33 ವರ್ಷಗಳ ನಂತರ: ಆಗ ಕಮಲ್ ಹಾಸನ್ ಈಗ ಪುನೀತ್ ರಾಜ್‌ಕುಮಾರ್
ಮೂರು ದಶಕಗಳ ಹಿಂದೆ ಕಮಲ್ ಹಾಸನ್ ಸಿನಿಮಾ ಗೆ ಸಿಕ್ಕಿದ್ದ ಅಂದದ ಚೌಕಟ್ಟೊಂದು ಈಗ ಪುನೀತ್ ರಾಜ್‌ಕುಮಾರ್ ಸಿನಿಮಾಕ್ಕೆ ದೊರೆತಿದೆ.
Recommended Video
ಹೌದು, 33 ವರ್ಷಗಳ ಹಿಂದೆ ಕಮಲ್ ಹಾಸನ್-ಅಮಲಾ ನಟಿಸಿದ್ದ ಸೂಪರ್ ಹಿಟ್ ಸಿನಿಮಾ 'ಪುಷ್ಪಕ ವಿಮಾನ' ಬಹುತೇಕ ಬೆಂಗಳೂರಿನ ಖ್ಯಾತ ಹೊಟೆಲ್ 'ವಿಂಡ್ಸರ್ ಮ್ಯಾನರ್' ನಲ್ಲಿ ಚಿತ್ರೀಕರಣವಾಗಿತ್ತು. ಅದಾದ ನಂತರ ಯಾವ ಸಿನಿಮಾಗಳ ಚಿತ್ರೀಕರಣಕ್ಕೂ ವಿಂಡ್ಸರ್‌ಮ್ಯಾನರ್ ಹೋಟೆಲ್‌ನವರು ಅವಕಾಶ ಕೊಟ್ಟಿರಲಿಲ್ಲ.
ಆದರೆ ಈಗ 33 ವರ್ಷಗಳ ಬಳಿಕ ಅದೇ ವಿಂಡ್ಸರ್‌ಮ್ಯಾನರ್ ಹೋಟೆಲ್‌ನಲ್ಲಿ ಪುನೀತ್ ಅವರ ಸಿನಿಮಾ ಚಿತ್ರೀಕರಣವಾಗಿದೆ. ಪುನೀತ್ ಅಭಿನಯದ ಜೇಮ್ಸ್ ಸಿನಿಮಾದವನ್ನು ದೃಶ್ಯಗಳನ್ನು ಬೆಂಗಳೂರಿನ ವಿಂಡ್ಸರ್ ಮ್ಯಾನರ್ ನಲ್ಲಿ ಚಿತ್ರೀಕರಿಸಲಾಗಿದೆ.

ಈ ಸಂತಸದ ವಿಷಯವನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ ಚಿತ್ರತಂಡ. ವಿಂಡ್ಸರ್‌ಮ್ಯಾನರ್ ಹೋಟೆಲ್‌ಗೆ ತನ್ನದೇ ಆದ ವೈಭವದ ಇತಿಹಾಸವಿದ್ದು, ಆ ಹೋಟೆಲ್‌ನ ವಾಸ್ತುಶಿಲ್ಪವೂ ಸಹ ಬಹು ಭಿನ್ನವಾಗಿದೆ ಹಾಗಾಗಿ ಆ ಹೋಟೆಲ್‌ನಲ್ಲಿ ಚಿತ್ರೀಕರಿಸಿದ್ದು, ಚಿತ್ರಕ್ಕೆ ಧನಾತ್ಮಕ ಅಂಶವಾಗಿ ಪರಿಗಣಿಸಲಿದೆ ಎಂದಿದೆ ಚಿತ್ರತಂಡ.
'ವಿಂಡ್ಸ್‌ರ್‌ಮ್ಯಾನರ್ ನಲ್ಲಿ ಚಿತ್ರೀಕರಣ ಮಾಡಿದ ಅನುಭವ ಅದ್ಭುತವಾಗಿತ್ತು. ಕೆಲವು ದಶಕಗಳ ಹಿಂದೆ ಅಲ್ಲಿ ಚಿತ್ರೀಕರಿಸಲ್ಪಟ್ಟ ಸಿನಿಮಾಗಳು ಇತಿಹಾಸ ಸೃಷ್ಟಿಸಿವೆ. ಪುನೀತ್ ರಾಜ್‌ಕುಮಾರ್, ಆದಿತ್ಯ ಮೆನನ್, ಶ್ರೀಕಾಂತ್, ಮುಖೇಶ್ ರಿಶಿ ಒಳಗೊಂಡ ದೃಶ್ಯಗಳ ಚಿತ್ರೀಕರಣವನ್ನು ವಿಂಡ್ಸ್‌ರ್ ಮ್ಯಾನರ್ ಹೋಟೆಲ್‌ನಲ್ಲಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ಜೇಮ್ಸ್ ಸಿನಿಮಾದ ನಿರ್ದೇಶಕ ಚೇತನ್.


Click it and Unblock the Notifications











