಹಿಸುದ್ದಿ

ಪ್ಯಾನ್ ಇಂಡಿಯಾ ಟ್ರೆಂಡು.. ದೊಡ್ಡ ಸಿನಿಮಾಗಳ ಅಭಾವ.. ಸಣ್ಣ ಸಿನಿಮಾಗಳನ್ನು ನೋಡಲು ಚಿತ್ರಮಂದಿರಗಳಿಗೆ ಬಾರದ ಪ್ರೇಕ್ಷಕರು.. ಓಟಿಟಿ ಆರ್ಭಟ.. ಇದೆಲ್ಲದರ ನಡುವೆ ಚಿತ್ರಮಂದಿರಗಳ ಗೋಳು ಹೇಳತೀರದು. ಇದೇ ಕಾರಣಕ್ಕೆ ಚಿತ್ರಮಂದಿರಗಳು ಒಂದೊಂದಾಗಿ ನೆಲಸಮವಾಗಿತ್ತಿವೆ. ಆ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳು ಎದ್ದು ನಿಲ್ಲುತ್ತಿವೆ. ಮಲ್ಟಿಪ್ಲೆಕ್ಸ್‌ಗಳು ಹೆಚ್ಚಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಖದರ್ ಕಳೆದುಕೊಳ್ಳುತ್ತಿವೆ.

ಬೆಂಗಳೂರಿನಲ್ಲೇ ಸಾಕಷ್ಟು ಚಿತ್ರಮಂದಿರಗಳು ಬಂದ್ ಆಗಿವೆ. ಕೆಲವು ನೆಲಸಮವಾಗಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಕೆಡವಿ ಮಲ್ಟಿಪೆಕ್ಸ್ ನಿರ್ಮಿಸಲಾಗುತ್ತಿದೆ. ಆದರೂ ಥಿಯೇಟರ್‌ನಿಂದ ಏನು ಲಾಭ ಇಲ್ಲ ಎನ್ನುವ ಮಾತಿದೆ. ಲಾಲ್‌ಬಾಗ್ ಬಳಿ ಇರುವ ಐಕಾನಿಕ್ ಊವರ್ಶಿ ಚಿತ್ರಮಂದಿರ ನೆಲಸಮವಾಗುತ್ತದೆ ಎನ್ನುವ ಸುದ್ದಿ 4 ತಿಂಗಳ ಹಿಂದೆ ಕೇಳಿಬಂದಿತ್ತು.

Bengaluru s Urvashi Theatre Gets Relief Will Not Close Soon

ಬೆಂಗಳೂರಿನಲ್ಲೇ ಅತಿದೊಡ್ಡ ಸಿಂಗಲ್ ಸ್ಕ್ರೀನ್‌ ಥಿಯೇಟರ್‌ ಎನ್ನುವ ಹೆಗ್ಗಳಿಕೆ ಊರ್ವಶಿ ಥಿಯೇಟರ್‌ಗೆ ಇದೆ. ಒಟ್ಟು 1100 ಸೀಟಿಂಗ್ ಸಾಮರ್ಥ್ಯ ಇರುವ ಥಿಯೇಟರ್ ಇದು. ದೊಡ್ಡ ಸ್ಕ್ರೀನ್ ಕೂಡ ಇದೆ. ನಗರದ ಕೇಂದ್ರ ಭಾಗದಲ್ಲೇ ಇರುವುದರಿಂದ ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಹೌಸ್‌ಫುಲ್ ಪ್ರದರ್ಶನ ಕಾಣುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪ್ರೇಕ್ಷಕರನ್ನು ಊರ್ವಶಿ ಚಿತ್ರಮಂದಿರ ಇಂದಿಗೂ ಸೆಳೆಯುತ್ತಿದೆ. ಒಳ್ಳೆ ಪಾರ್ಕಿಂಗ್ ವ್ಯವಸ್ಥೆ ಕೂಡ ಇಲ್ಲಿದೆ. ಹಾಗಾಗಿ ಊರ್ವಶಿ ಚಿತ್ರಮಂದಿರ ಬಾಗಿಲು ಮುಚ್ಚುತ್ತದೆ ಎನ್ನುವ ಸುದ್ದಿ ಸಿನಿರಸಿಕರ ಬೇಸರಕ್ಕೆ ಕಾರಣವಾಗಿತ್ತು.

ಸದ್ಯಕ್ಕೆ ಊರ್ವಶಿ ಚಿತ್ರಮಂದಿರ ಬಂದ್ ಆಗಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು 3 ವರ್ಷ ಕಾಂಟ್ರಾಕ್ಟ್ ಮುಂದುವರೆಸಿರುವುದರಿಂದ ಎಂದಿನಂತೆ ಸಿನಿಮಾ ಪ್ರದರ್ಶನ ಮುಂದುವರೆಯುತ್ತದೆ ಎನ್ನಲಾಗ್ತಿದೆ. ಸದ್ಯ 'ಧುರಂಧರ್'-2 ಸಿನಿಮಾ ಅಲ್ಲಿ ಪ್ರದರ್ಶನವಾಗುತ್ತಿದೆ. ಆದಿತ್ಯಧರ್ ನಿರ್ದೇಶನದ ಚಿತ್ರ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಕೂಡ ಸಿನಿಮಾ ಹೌಸ್‌ಫುಲ್ ಆಗ್ತಿದೆ. ಶನಿವಾರ(ಮಾರ್ಚ್ 21) ಊರ್ವಶಿ ಥಿಯೇಟರ್‌ನಲ್ಲಿ 4 ಶೋಗಳು ಹೆಚ್ಚು ಕಮ್ಮಿ ಹೌಸ್‌ಫುಲ್ ಆಗಿತ್ತು. ಭಾನುವಾರದ ಅಡ್ವಾನ್ಸ್ ಬುಕ್ಕಿಂಗ್ ಕೂಡ ಜೋರಾಗಿದೆ.

ಫೆಬ್ರವರಿಯಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಹೊಸ ಕಾಮಗಾರಿ ಶುರು ಮಾಡುತ್ತಾರೆ ಎನ್ನಲಾಗಿತ್ತು. 1970ರಲ್ಲಿ ಊರ್ವಶಿ ಚಿತ್ರಮಂದಿರ ನಿರ್ಮಾಣವಾಗಿತ್ತು. ಜಾಗ ಲೀಸ್ ಪಡೆದು ಚಿತ್ರಮಂದಿರ ಆರಂಭಿಸಲಾಗಿತ್ತು. 2018ರಲ್ಲಿ ಲೀಸ್ ಅವಧಿ ಮುಕ್ತಾಯವಾಗಿತ್ತು. ಭೂ ಮಾಲೀಕರು ಹಾಗೂ ಲೀಸ್ ಪಡೆದವರ ಮಧ್ಯೆ ವಿವಾದ ಶುರುವಾಗಿತ್ತು. ಹಾಗಾಗಿ 8 ವರ್ಷಗಳಿಂದ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ನಡೀತಿತ್ತು. ಆದರೆ ಭೂ ಮಾಲೀಕರು ಜಾಗ ವಾಪಸ್ ಪಡೆದಿರುವುದರಿಂದ ಥಿಯೇಟರ್ ನೆಲಸಮವಾಗುತ್ತದೆ ಎನ್ನಲಾಗಿತ್ತು. ಇದೀಗ 3 ವರ್ಷ ಕಾಂಟ್ರಾಕ್ಟ್ ಮುಂದುವರೆಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ. ಒಟ್ಟಾರೆ ಸಿನಿರಸಿಕರಿಗೆ ಇದು ಸಿಹಿಸುದ್ದಿಯೇ ಸರಿ.

ಊರ್ವಶಿ ಚಿತ್ರಮಂದಿರದ ಬಗ್ಗೆ ಕನ್ನಡ ಪ್ರೇಕ್ಷಕರಿಗೆ ಒಂದು ಬೇಸರವೂ ಇದೆ. ಅಲ್ಲಿ ಪರಭಾಷಾ ಸಿನಿಮಾಗಳನ್ನು ಹೆಚ್ಚು ಪ್ರದರ್ಶನ ಮಾಡುತ್ತಾರೆ ಎನ್ನುವ ಆರೋಪ ಕೆಲವರದ್ದು. ದೊಡ್ಡ ಬಜೆಟ್ ಸಿನಿಮಾಗಳನ್ನು ಮಾತ್ರ ಹಾಕುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತದೆ. ರಜನಿಕಾಂತ್, ವಿಜಯ್, ಪ್ರಭಾಸ್, ಅಲ್ಲು ಅರ್ಜುನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಹೀಗೆ ಸ್ಟಾರ್ ನಟರ ಸಿನಿಮಾಗಳೇ ಅಲ್ಲಿ ಹೆಚ್ಚು ಬಿಡುಗಡೆ ಆಗುತ್ತದೆ. 'KGF' ಸರಣಿ ಸಿನಿಮಾಗಳು ಊರ್ವಶಿ ಚಿತ್ರಮಂದಿರದಲ್ಲಿ ಸಖತ್ ಸದ್ದು ಮಾಡಿದ್ದವು.

ಇತ್ತೀಚೆಗೆ 'ಕಾಂತಾರ', 'ಅವನೇ ಶ್ರೀಮನ್ನಾರಾಯಣ', 'ಗರುಡಗಮನ ವೃಷಭವಾಹನ' ಸೇರಿ ಕೆಲ ಕನ್ನಡ ಸಿನಿಮಾಗಳು ಅಲ್ಲಿ ಪ್ರದರ್ಶನ ಕಂಡಿತ್ತು. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಕೂಡ ಅಲ್ಲಿ ಬಿಡುಗಡೆ ಆಗಲಿದೆ. ಅಂದಹಾಗೆ 55 ವರ್ಷಗಳ ಹಿಂದೆ ಡಾ. ರಾಜ್‌ಕುಮಾರ್ ಊರ್ವಶಿ ಚಿತ್ರಮಂದಿರವನ್ನು ಉದ್ಘಾಟನೆ ಮಾಡಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X