Puneeth Rajkumar: ಬೆಂಗಳೂರು ಶಾಲೆ ಪರೀಕ್ಷೆಯಲ್ಲಿ ಅಪ್ಪು ಕುರಿತಾದ ಪ್ರಶ್ನೆ ಪತ್ರಿಕೆ!
ನಟ ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನ ಅಭಿಮಾನಿಗಳಿಗೆ ಎಂದಿಗೂ ಕಡಿಮೆ ಆಗುವುದಿಲ್ಲ ಎನಿಸುತ್ತೆ. ಅವರ ಮೇಲಿನ ಅಭಿಮಾನಕ್ಕೆ ಅಭಿಮಾನಿಗಳು ಒಂದಲ್ಲಾ ಒಂದು ವಿಶೇಷ ಕಾರ್ಯಗಳನ್ನು ಮಾಡುತ್ತಾ ಇರುತ್ತಾರೆ. ಅದರಲ್ಲೂ 'ಜೇಮ್ಸ್' ಚಿತ್ರದ ರಿಲೀಸ್ ಸಮಯಕ್ಕೆ ಸಾಕಷ್ಟು ಅಚ್ಚರಿಯ ಸಂಗತಿಗಳು ನಡೆದು ಬಿಟ್ಟವು.
ಅದರಲ್ಲಿ 'ಜೇಮ್ಸ್' ಚಿತ್ರವನ್ನು ನೋಡಲು ಶಾಲಾ ಕಾಲೇಜುಗಳಿಗೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನ ರಜೆ ಘೋಷಣೆ ಮಾಡಿದ್ದಾರೆ ಎನ್ನುವುದು. ಈ ಬಗ್ಗೆ ಸುದ್ದಿ ಮಾತ್ರ ಹರಿದಾಡಿಲ್ಲ. ಬದಲಿಗೆ ಚಿತ್ರದ ಪ್ರಧಾನಿಯೇ ಪ್ರಕಟಣೆ ಮಾಡಿರುವ ಹಾಗೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಬಳಿಕ ಕರ್ನಾಟಕದ ಶಾಲೆ ಒಂದರಲ್ಲಿ 'ಜೇಮ್ಸ್' ಚಿತ್ರವನ್ನು ನೋಡಲು ರಜೆ ಘೋಷಣೆ ಮಾಡಲಾಗಿದೆ ಎನ್ನುವ ಗಾಳಿ ಸುದ್ದಿ ಹಬ್ಬಿತು. ಈಗ ಮತ್ತೊಂದು ವಿಚಾರ ಹೆಚ್ಚಾಗಿ ಸದ್ದು ಮಾಡುತ್ತಾ ಇದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆ ಒಂದು ಹರಿದಾಡುತ್ತಾ ಇದೆ. ಅದರಲ್ಲಿ ನಟ ಪುನೀತ್ ರಾಜ್‌ಕುಮಾರ್ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.
Recommended Video


ಇದು ಆಶ್ಚರ್ಯ ಎನಿಸಿದರೂ ಕೂಡ ನಿಜ. ಬೆಂಗಳೂರಿನ ದಿ ನ್ಯೂ ಕ್ಯಾಂಬ್ರಿಡ್ಜ್ ಇಂಗ್ಲಿಷ್ ಸ್ಕೂಲ್ ಎಂಬ ಖಾಸಗಿ ಶಾಲೆಯಲ್ಲಿ ಪುನೀತ್ ರಾಜ್‌ಕುಮಾರ್ ಕುರಿತ ಪ್ರಶ್ನೆ ಕೇಳಲಾಗಿದೆ. 4ನೇ ತರಗತಿಯ ಕನ್ನಡ ಪರೀಕ್ಷೆಯಲ್ಲಿ ಪುನೀತ್ ಕುರಿತಂತೆ 80 ಅಂಕಗಳ ಪ್ರಶ್ನೆ ಕೇಳಲಾಗಿದೆ.
ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಪುನೀತ್ ರಾಜ್‌ಕುಮಾರ್ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಿದ್ದರು? ಪುನೀತ್ ರಾಜ್‌ಕುಮಾರ್ ಯಾವಾಗ ಜನಿಸಿದರು? ಪುನೀತ್ ರಾಜ್‌ಕುಮಾರ್ ಅವರ ತಂದೆಯ ಹೆಸರೇನು? ಪುನೀತ್ ರಾಜ್‌ಕುಮಾರ್ ಅವರ ತಾಯಿಯ ಹೆಸರೇನು? ಎನ್ನುವ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ.
ಪರೀಕ್ಷೆಯಲ್ಲಿ ಪುನೀತ್ ರಾಜ್‌ಕುಮಾರ್ ಕುರಿತಾದ ಪ್ರಶ್ನೆ ಪತ್ರಿಕೆ ವಿತರಣೆಯಾಗುತ್ತಿದ್ದಂತೆ ಅದರ ಫೋಟೋ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈ ಫೋಟೊ ವೈರಲ್ ಆಗಿದ್ದು, ಕೆಲವರೂ ಸಾಮಾಜಿಕ ಜಾಲತಾಣದಲ್ಲಿಯೇ ಉತ್ತರ ನೀಡಲು ಪ್ರಯತ್ನ ಮಾಡಿದ್ದಾರೆ.


Click it and Unblock the Notifications











